ಕನ್ನಡ ಕಿರುತೆರೆ ಕ್ಷೇತ್ರಕ್ಕೆ ಇನ್ನೊಂದು ಮನರಂಜನಾ ವಾಹಿನಿ ‘ಸಿರಿಕನ್ನಡ’

ಕನ್ನಡ ಸಿನಿರಸಿಕರಿಗೊಂದು ಸಂತಸದ ಸುದ್ದಿ. ಸಿರಿಕನ್ನಡ – ಸಿನಿಮಾ ಮತ್ತು ಮನರಂಜನಾ ವಾಹಿನಿ ವೀಕ್ಷಕರ ಮನೆಯಂಗಳದಲ್ಲಿ ಸಿನಿಮಾ ಮತ್ತು ಕಾರ್ಯಕ್ರಮಗಳ ಕಂಪನ್ನು ಬೀರಲಿದೆ. ಸಿರಿಕನ್ನಡ ವಾಹಿನಿಯ ಮುಖ್ಯಸ್ಥರು ಹೇಳುವಂತೆ 84ರ ವಸಂತದಲ್ಲಿರುವ ಕನ್ನಡ ಸಿನಿಮಾರಂಗಕ್ಕೆ ಸಿರಿಕನ್ನಡ ವಾಹಿನಿಯು ಹೆಮ್ಮೆಯಕೊಡುಗೆಯಾಗಿದ್ದು ಈ ವಾಹಿನಿಯ ಪರಿಕಲ್ಪನೆಯೇ ವಿಭಿನ್ನ.

ಸಿನಿಮಾ ವಾಹಿನಿಗಳೆಂದರೆ ಕೇವಲ ಸಿನಿಮಾಗಳಿಗಷ್ಟೇ ಸೀಮಿತವಾಗಿರುತ್ತವೆ ಆದರೆ ಸಿರಿಕನ್ನಡ ಇದಕ್ಕೂ ಮೀರಿದ ಮನರಂಜನೆಯನ್ನುತನ್ನ ವೀಕ್ಷಕರಿಗೆ ನೀಡಲಿದೆ. ಒಂದು ಸಿನಿಮಾದಿಂದ ವೀಕ್ಷಕರು ಬಯಸುವುದಯ ಪರಿಪೂರ್ಣ ಮನರಂಜನೆ, ಈ ಅಂಶವನ್ನುಗಮನದಲ್ಲಿಟ್ಟುಕೊಂಡು ಸಿನಿಮಾ ಮೇಕಿಂಗ್‍ನ ಪ್ರತಿಯಂದು ಹಂತವನ್ನುಒಂದುಎಂಟರ್ಟೈನಮೆಂಟ್ ಪ್ಯಾಕೇಜ್ ಮೂಲಕ ವೀಕ್ಷಕರಿಗೆಕೊಡುವುದಲ್ಲದೇ ಹೊಸ ಸಿನಿಮಾಗಳ ಹೊಸ ವಿಷಯ, ನಟ ನಟಿಯರ ಲೈಫ್ ಸ್ಟೈಲ್, ಹಳೆಯ ಸಿನಿಮಾಗಳ ಮಧುರ ನೆನಪು ಎಲ್ಲವೂ ಕಾರ್ಯಕ್ರಮಗಳಾಗಿ ವೀಕ್ಷಕರನ್ನುರಂಜಿಸಲಿವೆ.

ಎವರ್‍ಗ್ರೀನ್ ಸಾಂಗ್ಸ್, ನಕ್ಕು ನಗಿಸೋ ಕಾಮಿಡಿ ಸೀನ್ಸ್ ಇದರೊಟ್ಟಿಗೆ ಭವಿಷ್ಯದಚಿಂತಕರಿಗೆ ಜ್ಯೋತಿಷ್ಯ, ಆರೋಗ್ಯ ವೃದ್ದಿಗಾಗಿ ಹೆಲ್ಥ್ ಪ್ರೋಗ್ರಾಮ್, ಕಣ್ಮನತಣಿಸೋಟ್ರಾವೆಲ್ ಶೋ ಈ ಎಲ್ಲಾರೀತಿಯ ಕಾರ್ಯಕ್ರಮಗಳನ್ನು ಸಿರಿಕನ್ನಡ ವಾಹಿನಿ ವೀಕ್ಷಕರಿಗೆ ನೀಡಲಿದೆ.

ಸಿರಿಕನ್ನಡದಲ್ಲಿ ಅತ್ಯುತ್ತಮ ಸಾಂಸಾರಿಕ, ಹಾಸ್ಯ, ಥ್ರಿಲ್ಲರ್, ಭಕ್ತಿಪ್ರಧಾನ, ಪ್ರೇಮಕಥೆಎಲ್ಲಾರೀತಿಯ ಸಿನಿಮಾಗಳ ಸಂಗ್ರಯವಿದ್ದುಎಲ್ಲಾ ವರ್ಗದ ವೀಕ್ಷಕರನ್ನುರಂಗಿಸಲಿದೆ. ಮುಂಬರುವ ದಿನಗಳಲ್ಲಿ ನಮ್ಮ ಸಿನಿಮಾ ಸಂಗ್ರಹವನ್ನು ಹೆಚ್ಚಿಸುತ್ತಾ ಸಾಗುವಯೋಜನೆ ನಮ್ಮದಾಗಿದ್ದು ಹೆಚ್ಚು ಹೆಚ್ಚು ಉತ್ತಮ ಚಿತ್ರಗಳನ್ನು ಚಿತ್ರ ಪ್ರೇಮಿಗಳಿಗೆ ಕೋಡೋ ಹೆಬ್ಬಯಕೆ ಸಿರಿಕನ್ನಡದ್ದು. ಕಾರ್ಯಕ್ರಮಗಳಲ್ಲೂ ವಿಭಿನ್ನ ಬಗೆಯ ವಿನೂತನ ಪ್ರೋಗ್ರಾಮ್‍ರೂಪಿಸೋ ಬಯಕೆ ನಮ್ಮದಾಗಿದ್ದುಇದಕ್ಕಾಗಿ ಪ್ರತಿಭಾವಂತರತಂಡ ಮತ್ತುಉತ್ಕøಷ್ಠ ತಂತ್ರಜ್ಞಾನ ಬರುತ್ತಿರೋ ಸಿರಿಕನ್ನಡ ವಾಹಿನಿ ಉಚಿತವಾಗಿ (ಪ್ರೀಟುಏರ್) ನಿಮಗೆ ಲಭ್ಯವಾಗಿದ್ದು ಸಿರಿಕನ್ನಡ ವಾಹಿನಿ ವೀಕ್ಷಿಸಲು ನಿಮ್ಮ ಕೇಬಲ್ ಆಪರೇಟರ್‍ಗಳನ್ನು ಸಂಪರ್ಕಿಸಬಹುದಾಗಿದೆ.

ತಾರೆಯರಅಂದಚಂದಕ್ಕೆಅವರುತಿನ್ನುವಆಹಾರವೂ ಅಷ್ಟೇ ಮುಖ್ಯ.ಆ ಬಗೆಗೆ ತಿಳಿಸಲು ಈ ವಾಹಿನಿಯಲ್ಲಿ ವಿಭ್ನಿನ್ನವಾದಅಡುಗೆ ಷೋ ರಂಭಿಸುತ್ತಿದ್ದಾರೆ.ಒಟ್ಟಾರೆ ಕರ್ನಾಟಕದ ಮೊದಲ ಸಿನಿಮಾ ಮತ್ತು ಮನರಂಜನಾ ವಾಹಿನಿ ಎಂಬ ಹೆಗ್ಗಳಿಕೆ “ಸಿರಿ ಕನ್ನಡ” ಚಾನಲ್‍ಗೆ ಇದೆ.

ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿವಾಣಿಯಂತೆಕನ್ನಡಿಗರ ನಾಡಿಯಾಗಿ ಮೂಡಿಬರಲಿದೆ ಸಿರಿಕನ್ನಡ ವಾಹಿನಿ. ಈ ನಿಮ್ಮಅಭಿಮಾನದ ವಾಹಿನಿಯನ್ನುಎಲ್ಲರೂ ಹರಸಿ ಹಾರೈಸಬೇಕೆಂಬುದು ಸಿರಿಕನ್ನಡ ತಂಡದ ಆಶಯ.

This Article Has 1 Comment
  1. Pingback: formasi cpns semua jurusan 2022

Leave a Reply

Your email address will not be published. Required fields are marked *

Translate »
error: Content is protected !!