ʼʼಜೂನಿʼʼ ಫೆಬ್ರವರಿ 9ಕ್ಕೆ ತೆರೆಗೆ

ಪೃಥ್ವಿ ಅಂಬರ್  ಅವರ ಹೊಸ ಸಿನಿಮಾ  ‘ಜೂನಿ’ ಫೆಬ್ರವರಿ 9ಕ್ಕೆ ಬಿಡುಗಡೆ ಆಗಲಿದೆ.

ಈ ಚಿತ್ರದ ಟ್ರೇಲರ್  ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಬಿಡುಗಡೆ ಮಾಡಲಾಗಿದೆ. ಈ ವೇಳೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ನಿರ್ದೇಶಕ ವೈಭವ್ ಮಹಾದೇವ್, ಜೂನಿ ಕಥೆ ಮೇಲೆ ತುಂಬಾ ನಂಬಿಕೆ ಇದೆ. ಈ ಚಿತ್ರ ಮಾಡಿರುವುದಕ್ಕೆ ನನಗೂ ತೃಪ್ತಿ ಇದೆ. ಸ್ಪ್ಲಿಟ್ ಪರ್ಸನಾಲಿಟಿ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಜನಕ್ಕೆ ಈ ಕಂಡಿಷನ್ ಬಗ್ಗೆ ಅರ್ಥ ಮಾಡಿಸಬೇಕು ಅನ್ನೋದು ನನ್ನ ಪ್ರಯತ್ನ ಎಂದರು.

ನಾಯಕ ಪೃಥ್ವಿ ಅಂಬಾರ್ ಮಾತನಾಡಿ, ವೈಭವ್  ಕ್ಲಾರಿಟಿಯಾಗಿ ಸಿನಿಮಾ ಮಾಡಿದ್ದಾರೆ.  ಎರಡೂವರೆ ತಿಂಗಳ ಬಹಳಷ್ಟು ರಿಹರ್ಸಲ್ ಮಾಡಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಬೇಕು ಎಂದು ತುಂಬಾ ಡೆಡಿಕೇಟೆಡ್ ಆಗಿ ಚಿತ್ರ ಮಾಡಿದ್ದಾರೆ. ನನ್ನದು 50% ಪರಿಶ್ರಮ ಅಷ್ಟೇ ಇರುವುದು. ಎಲ್ಲರದ್ದೂ 100ರಷ್ಟು ಇದೆ ಎಂದು ತಿಳಿಸಿದರು.

ನಾಯಕಿ ರಿಷಿಕಾ ಮಾತನಾಡಿ, ನಾವು 2022ರಲ್ಲಿ ಈ ಚಿತ್ರದ ಶೂಟಿಂಗ್ ಶುರು ಮಾಡಿದೆವು. ಆ ಟೈಮ್ ನಲ್ಲಿ ನನ್ನದು ಎರಡನೇ ಪ್ರಾಜೆಕ್ಟ್. ನನಗೆ ಈ ರೀತಿ ಕ್ಯಾರೆಕ್ಟರ್ ಸಿಕ್ಕಿರುವುದು ಖುಷಿ ಇದೆ. ತುಂಬಾ ರಿಹರ್ಸಲ್ ಮಾಡಿದ್ದೇವೆ. ಇದುಇಡೀ ತಂಡದ ಪ್ರಯತ್ನ. ಈ ಚಿತ್ರದಲ್ಲಿ ಒಂದೊಳ್ಳೆ ಮೆಸೇಜ್ ಇದೆ ಎಂದರು.

ವೈಭವ್ ಮಹಾದೇವ್ ಈಗಾಗಲೇ ‘ಜನ್ನಿ’ ಅನ್ನೋ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.  ‘ಜೂನಿ’ ಸಿನಿಮಾ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆಯನ್ನು ಇಡುತ್ತಿದ್ದಾರೆ.  ‘ಜೂನಿ’ ಸಿನಿಮಾಗೆ ಕಥೆ- ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

‘ಜೂನಿ’ಗೆ ತ್ರಿಶೂಲ ಕ್ರಿಯೇಷನ್ ಬ್ಯಾನರ್ನಿಂದ ಮೋಹನ್ ಕುಮಾರ್  ಹಣ ಹಾಕಿದ್ದಾರೆ. ಶ್ರೇಯಸ್ ವೈ ಎಸ್ ಸಹ ನಿರ್ಮಾಪಕರಾಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಸಿನಿಮಾವನ್ನು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಚಿತ್ರತಂಡ ಫೆಬ್ರವರಿ 9ಕ್ಕೆ ಬಿಡುಗಡೆ ಮಾಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದೆ.

‘ಜೂನಿ’ಗೆ  ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶನ, ಶಶಾಂಕ್ ನಾರಾಯಣ ಎಡಿಟಿಂಗ್, , ಅಜಿನ್ ಬಿ, ಜಿತಿನ್ ದಾಸ್ ಕ್ಯಾಮರಾ ವರ್ಕ್, ನವೀನ್ ಆರ್ಟ್ ಡೈರೆಕ್ಷನ್ ಮಾಡಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!