‘ಅವನಿರಬೇಕಿತ್ತು’ ಪೋಸ್ಟರ್ ಬಿಡುಗಡೆ

ಶೋಕ್ ಸಾಮ್ರಾಟ್ ಕಥೆ ಬರೆದು ನಿರ್ದೇಶಿಸಿರುವ ‘ಅವನಿರಬೇಕಿತ್ತು’ ಸಿನಿಮಾದ  ವಿಶೇಷ ಪೋಸ್ಟರ್ ನ್ನು  ಶಿವರಾತ್ರಿ ಹಬ್ಬಕ್ಕೆ ಬಿಡುಗಡೆ ಮಾಡಲಾಗಿದೆ.

ಸಿನಿಮಾ ಈಗಾಗಲೇ ತನ್ನ ಫಸ್ಟ್ ಲುಕ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಚಿತ್ರ ತಂಡ ಶೀಘ್ರದಲ್ಲೇ ಟೀಸರ್ ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿದೆ.

ಚಿತ್ರದಲ್ಲಿ ಭರತ್ ಮತ್ತು ಸೌಮ್ಯ ಜಾನ್ ಪ್ರಮುಖ ಪಾತ್ರದಲ್ಲಿದ್ದಾರೆ. ಅಜಯ್ ಶರ್ಮಾ, ಅಶೋಕ್ ಸಾಮ್ರಾಟ್, ಬಸವ, ಶಿವಾನಂದ ಆಚಾರ್ಯ, ರಂಗ, ನಂದ ಹೊನ್ನೂರು, ಅಭಿ ಕುಣಿಗಲ್ ತಾರಾ ಬಳಗದಲ್ಲಿದ್ದಾರೆ.

ನೋವಿಕ ಸಿನಿ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಮುರಳಿ ‘ಅವನಿರಬೇಕಿತ್ತು’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಅಶೋಕ್ ಸಾಮ್ರಾಟ್ ಅವರ ಸಂಕಲನ ಮತ್ತು ಪೃಥ್ವಿ ಮಾಲೂರ್ ಛಾಯಾಗ್ರಹಣವಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!