22 ಕೋಟಿ ಕ್ಲಬ್‌ಗೆ ‘ಕೆಡಿ’ ಎಂಟ್ರಿ

ಪ್ರೇಮ್ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಾಂಬಿನೇಷನ್‌ನ ಬಹುನಿರೀಕ್ಷಿತ ‘ಕೆಡಿ: ದಿ ಡೆವಿಲ್’ ಸಿನಿಮಾದ ಕಲೆಕ್ಷನ್ 22 ಕೋಟಿ ರೂಪಾಯಿ  ದಾಟಿದೆ.

ಕೆಡಿ: ದಿ ಡೆವಿಲ್’ ಸಿನಿಮಾ ಬಿಡುಗಡೆಯಾಗಿ ಮೂರು ವಾರಗಳು ಕಳೆದರೂ ಬಾಕ್ಸ್ ಆಫೀಸ್‌ನಲ್ಲಿ  ಓಟ ಮುಂದುವರಿಸಿದೆ. ಬೆಂಗಳೂರು ಭೂಗತ ಜಗತ್ತಿನ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆಗೆ ರೀಷ್ಮಾ, ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಇದುವರೆಗೆ 10,795ಕ್ಕೂ ಹೆಚ್ಚು ಶೋಗಳು ಸಿಕ್ಕಿದೆ. ಮೂರನೇ ಭಾನುವಾರವೂ ಸಿನಿಮಾ 39 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಟಿವಿ ಹಾಗೂ ಒಟಿಟಿ ಹಕ್ಕುಗಳ ಮಾರಾಟದಿಂದ ಸಿನಿಮಾಗೆ ಮತ್ತಷ್ಟು ಲಾಭ ಸಿಗುವ ನಿರೀಕ್ಷೆ ಇದೆ.

ಚಿತ್ರ ಬಿಡುಗಡೆಯ ಮುನ್ನ ‘ಸೆರಗ ಸರ್ಸೆ’ ಹಾಡು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ರಾಷ್ಟ್ರೀಯ ಮಹಿಳಾ ಆಯೋಗಕ್ಕೆ  ದೂರು ಸಲ್ಲಿಕೆಯಾಗುತ್ತಿದ್ದಂತೆ ಚಿತ್ರತಂಡ ಹಾಡನ್ನು ಸಿನಿಮಾದಲ್ಲಿಯೂ ಡಿಲೀಟ್ ಮಾಡಿತ್ತು.  ಟ್ರೇಲರ್‌ನ ಕೆಲವು ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿತ್ತು.

ವಿವಾದಗಳ ನಡುವೆಯೂ ‘ಕೆಡಿ’ ಸಿನಿಮಾಕ್ಕೆ ಧ್ರುವ ಸರ್ಜಾ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ವಿವಾದಗಳೇ ಚಿತ್ರದ ಕಲೆಕ್ಷನ್ ಗೆ ನೆರವಾದವು ಎನ್ನಲಾಗುತ್ತಿದೆ.

—–

 

Be the first to comment

Leave a Reply

Your email address will not be published. Required fields are marked *

Translate »
error: Content is protected !!