ಡಬ್ಬಿಂಗ್ ಕಾರ್ಯದಲ್ಲಿ ಕರ್ಷಣಂ

ಸಸ್ಪೆನ್ಸ್ ಥ್ರಿಲ್ಲರ್ ಕಥಾನಕ ಹೊಂದಿರುವ ಧನಂಜಯ ಅತ್ರೆ ನಾಯಕನಾಗಿರುವ ಕರ್ಷಣಂ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಅಖಂಡ ಐವತೈದು ದಿನಗಳ ಕಾಲ ಅಂದುಕೊಂಡಂತೆಯೇ ದೃಷ್ಯ ಕಟ್ಟಿದ ಖುಷಿಯಲ್ಲಿರೋ ಚಿತ್ರ ತಂಡದಸ ಪಾಲಿಗೆ ಚಿತ್ರೀಕರಣದ ಕ್ಷಣಗಳೆಲ್ಲವೂ ರಸಘಳಿಗೆಗಳೇ. ಅಷ್ಟಕ್ಕೂ ಚಿತ್ರೀಕರಣ ನಡೆದ ರೀತಿ, ಅದಕ್ಕಾಗಿ ಆಯ್ದುಕೊಂಡಿರೋ ಸ್ಥಳಗಳದ್ದೇ ರಸವತ್ತಾದ ಕಥೆಯಿದೆ!

ಹೆಚ್ಚಾಗಿ ಬೆಂಗಳೂರಿನ ಪ್ರದೇಶದಲ್ಲಿಯೇ ಚಿತ್ರೀಕರಣ ನಡೆಸಿದ್ದರೂ ಅಷ್ಟಾಗಿ ಬಹುತೇಕರಿಗೆ ಪರಿಚಯವಿಲ್ಲದ ಪ್ರದೇಶಗಳನ್ನೇ ನಿರ್ದೇಶಕ ಶರವಣ ಆಯ್ದುಕೊಂಡಿದ್ದಾರೆ. ನಾಯಕ ಕಂ ನಿರ್ಮಾಪಕ ಧನಂಜಯ ಅತ್ರೆ ಅವರ ಸಂಪೂರ್ಣ ಸಹಕಾರದೊಂದಿಗೆ ಮುಖ್ಯರಸ್ತೆಯ ಮೇಲಷ್ಟೇ ಗಮನ ಹರಿಸೋ ಖುದ್ದು ಬೆಂಗಳೂರಿಗರೇ ಅಚ್ಚರಿ ಪಡುವಂಥಾ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆಯಂತೆ. ಸದ್ಯ ಕರ್ಷಣಂ ಚಿತ್ರಕ್ಕೆ ಡಬ್ಬಿಂಗ್ ಕಾರ್ಯ ನೆರವೇರುತ್ತಿದೆ.
ಈ ಚಿತ್ರದ ನಾಯಕ ಸ್ಲಂ ವಾಸಿಯಾಗಿರೋ ದೃಷ್ಯಗಳೂ ಇರುವುದರಿಂದ ಅದಕ್ಕೆ ಸೂಟ್ ಆಗುವಂಥಾ ನಿಜವಾದ ಸ್ಲಂ ಒಂದರ ಅವಶ್ಯಕತೆ ಇತ್ತು. ಅದಕ್ಕೆ ಅತ್ರೆ ಆಯ್ದುಕೊಂಡಿದ್ದ ನಾಯಂಡಹಳ್ಳಿ ಬಳಿ ಇರುವ ಪಂತರಪಾಳ್ಯ ಸ್ಲಂ ಏರಿಯಾವನ್ನು. ಈ ಪ್ರದೇಶದಲ್ಲಿಯೇ ಮುಖ್ಯ ಭಾಗಗಳ ಚಿತ್ರೀಕರಣ ನಡೆಸಲಾಗಿದೆ. ಇಲ್ಲಿಯೇ ನಾಯಕನ ಇಂಟ್ರಾಡಕ್ಷನ್ ಸಾಂಗ್ ಸೇರಿದಂತೆ ಒಂದಷ್ಟು ಭಾಗಗಳ ಚಿತ್ರೀಕರಣ ನಡೆಸಲಾಗಿದೆ.

ಇನ್ನುಳಿದಂತೆ `ಬೆಳದಿಂಗಳು’ ಎಂಬ ಇನ್ನೊಂದು ಹಾಡಿನ ಚಿತ್ರೀಕರಣವನ್ನು ಅಪಾರ್ಟ್‍ಮೆಂಟೊಂದರಲ್ಲಿ ನಡೆಸಲಾಗಿದೆ. ಕಥೆಯನ್ನು ಹಾಡಿನ ಮೂಲಕವೇ ಹೇಳುವಂಥಾ ಪ್ರಯತ್ನ ಕೂಡಾ ಈ ಚಿತ್ರದಲ್ಲಿ ನಡೆದಿದೆ. ಇನ್ನೊಂದು ಹಾಡು ನಾಯಕ ಕೊಲೆಯೊಂದರ ಇನ್ವೆಸ್ಟಿಗೇಷನ್ ನಡೆಸೋ ಹಂತಗಳನ್ನು ವಿವರಿಸುವಂತಿದೆಯಂತೆ. ಇಂಥಾ ಭಿನ್ನ ಪ್ರಯೋಗದ ಮೂಲಕವೇ ಗಾಯಕ ಹೇಮಮತ್ ಈ ಚಿತ್ರದೊಂದಿಗೆ ಸಂಗೀತ ನಿರ್ದೇಶಕರಾಗಿಯೂ ಹೊರ ಹೊಮ್ಮಿದ್ದಾರೆ. ಇದುವರೆಗೆ ಗಾಯಕನಾಗಿ ಪ್ರಸಿದ್ಧಿ ಪಡೆದಿದ್ದ ಹೇಮಂತ್ ಈ ಮೂಲಕ ಸಂಗೀತ ನಿರ್ದೇಶಕನಾಗಿಯೂ ಭಡ್ತಿ ಪಡೆದಿದ್ದಾರೆ. ಈ ಚಿತ್ರದಲ್ಲಿನ ಒಟ್ಟಾರೆ ನಾಲಕ್ಕು ಹಾಡುಗಳು ಅಶ್ವಿನಿ ಆಡಿಯೋ ಮೂಲಕ ಅನಾವರಣಗೊಳ್ಳಲಿವೆ.

ಈ ನಾಲಕ್ಕೂ ಹಾಡುಗಳಿಗೂ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಒದಗಿಸಿದ್ದಾರೆ. ಗಿರೀಶ್ ಕೋರಿಯೋಗ್ರಾಫರ್ ಆಗಿ ಕಾರ್ಯ ನಿರ್ವಹಿಸಿದ್ದರೆ ಪವರ್ ಗೋವಿಂದ ಅಶೋಕ್ ಅವರ ಸಾಥ್‍ನೊಂದಿಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ಸಾಹಸ ಸನ್ನಿವೇಶಗಳೇ ಪ್ರಧಾನವಾಗಿರೋ ಈ ಚಿತ್ರದಲ್ಲಿ ಆ ಸನ್ನಿವಶಗಳನ್ನೂ ಕೂಡಾ ವಿಶೇಷವಾಗಿಯೇ ರೂಪಿಸಲಾಗಿದೆಯಂತೆ. ಸ್ವತಃ ಈ ಚಿತ್ರವನ್ನು ನಿರ್ಮಾಣ ಮಾಡೋದರ ಜೊತೆಗೆ ನಾಯಕನಾಗಿಯೂ ಧನಂಜಯ ಅತ್ರೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ಸವಾಲಿನಂಥಾ ಕಥೆಯನ್ನು ಆಯ್ದುಕೊಂಡು ಹಲವಾರು ಹೊಸತನಗಳ ಜೊತೆಗೇ ಪ್ರೇಕ್ಷಕರನ್ನು ಮುಖಾಮುಖಿಯಾಗಲು ಧನಂಜಯ ಅತ್ರೆ ಸಜ್ಜಾಗುತ್ತಿದ್ದಾರೆ.

ಚಿತ್ರಕ್ಕೆ ಮೋಹನ್ ಎಂ.ಮುಗುಡೇಶ್ವರ ಛಾಯಾಗ್ರಹಣ, ಹೇಮಂತ್ ಸಂಗೀತ ನಿರ್ದೇಶನ, ಡಾ|| ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ಗೌರಿ ಅತ್ರೆ ಕಥೆ, ವೆಂಕಟೇಶ್ ಸಂಕಲನ, ಗಿರೀಶ್ ನೃತ್ಯ ನಿರ್ದೇಶನ, ಅಶೋಕ್ ಸಾಹಸ, ವಸಂತರಾವ್ ಕುಲಕರ್ಣಿ ಕಲಾನಿರ್ದೇಶನವಿದೆ. ಧನಂಜಯ ಅತ್ರೆ, ಅನೂಷಾರೈ, ಶ್ರೀನಿವಾಸ ಮೂರ್ತಿ, ಮನಮೋಹನ್ ರೈ, ವಿಜಯ ಚಂಡೂರು, ಗೌತಮ್ ರಾಜ್, ಯಮುನಾ ಶ್ರೀನಿಧಿ, ಇನ್ನು ಮುಂತಾದವರ ತಾರಾಬಳಗವಿದೆ.

This Article Has 4 Comments
  1. Pingback: regression testing

  2. Pingback: Devops outsourcing companies

  3. Pingback: Roswell Towing

  4. Pingback: buy sig sauer guns online

Leave a Reply

Your email address will not be published. Required fields are marked *

Translate »
error: Content is protected !!