ಸೂಪರ್ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ಅಕ್ಟೋಬರ್ 15 ರಂದು ಬಿಡುಗಡೆಯಾಗಲಿದೆ.
ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದ ಬಹುನಿರೀಕ್ಷಿತ ‘ಜೈಲರ್ 2’ ಚಿತ್ರದ ನಿರ್ಮಾಪಕರು ಆಕ್ಷನ್-ಪ್ಯಾಕ್ಡ್ ಪ್ರೋಮೋದೊಂದಿಗೆ ಚಿತ್ರದ ಬಿಡುಗಡೆ ದಿನಾಂಕವನ್ನು ಇಂದು ಅಧಿಕೃತವಾಗಿ ಘೋಷಿಸಿದ್ದಾರೆ. ಕಲಾನಿಧಿ ಮಾರನ್ ನಿರ್ಮಿಸಿರುವ ಈ ಹೈಬಜೆಟ್ ಚಿತ್ರದಲ್ಲಿ ರಜನಿ ಅವರ ಜೊತೆಗೆ ಇತರ ಚಿತ್ರರಂಗದ ದಿಗ್ಗಜ ನಟರು ಕೂಡ ನಟಿಸಿದ್ದಾರೆ.
‘ಜೈಲರ್ 2’ ಟೀಸರ್ ತುಣುಕಿನಲ್ಲಿ ರಜನಿ ಅವರದ್ದು ಹೊಸ ಲುಕ್ ಎನ್ನಿಸುವಂತೆ ಕಂಡುಬಂದಿದೆ. ಆದರೂ ಚಿತ್ರತಂಡ ಅಷ್ಟಾಗಿ ಯಾವುದನ್ನೂ ರಿವೀಲ್ ಮಾಡಿಲ್ಲ. ಟೀಸರ್ನಲ್ಲಿ ಬಿಜಿಎಂ ಸದ್ದು ಮಾಡಿದೆ. ಚಿತ್ರದಲ್ಲಿ ಯಾರೆಲ್ಲ ಕಲಾವಿದರು ನಟಿಸಿದ್ದಾರೋ ಅವರ ಪಾತ್ರ ಒಂದು ಸೆಕೆಂಡ್ನಲ್ಲಿ ಪಾಸಿಂಗ್ ಶಾಟ್ ಆಗಿ ತೋರಿಸಲಾಗಿದೆ.
ಚಿತ್ರಕ್ಕೆ ಸೂಪರ್ಹಿಟ್ ಮ್ಯೂಸಿಕಲ್ ಕಂಪೋಸರ್ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ. ರಜನಿಕಾಂತ್, ಮಿರ್ನಾ ಮೆನನ್, ಮೋಹನ್ ಲಾಲ್, ಹ್ಯಾಟ್ರಿಕ್ ಹೀರೋ ಶಿವಕಾಜ್ಕುಮಾರ್, ಹೃತಿಕ್ ರೋಷನ್, ಮೋಹನ್ ಲಾಲ್, ರಮ್ಯ ಕೃಷ್ಣನ್ ಸೇರಿದಂತೆ ದಿಗ್ಗಜ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಕೆರಳಿಸಿದೆ.
—





Be the first to comment