ಜಾಕ್ವೆಲಿನ್ ಫರ್ನಾಂಡಿಸ್

ಜಾಕ್ವೆಲಿನ್ ಫರ್ನಾಂಡಿಸ್ ಗೆ ಶಾಕ್

ಬಾಲಿವುಡ್ ನಾಯಕಿ ಜಾಕ್ವೆಲಿನ್ ಫರ್ನಾಂಡಿಸ್ ತನ್ನ ವಿರುದ್ಧದ 200 ಕೋಟಿ ರೂಪಾಯಿಗಳ ಹಣ ವರ್ಗಾವಣೆ ಪ್ರಕರಣವನ್ನು ರದ್ದುಗೊಳಿಸುವಂತೆ  ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿ ಶಾಕ್ ನೀಡಿದೆ.

ಹಣ ವರ್ಗಾವಣೆ ಪ್ರಕರಣದಲ್ಲಿ ಸುಖೇಶ್ ಚಂದ್ರಶೇಖರ್  ನ್ನು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ  ಜಾಕ್ವೆಲಿನ್ ಹೆಸರನ್ನು ಆರೋಪ ಪಟ್ಟಿಯಲ್ಲಿ ಸೇರಿಸಿದ್ದು ಅವನನ್ನು ವಿಚಾರಣೆ ನಡೆಸಿದೆ.  ಸುಖೇಶ್ ಚಂದ್ರಶೇಖರ್  ಅಪರಾಧ ಇತಿಹಾಸ ತಿಳಿದಿದ್ದರೂ ಅಮೂಲ್ಯವಾದ ಉಡುಗೊರೆಗಳನ್ನು ಏಕೆ ಸ್ವೀಕರಿಸಿದ್ದಾರೆ ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಸುಖೇಶ್ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ತನಗೆ ತಿಳಿದಿರಲಿಲ್ಲ. ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸಲ್ಲಿಸಿದ ಎರಡನೇ ಪೂರಕ ಆರೋಪಪಟ್ಟಿ ಮತ್ತು ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಇರುವ ವಿಚಾರಣೆಯನ್ನು ರದ್ದುಗೊಳಿಸುವಂತೆ ಜಾಕ್ವೆಲಿನ್ ಕೋರಿದ್ದರು.

ಸುಖೇಶ್ ಮತ್ತು ಅವರ ಪತ್ನಿ ಲೀನಾ ಪೌಲೋಸ್ ಹವಾಲಾ ಚಾನೆಲ್‌ಗಳನ್ನು ಬಳಸಿಕೊಂಡರು. ವಂಚನೆಯ ಮೂಲಕ ಗಳಿಸಿದ ಹಣವನ್ನು ಮರೆಮಾಡಲು ಇತರ ಆರೋಪಿಗಳೊಂದಿಗೆ ಶೆಲ್ ಕಂಪನಿಗಳನ್ನು ರಚಿಸಿದರು ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ಸುಖೇಶ್ ಅವರಿಂದ ಅಮೂಲ್ಯವಾದ ಉಡುಗೊರೆಗಳನ್ನು ಸ್ವೀಕರಿಸುವ ಮೂಲಕ ಜಾಕ್ವೆಲಿನ್  ಅಪರಾಧದಲ್ಲಿ ಭಾಗಿಯಾಗಿದ್ದಾಳೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಜಾರಿ ನಿರ್ದೇಶನಾಲಯ ಹಲವಾರು ಬಾರಿ ಪ್ರಶ್ನಿಸಿದೆ.

ರಾನ್‌ಬಾಕ್ಸಿಯ ಮಾಜಿ ಪ್ರವರ್ತಕರಾದ ಶಿವಿಂದರ್ ಸಿಂಗ್ ಮತ್ತು ಮಲ್ವಿಂದರ್ ಸಿಂಗ್ ಅವರ ಸಂಗಾತಿಗಳಿಗೆ ವಂಚನೆ ಮಾಡಿದ ಆರೋಪದ ಮೇಲೆ ಸುಕೇಶ್ ಚಂದ್ರಶೇಖರ್  ಜೈಲಿನಲ್ಲಿದ್ದಾನೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!