‘ಮಹಾನ್’ ಚಿತ್ರದ ಫಸ್ಟ್ ಲುಕ್ ಅನಾವರಣ

ಆಕಾಶಾ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದೂರು ನಿರ್ಮಿಸಿ, ಪಿ.ಸಿ.ಶೇಖರ್ ನಿರ್ದೇಶಿಸುತ್ತಿರುವ ‘ಮಹಾನ್’ ಚಿತ್ರದ ಪ್ರಮುಖ  ಕಲಾವಿದರ ಫಸ್ಟ್ ಲುಕ್ ಅನಾವರಣವಾಗಿದೆ.

ಶಿವರಾಜ್ ಕುಮಾರ್ ಮತ್ತು ವಿಜಯ್ ರಾಘವೇಂದ್ರ ನಟಿಸಿರುವ ‘ಮಹಾನ್’ ಚಿತ್ರದಲ್ಲಿ ಕನ್ನಡ ಚಿತ್ರರಂಗದ ನಟರಾದ ದೇವರಾಜ್, ರಮೇಶ್ ಭಟ್, ಅವಿನಾಶ್, ರಂಗಾಯಣ ರಘು, ಶರತ್ ಲೋಹಿತಾಶ್ವ ಹಾಗೂ ರಮೇಶ್ ಇಂದಿರಾ ನಟಿಸಿದ್ದಾರೆ.

ಹಳ್ಳಿಯ ಹಿತಾಸಕ್ತಿಯನ್ನು ಕಾಯುವ ಹಿರಿಯ ರೈತ ಮುಖಂಡನ ಪಾತ್ರದಲ್ಲಿ ರಂಗಾಯಣ ರಘು ಅವರು ಕಾಣಿಸಿಕೊಂಡಿದ್ದಾರೆ. ರಮೇಶ್ ಇಂದಿರಾ ಅವರು ಇನ್ ಸ್ಪೆಕ್ಟರ್ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲೇ ಪೊಲೀಸ್ ಪಾತ್ರಕ್ಕೆ ಹೆಸರುವಾಸಿಯಾದ ಹಿರಿಯ ನಟ ಡೈನಮಿಕ್ ಹೀರೋ ದೇವರಾಜ್   ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ.

ರಮೇಶ್ ಭಟ್ ಮಹಾನ್ ಚಿತ್ರದಲ್ಲಿ ಅನುಭವಿ ವೈದ್ಯರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಊರಿನ ಆಚರಣೆಗಳು, ದೈವಿಕ ಮೌಲ್ಯಗಳು, ಆಧ್ಯಾತ್ಮ ಚಿಂತನೆಗಳ ಮೂಲಕ ಜನರ ಮೇಲೆ ಪ್ರಭಾವ ಬೀರುವ ಧಾರ್ಮಿಕ ಗುರುವಿನ ಪಾತ್ರದಲ್ಲಿ ಹಿರಿಯ ಕಲಾವಿದ  ಶರತ್ ಲೋಹಿತಾಶ್ವ ನಟಿಸಿದ್ದು, ಅವರ ಹಿಂದಿನ ಎಲ್ಲಾ ಪಾತ್ರಗಳಿಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಹಳ್ಳಿಗೆ ಸೇನೆಯ ಮಹತ್ವವನ್ನು ಪರಿಚಯಿಸಿದ ಶಿಸ್ತಿನ ಸಿಪಾಯಿಯಾಗಿ ಅವಿನಾಶ್  ನಟಿಸಿದ್ದಾರೆ.

ವಿಜಯ ರಾಘವೇಂದ್ರ ಅವರು ರೈತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷಪಾತ್ರದಲ್ಲಿ ಶಿವರಾಜಕುಮಾರ್ ನಟಿಸಿದ್ದಾರೆ. ರಾಧಿಕಾ ನಾರಾಯಣ್, ಮಿತ್ರ, ನಮ್ರತಾ ಗೌಡ, ವರ್ಷ ಬೊಳ್ಳಮ್ಮ, ಕಿರಣ್ ಶ್ರೀನಿವಾಸ್  ಪ್ರಮುಖಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಅರ್ಜುನ್ ಜನ್ಯ ಸಂಗೀತ ನಿರ್ದೇಶನ,  ವಿ. ನಾಗೇಂದ್ರ ಪ್ರಸಾದ್ ಗೀತೆ ರಚನೆ, ಎಸ್. ವೈದಿ ಛಾಯಾಗ್ರಹಣ, ಪ್ರಶಾಂತ್ ರಾಜಪ್ಪ ಅವರ ಸಂಭಾಷಣೆ ಚಿತ್ರದಲ್ಲಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!