‘ಕರುಪ್ಪು’ ಭರ್ಜರಿ ಕಲೆಕ್ಷನ್

ಸ್ಟಾರ್ ನಟ ಸೂರ್ಯ ಹಾಗೂ ತ್ರಿಷಾ ಕೃಷ್ಣನ್ ಅಭಿನಯದ ‘ಕರುಪ್ಪು’ ತಮಿಳು ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕೇವಲ ಮೂರು ದಿನಗಳಲ್ಲಿ 120 ಕೋಟಿ ರೂಪಾಯಿ ಕಲೆಕ್ಷನ್  ಮಾಡಿ ದಾಖಲೆ ಬರೆದಿದೆ.

ಚಿತ್ರದ ಗಳಿಕೆ  ಮೊದಲ ದಿನ 15.50 ಕೋಟಿ, ಎರಡನೇ ದಿನ 24.15 ಕೋಟಿ, ಮೂರನೇ ದಿನ 28.35 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಭಾರತದಲ್ಲಿ ಸಿನಿಮಾ 68 ಕೋಟಿ ರೂಪಾಯಿ ನೆಟ್  ಕಲೆಕ್ಷನ್ ಮಾಡಿದ್ದು, ವಿದೇಶದಲ್ಲಿ 42 ಕೋಟಿ ರೂಪಾಯಿ ಗಳಿಕೆ ಕಂಡಿದೆ.

ಆರ್.ಜೆ. ಬಾಲಾಜಿ ನಿರ್ದೇಶನದ ಫ್ಯಾಂಟಸಿ ಆಕ್ಷನ್ ಡ್ರಾಮಾ ಸಿನಿಮಾ ‘ಕರುಪ್ಪು’ ತ್ರಿಷಾ ಅವರನ್ನು ಗಮನದಲ್ಲಿಟ್ಟುಕೊಂಡೇ ಕಥೆ ರೂಪಿಸಲಾಗಿತ್ತು. ಬಳಿಕ ಕಥೆಗೆ ಮಾಸ್ ಹಾಗೂ ಕಮರ್ಷಿಯಲ್ ಅಂಶಗಳನ್ನು ಸೇರಿಸಿ ಸೂರ್ಯ ಅವರಿಗೆ ಹೇಳಲಾಗಿತ್ತು. ಸಿನಿಮಾ ಸೂರ್ಯ ಅವರ ವೃತ್ತಿಜೀವನಕ್ಕೆ  ದೊಡ್ಡ ಗೆಲುವು ತಂದುಕೊಟ್ಟಿದೆ.

‘ಕರುಪ್ಪು’ ಸಿನಿಮಾ ಬಿಡುಗಡೆಯ ಹಾದಿ  ಸುಲಭವಾಗಿರಲಿಲ್ಲ. ಶೂಟಿಂಗ್ ವೇಳೆ ಅನುಮತಿ ಸಮಸ್ಯೆಯಿಂದ ಚೆನ್ನೈ ಸಮೀಪ ಪೊಲೀಸರು ಚಿತ್ರೀಕರಣ ತಡೆದಿದ್ದರು. ಬಿಡುಗಡೆಯ ದಿನ  ಹಣಕಾಸು, ವಿತರಣಾ ಬಿಕ್ಕಟ್ಟಿನಿಂದ ಮುಂಜಾನೆಯ ಶೋಗಳು ರದ್ದಾಗಿದ್ದವು.  ಕೊನೆಗೆ ಸೂರ್ಯ ಮತ್ತು ಚಿತ್ರತಂಡದ ಪ್ರಯತ್ನದಿಂದ ಎಲ್ಲಾ ಸಮಸ್ಯೆಗಳು ಬಗೆಹರಿದು ಮೇ 15ರಂದು ಸಿನಿಮಾ ಯಶಸ್ವಿಯಾಗಿ ಬಿಡುಗಡೆಯಾಯಿತು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!