ಕುತೂಹಲ ಮೂಡಿಸಿದ ‘ಟೆರರಿಸ್ಟ್​’ ಸಿನಿಮಾ ಟ್ರೈಲರ್​

ರಂಗಭೂಮಿ, ಕಿರುತೆರೆಯ ನಟರನ್ನು ಬಳಸಿಕೊಂಡು ‘ಟೆರರಿಸ್ಟ್​’ ಎಂಬ ಸಿನಿಮಾ ಮಾಡಹೊರಟಿರುವ  ನಿರ್ದೇಶಕ ಪಿ.ಸಿ. ಶೇಖರ್ ವಿಭಿನ್ನವಾದ ಪೋಸ್ಟರ್​ಗಳಿಂದಲೇ ನಿರೀಕ್ಷೆ ಹುಟ್ಟುಹಾಕಿದ್ದರು. ಇದೀಗ, ಆ ಸಿನಿಮಾದ ಟ್ರೈಲರ್​ ಬಿಡುಗಡೆಯಾಗಿದ್ದು, ಸಿನಿಮಾದ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಿರುವುದು ಸುಳ್ಳಲ್ಲ.

ಮಹಿಳಾ ಪ್ರಧಾನಿ ಸಿನಿಮಾವಾಗಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಹಲವಾರು ರಂಗಭೂಮಿ, ಕಿರುತೆರೆ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ನಿನ್ನೆ ಸಂಜೆ ಮಂತ್ರಿ ಮಾಲ್​ನಲ್ಲಿ ನಟ ರಕ್ಷಿತ್​ ಶೆಟ್ಟಿ ‘ಟೆರರಿಸ್ಟ್​’ ಸಿನಿಮಾದ ಟ್ರೈಲರ್​ ಬಿಡುಗಡೆ ಮಾಡಿದ್ದಾರೆ.

ರಾಗಿಣಿಯ ಜೊತೆಗೆ ರಂಗಭೂಮಿ ನಟರಾದ ಬಾಲಾಜಿ ಮನೋಹರ್​, ಮನು ಹೆಗಡೆ, ಪದ್ಮಾ ಶಿವಮೊಗ್ಗ, ನಟ ಶ್ರೀಕಾಂತ್​ ಗಣೇಶ್​, ಕಿರುತೆರೆ ನಟಿ ಅಪೂರ್ವ ಮುಂತಾದವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಮಿಯೋ, ರಾಗ ಮುಂತಾದ ಕನ್ನಡ ಚಿತ್ರಗಳನ್ನು ನೀಡಿರುವ ಪಿ.ಸಿ. ಶೇಖರ್​ ಅವರ ಹೊಸ ಸಿನಿಮಾ ‘ಟೆರರಿಸ್ಟ್​’ ಟ್ರೈಲರ್​ ಇಲ್ಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!