Lineman: ಶೀಘ್ರ ಲೈನ್ ಮ್ಯಾನ್ ಚಿತ್ರ ತೆರೆಗೆ

ರಘು ಶಾಸ್ತ್ರಿ ನಿರ್ದೇಶನದ ಲೈನ್ ಮ್ಯಾನ್ ಚಿತ್ರ ಶೀಘ್ರ ತೆರೆಗೆ ಬರಲಿದೆ.

ಈಗಾಗಲೇ ಚಿತ್ರದ ಶೂಟಿಂಗ್ ಮುಕ್ತಾಯ ಆಗಿದ್ದು, ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು ಸರ್ಟಿಫಿಕೇಟ್ ನೀಡಿದೆ. ಚಿತ್ರ ವಿದ್ಯುತ್ ಸಮಸ್ಯೆ ಸರಿಪಡಿಸುವ ಲೈನ್ ಮ್ಯಾನ್ ಬದುಕಿನ ಕಥೆಯನ್ನು ಹೊಂದಿದೆ.

ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಬಿಂಡಿಗನವಿಲೆ, ಅಜಯ್ ಅಪರೂಪ್ ನಿರ್ಮಿಸಿರುವ ಈ ಚಿತ್ರದಲ್ಲಿ ತ್ರಿಗುಣ ಅವರು ನಾಯಕ ನಟ ಆಗಿ ನಡೆಸುತ್ತಿದ್ದಾರೆ. ಲೈನ್ ಮ್ಯಾನ್ ಆಗಿ ಚಿತ್ರದಲ್ಲಿ ತ್ರಿಗುಣ ಅವರು ಕಾಣಿಸಿಕೊಂಡಿದ್ದಾರೆ.

ರಾಮ್ ಗೋಪಾಲ್ ವರ್ಮಾ ನಿರ್ದೇಶನದ ತೆಲುಗಿನ ಕೊಂಡ ಚಿತ್ರ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ತ್ರಿಗುಣ ಅವರು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೆಜ್ಜೆ ಇಡುತ್ತಿದ್ದಾರೆ.

ಕಾಜಲ್ ಕುಂದರ್ ನಾಯಕಿ ಆಗಿ ನಟಿಸಿದ್ದಾರೆ. ಬಿ ಜಯಶ್ರೀ, ಮೈಕೋ ನಾಗರಾಜ್, ಹರಿಣಿ, ಅಂಜಲಿ, ಅಪೂರ್ವ ಶ್ರೀ ಸೇರಿದಂತೆ ದೊಡ್ಡ ತಾರಾ ಗಣ ಚಿತ್ರದಲ್ಲಿ ನಟಿಸಿದೆ.

ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿವೆ. ಮಣಿಕಾಂತ್ ಕದ್ರಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಶಾಂತಿ ಸಾಗರ್ ಛಾಯಾಗ್ರಹಣ ಚಿತ್ರಕ್ಕಿದೆ. ರಘು ಶಾಸ್ತ್ರಿ ಹಾಗೂ ಮಣಿಕಾಂತ್ ಕದ್ರಿ ಅವರ ಸಹ ನಿರ್ಮಾಣ ಇದೆ.

ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಚಿತ್ರ ತಯಾರಾಗಿದ್ದು, ಚಿತ್ರ ಬಿಡುಗಡೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಚಾಮರಾಜನಗರ, ಚಂದಕವಾಡಿಯಲ್ಲಿ ಶೂಟಿಂಗ್ ನಡೆಸಲಾಗಿದೆ. ಭಿನ್ನ, ಡಿಯರ್ ಸತ್ಯ ಚಿತ್ರ ನಿರ್ಮಾಣ ಮಾಡಿರುವ ಪರ್ಪಲ್ ರಾಕ್ ಸಂಸ್ಥೆಯ ಮೂರನೇ ಚಿತ್ರ ಇದಾಗಿದೆ. ಟಕ್ಕರ್ ಹಾಗೂ ರನ್ ಅಂತೋನಿ ಚಿತ್ರ ನಿರ್ದೇಶನ ಮಾಡಿದ ರಘು ಶಾಸ್ತ್ರಿ ಈ ಚಿತ್ರದ ಮೂಲಕ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!