ವಿಭಿನ್ನ ಪ್ರೇಮಕಥೆಯಲ್ಲಿ ಪೃಥ್ವಿ ಅಂಬರ್

ದಿಯಾ ಹೀರೋ ಪೃಥ್ವಿ ಅಂಬರ್ ವಿಭಿನ್ನ ಪ್ರೇಮಕಥೆಯಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.

ಯುವ ಪ್ರತಿಭೆ ವೈಭವ್ ಮಹಾದೇವ್ ಸಾರಥ್ಯದ ‘ಜೂನಿ’ ಸಿನಿಮಾದಲ್ಲಿ ಪೃಥ್ವಿ ಅಂಬರ್ ನಾಯಕನಾಗಿ ಹೊಸ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ದಿಯಾ ಬಳಿಕ ಪೃಥ್ವಿ ಅಂಬರ್ ಮತ್ತೊಮ್ಮೆ ಪ್ರೇಮಕಥೆಗೆ ಬಣ್ಣ ಹಚ್ಚಿದ್ದಾರೆ.

‘ಜನ್ನಿ’ ಎಂಬ ಕಿರುಚಿತ್ರ ನಿರ್ದೇಶಿಸಿದ್ದ ವೈಭವ್ ಮಹಾದೇವ್ ‘ಜೂನಿ’ ಸಿನಿಮಾ ಮೂಲಕ ನಿರ್ದೇಶಕರಾಗಿ ಕಾಣಿಸಿಕೊಂಡಿದ್ದಾರೆ. ವೈಭವ್ ಮಹಾದೇವ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.  ತ್ರಿಶೂಲ ಕ್ರಿಯೇಷನ್ ಅಡಿ ಮೋಹನ್ ಕುಮಾರ್ ಎಸ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಶ್ರೇಯಸ್ ವೈ ಎಸ್ ಸಹ ನಿರ್ಮಾಪಕರಾಗಿದ್ದಾರೆ.

ಜೂನಿ’ ಸಿನಿಮಾ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಪೃಥ್ವಿ ಅಂಬಾರ್ ಜೊತೆಗೆ ನಾಯಕಿ ರಿಷಿಕಾ ನಾಯಕ್ ಡಿಫರೆಂಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಫಸ್ಟ್ ಲುಕ್ ರಿಲೀಸ್ ಮಾಡಿರುವ ಜೂನಿ ಚಿತ್ರತಂಡ ಟೀಸರ್, ಟ್ರೇಲರ್, ಹಾಡು ಒಂದೊಂದಾಗಿ ರಿಲೀಸ್ ಮಾಡಲು ಸಜ್ಜಾಗಿದೆ.

ಬೆಂಗಳೂರು ಸುತ್ತಮುತ್ತ ಶೂಟಿಂಗ್ ಮುಗಿಸಿರುವ ಜೂನಿ ಚಿತ್ರತಂಡ 2024ರ ಜನವರಿಗೆ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.  ನಕುಲ್ ಅಭ್ಯಂಕರ್ ಸಂಗೀತ, ಶಶಾಂಕ್ ನಾರಾಯಣ ಸಂಕಲನ, ಅಜಿನ್ ಬಿ, ಜಿತಿನ್ ದಾಸ್ ಛಾಯಾಗ್ರಹಣ, ನವೀನ್ ಕಲಾ ನಿರ್ದೇಶನ ಚಿತ್ರಕ್ಕಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!