‘ಫಾದರ್‌’ ಸಿನಿಮಾ ನಾಯಕಿ ಅಮೃತಾ

 ‘ಲವ್‌ ಮಾಕ್ಟೇಲ್‌’ ಖ್ಯಾತಿಯ ಡಾರ್ಲಿಂಗ್‌ ಕೃಷ್ಣ ನಟನೆಯ ‘ಫಾದರ್‌’ ಸಿನಿಮಾದಲ್ಲಿ ನಾಯಕಿಯಾಗಿ ಅಮೃತಾ ಅಯ್ಯಂಗಾರ್‌ ನಟಿಸಲಿದ್ದಾರೆ.

‘ಲವ್‌ ಮಾಕ್ಟೇಲ್‌’ ಸಿನಿಮಾದಲ್ಲಿ ‘ಜೋ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಮೃತಾ ಮತ್ತೊಮ್ಮೆ ಡಾರ್ಲಿಂಗ್‌ ಕೃಷ್ಣ ಅವರಿಗೆ ಜೋಡಿಯಾಗಲಿದ್ದಾರೆ. ಈ ಪಾತ್ರ ಅಮೃತಾ ಅಯ್ಯಂಗಾರ್‌ ಗೆ  ಬ್ರೇಕ್ ನೀಡಿತ್ತು.

ರ್‌.ಚಂದ್ರು ನಿರ್ಮಾಣದ  ‘ಫಾದರ್‌’ ಸಿನಿಮಾದ ಮುಹೂರ್ತ ಶನಿವಾರ(ಏ.27) ನಡೆಯಲಿದ್ದು, ಚಿತ್ರೀಕರಣವೂ ಆರಂಭವಾಗಲಿದೆ. ಮುಹೂರ್ತ ಕಾರ್ಯಕ್ರಮಕ್ಕೆ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ದಂಪತಿ ಮುಖ್ಯ ಅತಿಥಿಗಳಾಗಿದ್ದಾರೆ.

ರಾಜಮೋಹನ್‌ ಆಕ್ಷನ್‌ ಕಟ್‌ ಹೇಳುತ್ತಿರುವ ಈ ಸಿನಿಮಾದಲ್ಲಿ ಬಹುಭಾಷಾ ನಟ ಪ್ರಕಾಶ್‌ ರಾಜ್‌ ಮುಖ್ಯಭೂಮಿಕೆಯಲ್ಲಿದ್ದಾರೆ. ತೆಲುಗಿನ ಖ್ಯಾತ ನಟ ಸುನೀಲ್‌ ಬಣ್ಣಹಚ್ಚಲಿದ್ದಾರೆ.

ಗೌರ ಹರಿ ಸಂಗೀತ ನಿರ್ದೇಶನ, ಸುಜ್ಞಾನ್‌ ಛಾಯಾಗ್ರಹಣ, ರವಿ ವರ್ಮಾ ಹಾಗೂ ಚೇತನ್‌ ಡಿಸೋಜ ಸಾಹಸ ನಿರ್ದೇಶನ, ಮೋಹನ್‌ ಬಿ.ಕೆರೆ ಕಲಾನಿರ್ದೇಶನ ಚಿತ್ರಕ್ಕಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!