‘Karataka Damanaka’ movie review : ಫ್ರಾಡ್ ಗಳ ‘ಕರಟಕ ದಮನಕ’ ಸಂದೇಶ

ಚಿತ್ರ: ಕರಟಕ ದಮನಕ

ನಿರ್ದೇಶನ: ಯೋಗರಾಜ್ ಭಟ್
ನಿರ್ಮಾಪಕ: ರಾಕ್ ಲೈನ್ ವೆಂಕಟೇಶ್
ತಾರಾ ಬಳಗ: ಶಿವರಾಜ್ ಕುಮಾರ್, ಪ್ರಭುದೇವ, ನಿಶ್ವಿಕಾ ನಾಯ್ಡು, ಪ್ರಿಯಾ ಆನಂದ್, ರಾಕ್ ಲೈನ್ ವೆಂಕಟೇಶ್, ರಂಗಾಯಣ ರಘು ಇತರರು
ರೇಟಿಂಗ್: 3.5/5

ಇಬ್ಬರು ಫ್ರಾಡ್ ಗಳ ಮೂಲಕ ಇಂದಿನ ದೊಡ್ಡ ಸಮಸ್ಯೆಯನ್ನು ಕಮರ್ಷಿಯಲ್ ಜೊತೆಗೆ ಸಂದೇಶದ ಮೂಲಕ ಜನರಿಗೆ ಮನಸಿಗೆ ತಟ್ಟುವ ರೀತಿಯಲ್ಲಿ ಹೇಳುವ ಚಿತ್ರ ” ಕರಟಕ ದಮನಕ”.

ಶಿವರಾಜ್ ಕುಮಾರ್ ಹಾಗೂ ಪ್ರಭುದೇವ ನಟಿಸಿರುವ ಈ ಚಿತ್ರದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಪ್ರೇಕ್ಷಕರು ಇಟ್ಟುಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಚಿತ್ರ ಪ್ರೇಮಿಗಳಿಗೆ ಖುಷಿಯಾಗುವಂತೆ ಪಕ್ಕಾ ಕಮರ್ಷಿಯಲ್ ರೀತಿಯಲ್ಲಿ ಚಿತ್ರವನ್ನು ತೆರೆಯ ಮೇಲೆ ತಂದಿಡುವಲ್ಲಿ ನಿರ್ದೇಶಕರು ಯಶಸ್ಸು ಕಂಡಿದ್ದಾರೆ.

ಶಿವರಾಜ್ ಕುಮಾರ್ ನಿರ್ವಹಣೆ ಮಾಡಿರುವ ಪಾತ್ರ ವಿರೂಪಾಕ್ಷ, ಪ್ರಭುದೇವ ನಿರ್ವಹಣೆ ಮಾಡಿರುವ ಬಾಲರಾಜು, ಇಬ್ಬರೂಮೋಸ್ಟ ವಾಂಟೆಡ್ ಫ್ರಾಡ್ ಗಳಾಗಿ ಜೈಲಿನಲ್ಲಿ ಕೊಳೆಯುತ್ತಿರುತ್ತಾರೆ. ಈ ಸಂದರ್ಭದಲ್ಲಿ ಜೈಲರ್ ರುದ್ರೇಶ್ ಪಾತ್ರ ನಿರ್ವಹಿಸಿರುವ ರಾಕ್ಲೈನ್ ವೆಂಕಟೇಶ್ ಬರ ಪೀಡಿತ ಊರಿಗೆ ಇವರಿಬ್ಬರನ್ನು ಒಂದು ಕೆಲಸಕ್ಕಾಗಿ ಕಳುಹಿಸಿಕೊಡುತ್ತಾರೆ. ಇವರು ತಮಗೆ ಒಪ್ಪಿಸಿದ ಕೆಲಸವನ್ನು ಸರಿಯಾಗಿ ನಿರ್ವಹಿಸುತ್ತಾರೆಯೇ ಎನ್ನುವುದಕ್ಕೆ ಚಿತ್ರದಲ್ಲಿ ಉತ್ತರ ಇದೆ.

ಈ ಚಿತ್ರದಲ್ಲಿ ಭಟ್ರು ತಮ್ಮ ಎಂದಿನ ಮಳೆ, ಮಲೆನಾಡಿನ ಪರಿಸರವನ್ನು ಬಿಟ್ಟು ಉತ್ತರ ಕರ್ನಾಟಕದ ಕಡೆಗೆ ಹೊರಟಿದ್ದಾರೆ. ಚಿತ್ರದಲ್ಲಿ ಉತ್ತರ ಕರ್ನಾಟಕದ ಪರಿಸರ, ಅಲ್ಲಿನ ಸಂಭಾಷಣೆ ಇದೆ. ರಾಜ್ಯದ ದೊಡ್ಡ ಸಮಸ್ಯೆಯನ್ನು ಚಿತ್ರದಲ್ಲಿ ತೋರಿಸುವ ಜೊತೆಗೆ ಒಂದು ಒಳ್ಳೆಯ ಸಂದೇಶವನ್ನು ನೀಡುವ ಯತ್ನವನ್ನು ಯೋಗರಾಜ್ ಭಟ್ ಮಾಡಿದ್ದಾರೆ.

ಚಿತ್ರದಲ್ಲಿ ಶಿವಣ್ಣ ಹಾಗೂ ಪ್ರಭುದೇವ ಇಬ್ಬರು ತಮ್ಮ ನಟನೆ ಹಾಗೂ ಡಾನ್ಸ್ ಮೂಲಕ ಗಮನ ಸೆಳೆಯುತ್ತಾರೆ. ನಾಯಕಿಯರಿಗೆ ಹಾಡು, ಡ್ಯಾನ್ಸ್, ಗ್ಲ್ಯಾಮರ್ ಸೀಮಿತ ಆಗಿದೆ. ರಾಕ್ಲೈನ್ ವೆಂಕಟೇಶ್, ರವಿಶಂಕರ್ ತಮ್ಮ ಪಾತ್ರದ ಮೂಲಕ ಗಮನ ಸೆಳೆಯುತ್ತಾರೆ. ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ಸಾಕಷ್ಟು ಕಲಾವಿದರು ಇಲ್ಲಿದ್ದಾರೆ.

ಹರಿಕೃಷ್ಣ ಅವರ ಹಾಡುಗಳು ಓಕೆ ಅನಿಸುತ್ತವೆ. ಸಂತೋಷ್ ರೈ ಪಾತಾಜೆ ಸಿನಿಮಾಟೋಗ್ರಫಿ ಸೂಪರ್. ಯೋಗರಾಜ್ ಭಟ್ ಬರೆದಿರುವ ಉತ್ತರ ಕರ್ನಾಟಕದ ಸಂಭಾಷಣೆಗಳು ಖುಶಿ ನೀಡುತ್ತವೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!