Love: ಅಕ್ಟೋಬರ್ 6ಕ್ಕೆ ಲವ್ ರಿಲೀಸ್

ಹೊಸ ಕಲಾವಿದರನ್ನು ಒಳಗೊಂಡ ಲವ್ ಚಿತ್ರ ಅಕ್ಟೋಬರ್ 6ರಂದು ತೆರೆಗೆ ಬರಲಿದೆ.

ಮಹೇಶ ಸಿ ಅಮ್ಮಳ್ಳಿದೊಡ್ಡಿ ನಿರ್ದೇಶನದ ಲವ್ ಚಿತ್ರದ ಟ್ರೈಲರ್ ಇತ್ತೀಚೆಗೆ ರಿಲೀಸ್ ಆಗಿತ್ತು. ನೈಜ ಘಟನೆಯಿಂದ ಸ್ಫೂರ್ತಿಗೊಂಡು ಈ ಚಿತ್ರದ ಕಥೆ ಹೆಣೆಯಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಸಿನಿಮಾ ಈಗಾಗಲೇ ಸೆನ್ಸಾರ್ ಆಗಿದೆ. ಜನವರಿಯಲ್ಲಿ ಶೂಟಿಂಗ್ ಆರಂಭಗೊಂಡಿದ್ದು ಮಾರ್ಚ್ ತಿಂಗಳಲ್ಲಿ ಪೂರ್ಣಗೊಂಡಿದೆ..ಹೊಸಬರಿಗೆ ಮಾಸ್ ಸಿನಿಮಾಗಳು ಸರಿ ಹೊಂದುವುದಿಲ್ಲ ಎನ್ನುವ ಕಾರಣಕ್ಕೆ ಲವ್ ಜಾನರ್ ಸಿನಿಮಾ ಮಾಡಲಾಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ.

ಚಿತ್ರದಲ್ಲಿ ಪ್ರಜಯ್ ಜಯರಾಮ್ ನಾಯಕ ನಟ ಆಗಿ ಕಾಣಿಸಿಕೊಂಡಿದ್ದಾರೆ. ವೃಷ ಪಾಟೀಲ್ ನಾಯಕಿಯಾಗಿ ನಟಿಸಿದ್ದಾರೆ. ಇಬ್ಬರಿಗೂ ಇದು ಮೊದಲ ಸಿನಿಮಾ ಆಗಿದೆ.

ಶ್ರೀ ಕಾಲಭೈರವೇಶ್ವರ ಮೂವಿ ಮೇಕರ್ಸ್ ನಡಿ ದಿವಾಕರ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಸಿದ್ದಾರ್ಥ್ ಅವರ ಛಾಯಾಗ್ರಹಣ ಇದೆ. ರೋಸಿತ್ ವಿಜಯನ್, ಶ್ರೀ ಸಾಯಿ ಕಿರಣ್ ಅವರ ಸಂಗೀತ, ಶಿವಪ್ರಸಾದ್ ಅವರ ಹಿನ್ನೆಲೆ ಸಂಗೀತ, ಪುಟ್ಟೇಗೌಡ ಸಂಕಲನ ಇದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!