ಫೆ.23ಕ್ಕೆ ‘ಫಾರ್​ ರಿಜಿಸ್ಟ್ರೇಷನ್​’ ತೆರೆಗೆ

ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್‌ ಮುಖ್ಯಭೂಮಿಕೆಯಲ್ಲಿರುವ ‘ಫಾರ್‌ ರಿಜಿಸ್ಟ್ರೇಷನ್‌’ ಚಿತ್ರ ಫೆ. 23ರಂದು ಬಿಡುಗಡೆ ಆಗಲಿದೆ.

ಚಿತ್ರ ಬಿಡುಗಡೆ ಕುರಿತು ಮಾಹಿತಿ ನೀಡಿದ ನಿರ್ದೇಶಕ ನವೀನ್ ದ್ವಾರಕನಾಥ್, ‘ನಮಗೆ ಇದೊಂದು ರೀತಿ ಸವಾಲಿನ ಸಮಯ. ತುಂಬಾ ಕಾರಣಗಳಿಂದ ಸಿನಿಮಾ ಬಿಡುಗಡೆ ತಡವಾಯ್ತು’ ಎಂದರು.

”ದಿಯಾ’ಗೂ ಮೊದಲು ಸಹಿ ಮಾಡಿದ ಚಿತ್ರ ‘ಫಾರ್​ ರಿಜಿಸ್ಟ್ರೇಷನ್​’.  ನನ್ನ ತುಳು ಚಿತ್ರ ಬಿಡುಗಡೆಗೊಂಡಾಗ ನಿರ್ದೇಶಕರ ಪ‍ರಿಚಯವಾಯಿತು. ಸಂಬಂಧಗಳು ಸರಿಯಾದ ರೀತಿ ರಿಜಿಸ್ಟರ್ ಆಗಬೇಕು ಎಂಬುದನ್ನು ಚಿತ್ರದಲ್ಲಿ ತುಂಬಾ ಸೂಕ್ಷ್ಮವಾಗಿ ಹೇಳಲಾಗಿದೆ” ಎಂದಿದ್ದಾರೆ ನಟ ಪೃಥ್ವಿ ಅಂಬಾರ್.

ಚಿತ್ರಕ್ಕೆ ನವೀನ್ ರಾವ್  ಬಂಡವಾಳ ಹೂಡಿದ್ದಾರೆ. ಆರ್‌.ಕೆ ಹರೀಶ್‌ ಸಂಗೀತ ಸಂಯೋಜನೆ, ಅಭಿಲಾಷ್‌ ಕಲಾತಿ-ಅಭಿಷೇಕ್‌ ಜಿ.ಕಾಸರಗೋಡು ಛಾಯಾಗ್ರಹಣ, ಮನು ಶೇಡ್ಗರ್‌ ಸಂಕಲನ ಚಿತ್ರಕ್ಕಿದೆ. ರವಿಶಂಕರ್‌, ತಬಲಾ ನಾಣಿ, ಸುಧಾ ಬೆಳವಾಡಿ ಮೊದಲಾದವರು ಚಿತ್ರದಲ್ಲಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!