ಇನ್ಫೆಕ್ಷನ್ ಚಿತ್ರ ಮೊದಲ ಹಂತದ 15 ದಿವಸಗಳ ಚಿತ್ರೀಕರಣವನ್ನು ಮುಗಿಸಿಕೊಂಡಿದೆ. ಕಾಸರಗೋಡು, ಬೇಕಲಕೋಟೆ ಸುತ್ತ ಮುತ್ತ ಚಿತ್ರೀಕರಣ ನಡೆಸಿಕೊಂಡಿರುವ ಚಿತ್ರ ತಂಡ ಇದೀಗ ಮೈಸೂರು ಹಾಗೂ ಬೆಂಗಳೂರು ಸುತ್ತ ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದೆ.
ಸಮಾಜದಲ್ಲಿ ಆಗುವ ಇನ್ಫೆಕ್ಷನ್ ಅನ್ನು ಹೇಗೆ ಬೇರು ಸಮೇತ ನಿವಾರಿಸಬೇಕೋ ಹಾಗೆ ಈ ಚಿತ್ರದಲ್ಲಿ ನಾಯಕ ಅನೇಕ ಇನ್ಫೆಕ್ಷನ್ಗಳನ್ನು ನಿವಾರಣೆ ಮಾಡಲು ಸಜ್ಜಾಗುತ್ತಾನೆ.
ಅಮೋಘ್ ಎಂಟೆರ್ಪ್ರೈಸಸ್ ಅಡಿಯಲ್ಲಿ ಈ ಹಿಂದೆ ಸಂಚಾರಿ ಹಾಗೂ ಜಟಾಯು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಪ್ರಭಾಕರ್ ಹಾಗೂ ಕಿರಣ್ ಈ ಇನ್ಫೆಕ್ಷನ್ ಚಿತ್ರಕ್ಕೆ ಹಣ ಹೂಡಿದ್ದಾರೆ. ಉಪೇಂದ್ರ, ಸಂತು ಹಾಗೂ ಮುರಳಿ ಮೋಹನ್ ಅವರ ಬಳಿ ಸಹಾಯಕರಾಗಿ ಕೆಲಸ ಮಾಡಿದ ಅಶ್ವಿನಿ ಸ್ವತಂತ್ರವಾಗಿ ನಿರ್ದೇಶಕರಾಗುತ್ತಿದ್ದಾರೆ.
ಈ ಚಿತ್ರದ ಕಥಾ ನಾಯಕ ರಾಜ್ ಸೂರ್ಯ. ಇವರ ಎರಡು ಚಿತ್ರಗಳು ಸಂಚಾರಿ ಹಾಗೂ ಜಟಾಯು ಪಾತ್ರಕ್ಕೆ ವಿರುದ್ಧವಾದ ಪಾತ್ರವನ್ನು ಈ ಚಿತ್ರದಲ್ಲಿ ನಿರ್ವಹಿಸುತ್ತಿದ್ದಾರೆ.
ವಿದೇಶಿ ನಾಯಕಿಯೇ ಈ ಚಿತ್ರಕ್ಕೆ ಅವಶ್ಯಕತೆ ಇರುವುದರಿಂದ ದೆಹಲಿ ಇಂದ ಆಕರ್ಷಿಕ ಆಯ್ಕೆ ಆಗಿದ್ದಾರೆ.
Pingback: regression testing tools for desktop application