AnandBabuG :ಆನಂದ ಬಾಬು ನಿರ್ಮಾಣದ ‘ಧೈರ್ಯಂ ಸರ್ವತ್ರ ಸಾಧನಂ’ ಫೆಬ್ರವರಿ 23ಕ್ಕೆ ತೆರೆಗೆ

ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಹೆಸರು ಮಾಡುತ್ತಿರುವ ಆನಂದ್ ಬಾಬು ನಿರ್ಮಾಣದ ದೊಡ್ಡ ಬಜೆಟಿನ ಚಿತ್ರ ಧೈರ್ಯಂ ಸರ್ವತ್ರ ಸಾಧನಂ ಫೆಬ್ರವರಿ 23ರಂದು ತೆರೆ ಕಾಣಲಿದೆ.

ಕನ್ನಡ ಚಿತ್ರರಂಗದಲ್ಲಿ ಪ್ರೊಡಕ್ಷನ್ ಸಂಸ್ಥೆಯಲ್ಲಿ ಆಫೀಸ್ ಬಾಯ್ ಆಗಿ ಕೆಲಸ ಆರಂಭಿಸಿದ ಆನಂದ್ ಬಾಬು ಈಗ ದೊಡ್ಡ ಮಟ್ಟದ ನಿರ್ಮಾಪಕರಾಗಿ ಹೆಸರು ಮಾಡತೊಡಗಿದ್ದಾರೆ. ಇವರ ನಿರ್ಮಾಣದ ಧೈರ್ಯಂ ಸರ್ವತ್ರ ಸಾಧನಂ ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿಸಿದೆ.

ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ಆನಂದ ಬಾಬು ಅವರು ಪದವೇ ಶಿಕ್ಷಣ ಬಳಿಕ ಬೆಂಗಳೂರಿಗೆ ವಲಸೆ ಹೋದರು. ಪ್ರೊಡಕ್ಷನ್ ಸಂಸ್ಥೆಯಲ್ಲಿ ಆಫೀಸ್ ಬಾಯ್ ಕೆಲಸದ ನಂತರ ಲೈಟ್ ಬಾಯ್ ಆಗಿ ಬಡ್ತಿ ಪಡೆದರು. ಶೂಟಿಂಗ್ ವಿಚಾರಗಳನ್ನು ಕಲಿತು ನಿರ್ದೇಶಕ ಆಗಬೇಕು ಎನ್ನುವ ಆಸೆ ಹೊಂದಿದ್ದ ಆನಂದ ಬಾಬು ಅವರು ಅನಿರೀಕ್ಷಿತ ಬೆಳವಣಿಗೆಯಲ್ಲಿ ನಿರ್ಮಾಪಕರಾದರು.

ಖ್ಯಾತ ನಿರ್ದೇಶಕ ಶಿವಮಣಿ ಅವರ ಅಕ್ಕ ಧಾರವಾಹಿಗೆ ಆನಂದ್ ಲೈಟ್ ಬಾಯ್ ಆಗಿ ಕೆಲಸ ಮಾಡಿದ್ದರು. ಅವರ ಕೆಲಸವನ್ನು ಗಮನಿಸಿದ ಶಿವಮಣಿ ಅವರು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಬಡ್ತಿ ನೀಡಿದರು. ನಂತರ ಎಸ್ ನಾರಾಯಣ್ ಅವರ ಸೇವಂತಿ ಸೇವಂತಿ, ಚೆಲುವಿನ ಚಿತ್ತಾರ, ಚಂಡ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು.

ಜೀ ಕನ್ನಡ ವಾಹಿನಿಯ ಯಾರಿಗುಂಟು ಯಾರಿಗಿಲ್ಲ, ಕುಣಿಯೋಣ ಬಾರ, ಸೈ, ಬಾಳೆ ಬಂಗಾರ ಕಾರ್ಯಕ್ರಮಗಳಿಗೆ ಸ್ಕ್ರಿಪ್ಟ್ ಬರೆದು ಅಸೋಸಿಯೇಟ್ ಆಗಿ ಕೆಲಸ ಮಾಡಿದರು.

ಶ್ರೀ ಶಂಕರ ಟಿವಿ ಯಲ್ಲಿ ಕಾರ್ಯಕ್ರಮ ನಿರ್ಮಾಪಕನಾಗಿ ಕೆಲಸ ಮಾಡಿದರು. ಇದರ ಜೊತೆಗೆ ಅಭಿನಯ ತರಂಗ ರಂಗಭೂಮಿಯಲ್ಲಿ ಒಂದು ವರ್ಷದ ಅಭಿನಯ ಕೋರ್ಸ್ ಮಾಡಿದ್ದಾರೆ. ಬೀದಿ ನಾಟಕ, ನಾಟಕ ಪ್ರದರ್ಶನಗಳಲ್ಲಿ ಭಾಗಿಯಾಗಿ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಬಳಿಕ ನಿರ್ಮಾಣಕ್ಕೆ ಹೇಳಿದ ಆನಂದ ಬಾಬು ಅವರು 2016ರಲ್ಲಿ ಚಿತ್ರ ನಿರ್ಮಿಸಿ ಕೈ ಸುಟ್ಟುಕೊಂಡರು. ಸಾಲದ ಹೊರೆಯ ನಂತರ ಛಲವನ್ನು ಮುಂದುವರಿಸಿ ಅವರು 2018 ರಲ್ಲಿ ಕಮರೊಟ್ಟು ಚೆಕ್ ಪೋಸ್ಟ್ ಎನ್ನುವ ಯಶಸ್ವಿ ಚಿತ್ರವನ್ನು ನಿರ್ಮಿಸಿದರು. 2020ರಲ್ಲಿ ಹೆಣ್ಣು ಭ್ರೂಣ ಹತ್ಯೆಯ ವಿಷಯ ಆಧರಿಸಿದ ಗುಬ್ಬಿಮರಿ ಚಿತ್ರ ಪ್ರೇಮಿಸುವ ಮೂಲಕ ಮೆಚ್ಚುಗೆಯನ್ನು ಪಡೆದರು.

ಬಡತನದ ಹಾದಿಯಿಂದ ಬಂದ ಆನಂದ ಬಾಬು ಈಗ ಧೈರ್ಯಂ ಸರ್ವತ್ರ ಸಾಧನಂ ಚಿತ್ರದ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!