ಗುಡ್ ನ್ಯೂಸ್ ಕೊಟ್ಟ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್!

ಮಹಾಶಿವರಾತ್ರಿಯಂದು ಸ್ಟಾರ್ ಜೋಡಿ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್  ಶುಭ ಸುದ್ದಿ ಹಂಚಿಕೊಂಡಿದ್ದಾರೆ.

ಇವರಿಬ್ಬರು ಈಗ ಪೋಷಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಮಗುವಿನ ಶರ್ಟ್​ ಫೋಟೋ ಹಂಚಿಕೊಂಡಿರುವ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ‘KrissMi’ ಎಂದು ಪ್ರೀತಿಯ ಸಂಕೇತವನ್ನ ಹಾಕಿದ್ದಾರೆ. ”ನಿಮ್ಮೆಲ್ಲರ ಆಶೀರ್ವಾದ ಸದಾ ನಮ್ಮ ಮೇಲಿರಲಿ” ಎಂದು ವಿನಂತಿ ಮಾಡಿದ್ದಾರೆ.

ಈ ವರ್ಷದ ಸೆಪ್ಟೆಂಬರ್ ನಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರ ಮನೆಗೆ ಪುಟ್ಟ ಕಂದಮ್ಮನ ಆಗಮನವಾಗಲಿದೆ. ಈ ಸಿಹಿ ಸುದ್ದಿ ಇಬ್ಬರು ನೀಡಿದ ಬೆನ್ನಲ್ಲಿಯೇ  ಅನೇಕರು ಸಾಮಾಜಿಕ ಜಾಲತಾಣದ ಮೂಲಕ ಈ  ಜೋಡಿಗೆ ಶುಭಾಶಯ ಕೋರುತ್ತಿದ್ದಾರೆ.

2021 ಫೆಬ್ರವರಿ 14ರಂದು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಸಪ್ತಪದಿ ತುಳಿದಿದ್ದರು. ಕನ್ನಡ ಚಿತ್ರರಂಗದ ಅನೇಕರು ಮದುವೆ ಸಮಾರಂಭದಲ್ಲಿ ಭಾಗಿಯಾಗಿ ಇಬ್ಬರಿಗೂ ಶುಭಾಶಯ ಕೋರಿದ್ದರು.

ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ನಮ್ ದುನಿಯಾ ನಮ್ ಸ್ಟೈಲ್, ಚಾರ್ಲಿ, ಲವ್ ಮಾಕ್ಟೇಲ್, , ಲವ್ ಮಾಕ್ಟೇಲ್ 2,  ಲವ್ ಬರ್ಡ್ಸ್, ಮಿಸ್ಟರ್ ಬ್ಯಾಚುಲರ್, ಕೌಸಲ್ಯ ಸುಪ್ರಜಾ ರಾಮದಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ.

ಲವ್ ಮಾಕ್ಟೇಲ್ ಸಿನಿಮಾ ಡಾರ್ಲಿಂಗ್ ಕೃಷ್ಣ ಅವರ ಇಮೇಜನ್ನೇ ಬದಲಿಸಿತು. ಅಲ್ಲಿಂದ ತಿರುಗಿ ನೋಡದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಕನ್ನಡ ಚಿತ್ರರಂಗದ ಬಹುಬೇಡಿಕೆ ಜೋಡಿಯಾಗಿ ಬೆಳೆದಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!