ಚಿತ್ರ ವಿಮರ್ಶೆ : ‘ಕಲರ್ ಫುಲ್’ ಲುಂಗಿ
ಗಾಂಧಿನಗರದ ಗಲ್ಲಿಗಳಲ್ಲಿ ಅಂಡೆಲೆಯದೆ ಚಿತ್ರ ಮಾಡೋದು ಅಸಾಧ್ಯ ಎಂಬ ಮಾತು ಒಂದು ಕಾಲದಲ್ಲಿತ್ತು. ಆದರೆ, ಕಾಲ ಬದಲಾಗಿದೆ ಗಾಂಧಿನಗರವನ್ನು ಪಕ್ಕಕ್ಕಿಟ್ಟು ತೆರೆಗೆ ಅಪ್ಪಳಿಸುವ ಕ್ವಾಲಿಟಿ&ಕಂಟೆಂಟ್ ಬೇಸ್ಡ್ ಚಿತ್ರಗಳ ಸಂಖ್ಯೆ ಹೆಚಾಗುತ್ತಿದೆ. ಅಂತಹ ಚಿತ್ರಗಳ ಸಾಲಿಗೆ ಸೇರುವ ಚಿತ್ರ ‘ಲುಂಗಿ’. ಕರಾವಳಿ ಮಂದಿಯ ಫೇವರೇಟ್ ಲುಂಗಿ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ದೇಶದ ಹಲವಾರು ರಾಜ್ಯಗಳಲ್ಲಿ ಸರ್ವಮಾನ್ಯವಾದ ದಿರಿಸು ಪಂಚೆ. ದಕ್ಷಿಣ ಭಾರತದ ಎಲ್ಲಾ ರಾಜ್ಯಗಳು, ಗುಜರಾತ್, ಬಿಹಾರ, ಪಂಜಾಬ್, ಪಶ್ಚಿಮ ಬಂಗಾಳ, ಉತ್ತರಪ್ರದೇಶ ಮುಂತಾದೆಡೆ ದಿನನಿತ್ಯ ಪಂಚೆಯನ್ನು ಬಳಸುವವರಿದ್ದಾರೆ. ಹಳೆ ಮುಖ್ಯಮಂತ್ರಿಗಳನ್ನು ಬಿಡಿ, ಈಗಿನ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಜೆಎಚ್ ಪಟೇಲ್, ತಮಿಳುನಾಡು, ಆಂಧ್ರಪ್ರದೇಶ, ಕೇರಳದ ಹೆಚ್ಚುಕಮ್ಮಿ ಎಲ್ಲಾ ಮುಖ್ಯಮಂತ್ರಿಗಳು ಪ್ಯಾಂಟ್ ಧರಿಸಿದ್ದನ್ನು ಕಂಡವರು ತುಂಬ ಕಮ್ಮಿ. ಲುಂಗಿ ಒಂಥರಾ ಮಲ್ಟೀಪರ್ಪಸ್. ಅದನ್ನು ಉಡಬಹುದು, ಬೆಡ್‍ಶೀಟ್‍ಥರ ಬಳಸಬಹುದು.. ಹೀಗೆ ಪಲ್ಟಿಪರ್ಪಸ್ ‘ಲುಂಗಿ’ಯ ಚಿತ್ರದೊಳಗೆ ಅಂಥಾದೇನಿದೆ ಗೊತ್ತಾ?
ಅದು ಕರಾವಳಿಯ ಸುಂದರ ಪರಿಸರ. ಅಲ್ಲಿ ನಾಡು-ನುಡಿ-ಸಂಸ್ಕೃತಿಯ ಕಡೆಗೆ ಒಲವಿಟ್ಟುಕೊಂಡು ಇಂಜಿನಿಯರಿಂಗ್ ಓದುತ್ತಿರುವ ಹುಡುಗನ ಹೆಸರು ರಕ್ಷಿತ್ ಶೆಟ್ಟಿ. ಓದಿನಲ್ಲಿ ಮುಂದಿರುವ ಈ ಹುಡುಗನನ್ನು ಇಂಜಿನಿಯರಿಂಗ್ ಮುಗಿಯುತ್ತಿದ್ದಂತೆ ವಿದೇಶಕ್ಕೆ ಕಳುಹಿಸಬೇಕು ಅನ್ನೋದು ಹೆತ್ತವರ ಕನಸು. ಆದರೆ, ಅವನಿಗೋ ತನ್ನ ಸ್ವಂತ ಊರಿನಲ್ಲೇ ಏನಾದರೂ ಸಾಧನೆ ಮಾಡಬೇಕು ಅನ್ನೋದು ದೊಡ್ಡ ಆಸೆ. ಒಂಥರಾ ಕರಾವಳಿ ಸಂಸ್ಕøತಿಯ ರಕ್ಷಕನಾಗುವ ಹಿರಿದಾಸೆ.
ತನ್ನ ಜೊತೆ ಓದಿದವರೆಲ್ಲರೂ ಇಂಜಿನಿಯರಿಂಗ್ ಮುಗಿಯುತ್ತಿದ್ದಂತೆ ಒಳ್ಳೆಯ ಕಂಪೆನಿಗಳಲ್ಲಿ ಜಾಬ್ ಗಿಟ್ಟಿಸಿಕೊಂಡು, ಲೈಫ್ನಲ್ಲಿ ಸೆಟಲ್ ಆಗುತ್ತಿದ್ದರೆ, ಈ ಹುಡುಗ ಮಾತ್ರ ಇಂಜಿನಿಯರಿಂಗ್ ಮುಗಿಸಿದ್ದರೂ, ಮನೆಯವರು, ಊರಿನವರ ಕಣ್ಣಿಗೆ ಬಾರದ ವೇಸ್ಟ್ ಬಾಡಿ ಥರ ಕಾಣುತ್ತಿರುತ್ತಾನೆ. ನಾಯಕನ್ನು ವೇಸ್ಟ್‍ಬಾಡಿ ಎಂದು ತೋರಿಸಲು ಒಂದು ಸಾಂಗ್ ಬಂದು ಹೋಗುತ್ತದೆ. ಒಮ್ಮೆ ಇಂಥ ಹುಡುಗನ ಕಣ್ಣಿಗೆ ಬೀಳುವ ಕಲರ್ ಕಲರ್ “ಲುಂಗಿ’ ಕೊನೆಗೆ ಈ ಹುಡುಗ ಲೈಫ್ ಅನ್ನೆ ಕಲರ್‌ಫುುಲ್ ಆಗಿ ಮಾಡುತ್ತಾದಾ.. ಅದೇ ಲುಂಗಿ ರಕ್ಷಿತ್‍ನ ಪ್ರೇಮವನ್ನು ರಕ್ಷಿಸುತ್ತದಾ.. ಚಿತ್ರ ನೋಡಬೇಕು.
ತೆರೆಮುಂದೆ, ತೆರೆಹಿಂದೆ ಬಹುತೇಕ ಹೊಸ ಪ್ರತಿಭೆಗಳಿಂದ ಮೂಡಿಬಂದಿರುವ “ಲುಂಗಿ’ ಚಿತ್ರದ ಕಥೆ ತಿರಾ ಸರಳ, ಬಟ್ ವಿರಳ! ಸರಳ ಕಥೆಯ, ವಿರಳ ಚಿತ್ರಕಥೆ ಮತ್ತು ನಿರೂಪಣೆ ಪ್ರೇಕ್ಷಕರಿಗೆ ಎಲ್ಲೂ ಬೋರ್ ಹೊಡೆಸದಂತೆ ಕೊನೆಯವರೆಗೂ ನೋಡಿಸಿಕೊಂಡು ಹೋಗಿ ಚಿತ್ರ ಕೊನೆಯಲ್ಲಿ ಒಂದು ಫೀಲ್ ಉಳಿಸಿಬಿಡುತ್ತದೆ.
ಚಿತ್ರದ ಸಂಭಾಷಣೆ, ಛಾಯಾಗ್ರಹಣ, ಹಿನ್ನೆಲೆ ಸಂಗೀತ ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್ಸ್. ಚಿತ್ರದ ಕೆಲವು ದೃಶ್ಯಗಳ ಓಪನಿಂಗ್ ಮತ್ತು ಎಂಡಿಂಗ್ ತಿರಾ ಲ್ಯಾಗ್ ಎಂದೆನಿಸುತ್ತದೆ. ದೃಶ್ಯಗಳ ಇಂಪಾರ್ಟೆನ್ಸ್ ಕಡೆ ಗಮನ ಕೊಡದೆ ಮೇಕಿಂಗ್ ಕಡೆ ಹೆಚ್ಚು ಗಮನಕೊಟ್ಟಿರೋದು ಇದಕ್ಕೆ ಕಾರಣವಿರಬಹುದು. ಚಿತ್ರದ ಮೇಕಿಂಗ್‍ಗಳಿಗೆ ಕೊಟ್ಟಷ್ಟೇ ಮಹತ್ವವನ್ನು, ಚಿತ್ರತಂಡ ಕೆಲ ಕುಸುರಿ ಕೆಲಸಗಳಿಗೆ ಕೊಟ್ಟಂತೆ ಕಾಣುತಿಲ್ಲ. ಇನ್ನು ಚಿತ್ರದ ಕಲಾವಿದರ ಬಗ್ಗೆ ಹೇಳುವುದಾದರೆ, ಚಿತ್ರದ ನಾಯಕ ಪ್ರಣವ್ ಹೆಗ್ಡೆ, ನಾಯಕಿಯರಾದ ಅಹಲ್ಯಾ ಸುರೇಶ್, ರಾಧಿಕಾ ರಾವ್ ತಮ್ಮ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ನಟಭಯಂಕರ ಪ್ರಣವ್ ಮುಂದಿನ ದಿನಗಳಲ್ಲಿ ಸಾಕಷ್ಟು ಚಿತ್ರ ಮಾಡುವ ಭರವಸೆ ಮೂಡಿಸುತ್ತಾರೆ. ಪ್ರಣವ್ ನಟನೆಯ ಹಿಂದೆ ಇಬ್ಬರು ನಿರ್ದೇಶಕರ ಶ್ರಮ ಎದ್ದು ಕಾಣುತ್ತದೆ. ಕ್ಯಾಮರಾ ಎದುರಿಸುವ ಮೊದಲು ಪ್ರಣವ್ ಸಾಕಷ್ಟು ತಯಾರಿ ನಡೆಸಿರೋದು ಅವರ ಪ್ರತೀ ಎಕ್ಸ್‍ಪ್ರಾಶನ್‍ನಲ್ಲೂ ದಾಖಲಾಗುತ್ತದೆ.
ಉಳಿದಂತೆ ಇತರ ಕಲಾವಿದರು ಕೂಡ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಒಟ್ಟಾರೆ ಚಿತ್ರದ ಅಲ್ಲಲ್ಲಿ ಕಾಣುವ ಕೆಲವೊಂದು ಒಪ್ಪಬಹುದಾದ ತಪ್ಪುಗಳನ್ನು ಬದಿಗಿಟ್ಟು ನೋಡುವುದಾದರೆ, ಲುಂಗಿ ಎಲ್ಲಿಯೂ ನಿರಾಸೆ ಮೂಡಿಸುವುದಿಲ್ಲ. ಪ್ರತಿಭಾ ಪಲಾಯನವನ್ನು ವಸ್ತುವಾಗಿಟ್ಟುಕೊಂಡು ಬಂದಿರುವ ಚಿತ್ರ ಮನೋರಂಜನೆಯ ಜೊತೆಜೊತೆಗೆ ಇಂದಿನ ಯುವಪೀಳಿಗೆಗೆ ಒಂದು ಮಹತ್ವದ ಸಂದೇಶವನ್ನೂ ನೀಡುತ್ತದೆ.
ತಮ್ಮ ಚೊಚ್ಚಲ ಚಿತ್ರದಲ್ಲೇ ಸೈ ಅನ್ನಿಸಿಕೊಂಡಿರುವ ನವ ನಿರ್ದೇಶಕರಾದ ಅರ್ಜುನ್ ಲೂಯಿಸ್ ಮತ್ತು ಅಕ್ಷಿತ್ ಶೆಟ್ಟಿ ಸಧ್ಯದಲ್ಲೇ ಇನ್ನೊಂದು ವಿಭಿನ್ನ ಸ್ಕ್ರಿಪ್ಟ್‍ನೊಂದಿಗೆ ಕನ್ನಡಿಗರ ಎದುರಾಗುವ ಸೂಚನೆ ಕೊಟ್ಟಿದ್ದಾರೆ. ಲಿರಿಕ್ ರೈಟರ್ ಆಗಿ ಗುರಿತಿಸಿಕೊಂಡಿದ್ದ ಅರ್ಜನ್ ಅವರ ಟ್ಯಾಲೆಂಟ್ ಗಮನಿಸಿ ನಿರ್ದೇಶಕರಾಗಿ ಭಡ್ತಿ ಕೊಟ್ಟ ಮುಕೇಶ್ ಹೆಗ್ಡೆಯವರ ಸಾಹಸ ಮೆಚ್ಚುವಂತದ್ದು. ಅಂದಹಾಗೆ, ಲುಂಗಿ ಚಿತ್ರದ ಸಬ್‍ಟೈಟಲ್ ಮೊದಲು ‘ಬನ್ನಿ ಎತ್ತಿ ತೋರಿಸೋಣ’ ಎಂದಿತ್ತು.. ನಂತರದಲ್ಲಿ ಅದು `ಪ್ರೀತಿ-ಸಂಸ್ಕøತಿ-ಸೌಂದರ್ಯ’ ಎಂದು ಬದಲಾಯ್ತು. ಚಿತ್ರ ನೋಡಿದ ಮೇಲೆ ಚಿತ್ರತಂಡ `ಪ್ರೀತಿ-ಸಂಸ್ಕøತಿ-ಸೌಂದರ್ಯ’ವನ್ನು ಎತ್ತಿ ತೋರಿಸುವ ಪ್ರಮಾಣಿಕ ಪ್ರಯತ್ನ ಮಾಡಿದೆ. ಅಲ್ಲಿಗೆ, ಎರಡೂ ಸಬ್‍ಟೈಟಲ್‍ಗಳೂ ಹೆಚ್ಚು ಸೂಕ್ತ!
@bcinemas.in
Pingback: 메이저놀이터