ಬಿಗ್ ಬಾಸ್ 10ನೇ ಸೀಸನ್‌ ಗೆದ್ದ ಕಾರ್ತಿಕ್

ಬಿಗ್‌ಬಾಸ್‌ ಕನ್ನಡ 10ನೇ ಸೀಸನ್‌ನಲ್ಲಿ ಕಾರ್ತಿಕ್ ಮಹೇಶ್‌ ಅವರು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ಕಾರ್ತಿಕ್​ಗೆ ಬಿಗ್ ಬಾಸ್​  ಆಕರ್ಷಕ ಟ್ರೋಫಿ, 50 ಲಕ್ಷ ರೂಪಾಯಿ, ಮಾರುತಿ ಸುಜುಕಿ ಬ್ರೇಜಾ ಕಾರು ಹಾಗೂ ಇಲೆಕ್ಟ್ರಿಕ್ ಬೌನ್ಸ್ ಸ್ಕೂಟರ್ ಸಿಕ್ಕಿದೆ.

ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿದ್ದು, ಸಂಗೀತ ಶೃಂಗೇರಿಗೆ ಮೂರನೇ ಸ್ಥಾನ ದೊರೆತಿದೆ. ಡ್ರೋನ್ ಪ್ರತಾಪ್ ಅವರಿಗೆ 10 ಲಕ್ಷ ರೂ., ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ಬಹುಮಾನವಾಗಿ ನೀಡಲಾಗಿದೆ. ಎರಡನೇ ರನ್ನರ್ ಅಪ್ ಆಗಿರುವ ಸಂಗೀತಾ ಶೃಂಗೇರಿ ಅವರಿಗೆ 7 ಲಕ್ಷ ರೂ. ಬಹುಮಾನ ಸಿಕ್ಕಿದೆ.

ಕಾರ್ತಿಕ್ ಮಹೇಶ್ ಅವರು ಈ ಹಣವನ್ನು  ಬೆಂಗಳೂರಿನಲ್ಲಿ ತಾಯಿಗಾಗಿ ಪುಟ್ಟ ಮನೆ ಕಟ್ಟಲು ಬಳಕೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಪ್ರತಾಪ್ ಅವರು ಈ ಹಣವನ್ನು ಒಳ್ಳೆಯ ಕೆಲಸಕ್ಕೆ ಬಳಕೆ ಮಾಡಿಕೊಳ್ಳುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಅವರು ವಿನರ್ ಯಾರು ಎಂದು ಘೋಷಿಸುವುದಕ್ಕೂ ಮೊದಲು ವೋಟ್​ಗಳನ್ನು ರಿವೀಲ್ ಮಾಡಿದರು.

‘ಟಾಪ್ ಆರರಲ್ಲಿ ಇರುವವರ ವೋಟ್ ಸೇರಿದರೆ 10 ಕೋಟಿಗೂ ಮೇಲಿರಲಿದೆ. ರನ್ನರ್​ ಅಪ್​ಗೆ ಸಿಕ್ಕ ವೋಟ್ 2,20,04,202, ವಿನ್ನರ್​ಗೆ ಸಿಕ್ಕ ವೋಟ್ 2, 97,39,904. ಅವರು ಇಷ್ಟ, ಇವರು ಇಷ್ಟ ಎಂದು ನಾವು ವಿನ್ ಮಾಡ್ಸಲ್ಲ. ಯಾರಿಗೆ ಹೆಚ್ಚು ವೋಟ್ ಬಿದ್ದಿದೆಯೋ ಅವರನ್ನೇ ಗೆಲ್ಲಿಸುತ್ತೇವೆ. ಅದನ್ನು ಯಾರೂ ಡಿಬೇಟ್ ಮಾಡಲು ಸಾಧ್ಯವಿಲ್ಲ’ ಎಂದ ಸುದೀಪ್ ಕೊನೆಯಲ್ಲಿ ಕಾರ್ತಿಕ್​ ಕೈ ಎತ್ತಿದರು.

1 ಕೋಟಿಗೂ ಕಡಿಮೆ ಮತ ಪಡೆದ ತುಕಾಲಿ ಸಂತೋಷ್ 6ನೇಯವರಾಗಿ ಹೊರಬಿದ್ದರೆ, ವರ್ತೂರು ಸಂತೋಷ್ 5, ವಿನಯ್ ಗೌಡ 4, ಸಂಗೀತಾ 3ನೇ ಸ್ಥಾನದೊಂದಿಗೆ ಹೊರಬಿದ್ದು ನಿರಾಸೆ ಹೊಂದಿದರು.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!