ಜಿಯೋ ಹಾಟ್‌ಸ್ಟಾರ್ ನಲ್ಲಿ “ಹಾರ್ಟ್‌ಬೀಟ್” ಸರಣಿ

ಜಿಯೋ ಹಾಟ್‌ಸ್ಟಾರ್ ಬಹುನಿರೀಕ್ಷಿತ ಮೆಡಿಕಲ್ ಡ್ರಾಮಾ ಸರಣಿ “ಹಾರ್ಟ್‌ಬೀಟ್”  ನ್ನು ಕನ್ನಡದಲ್ಲಿ ನವೆಂಬರ್ 28ರಿಂದ ಪ್ರಾರಂಭಿಸಿದೆ.

100 ಎಪಿಸೋಡ್‌  ಒಳಗೊಂಡಿರುವ ಈ ಸರಣಿ ,   ವೈದ್ಯಕೀಯ ಜಗತ್ತಿನ ಮಾನವೀಯ ಮುಖವನ್ನು ಹಿಡಿದಿಡುವ, ಹೃದಯಕ್ಕೆ ಹತ್ತಿರದ ಕಥೆಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸಲು ಸಜ್ಜಾಗಿದೆ.

ಈ ಸರಣಿಗೆ ಪ್ರೇಕ್ಷಕರಿಂದ ಅತ್ಯಂತ ಉತ್ತಮ ಪ್ರತಿಕ್ರಿಯೆ ದೊರೆತಿದೆ. IMDB ರೇಟಿಂಗ್ 8.6  ನ್ನು ಈ ಸರಣಿ ಪಡೆದುಕೊಂಡಿದೆ. ಸರಣಿಯನ್ನು ದೀಪಕ್ ಸುಂದರರಾಜನ್ ಬರೆದು, ದೀಪಕ್ ಸುಂದರರಾಜನ್, ಅಬ್ದುಲ್ ಕಬೀಝ್ ಮತ್ತು ಚಿದಂಬರಂ ಮಣಿವಣ್ಣನ್ ನಿರ್ದೇಶಿಸಿದ್ದಾರೆ. ಸರಣಿಯ ಮುಖ್ಯ ಪಾತ್ರದಲ್ಲಿ ದೀಪಾ ಬಾಲು, ಜೊಅನುಮೋಲ್, ಚಾರುಕೇಶ್, ಕಾರ್ತಿಕ್ ಕುಮಾರ್ ಕಾಣಿಸಿಕೊಂಡಿದ್ದಾರೆ.

ಅಮೇರಿಕದ ಖ್ಯಾತ ಮೆಡಿಕಲ್ ಡ್ರಾಮಾಗಳಾದ ನ್ಯೂ ಆಮ್ಸ್‌ಟರ್ಡ್ಯಾಮ್ ಮತ್ತು ಗ್ರೇ’ಸ್ ಅನಾಟಮಿ ಯ ಶೈಲಿಯನ್ನು ಈ ಸರಣಿ ಹೋಲುತ್ತದೆ.  ಇಲ್ಲಿ ಸರ್ಜಿಕಲ್ ಇಂಟರ್ನ್‌ಗಳು, ರೆಸಿಡೆಂಟ್‌ಗಳು ಮತ್ತು ಅಟೆಂಡಿಂಗ್ ವೈದ್ಯರ ದಿನನಿತ್ಯದ ವೃತ್ತಿಜೀವನದ ಒತ್ತಡಗಳು ಹಾಗೂ ಅವರ ವೈಯಕ್ತಿಕ ಬದುಕಿನ ಸಂಘರ್ಷಗಳು ನೈಜವಾಗಿ ಮೂಡಿವೆ.

ಹಾರ್ಟ್‌ಬೀಟ್  ನಲ್ಲಿ ರಿನಾ ಎಂಬ ಪ್ರತಿಭಾವಂತ ಯುವ ವೈದ್ಯೆಯ ಕಥೆ ಇದೆ. ರಿನಾ, ಜನಪ್ರಿಯ ಜನರಲ್ ಸರ್ಜನ್ ಡಾ. ರಧಿ ಅವರ ದೂರವಾದ ಮಗಳು ಎಂಬುದು ಬಹಿರಂಗವಾದಾಗ, ರಿನಾ ಮತ್ತು ರಧಿಯ ಜೀವನ ಹೊಸ ತಿರುವನ್ನು ಪಡೆಯುತ್ತವೆ. ಭೂತಕಾಲದ ರಹಸ್ಯಗಳು ಬೆಳಕಿಗೆ ಬರುತ್ತಿದ್ದಂತೆಸಂಬಂಧಗಳು, ಕರ್ತವ್ಯಗಳು ಮತ್ತು ಭಾವನೆಗಳು ಪರಸ್ಪರ ಮುಖಾಮುಖಿಯಾಗುತ್ತವೆ.

——

 

Be the first to comment

Leave a Reply

Your email address will not be published. Required fields are marked *

Translate »
error: Content is protected !!