‘ಗ್ರಾಮಾಯಣ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

https://youtu.be/8uLAuXMZ4Pk

ವಿನಯ್ ರಾಜಕುಮಾರ್ ನಟಿಸುತ್ತಿರುವ ‘ಗ್ರಾಮಾಯಣ’ ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ. ಸುಮಾರು ಐದು ನಿಮಿಷಗಳಿಷ್ಟಿರುವ ಈ ಟೀಸರ್​ನ ಪ್ರಾರಂಭದಲ್ಲಿ ಹಳ್ಳಿ ಬಿಟ್ಟು ಪಟ್ಟಣ ಸೇರಿದವರ ಅಭಿಪ್ರಾಯಗಳಿವೆ. ಅಲ್ಲಿಂದ ಡಾ. ರಾಜಕುಮಾರ್ ಅವರ ಧ್ವನಿಯಲ್ಲಿ ಗಾಜನೂರಿನ ಪರಿಚಯವಿದೆ. ಅಣ್ಣಾವ್ರು, ತಾವು ಹುಟ್ಟಿ ಬೆಳೆದ ಊರಿನ ಬಗ್ಗೆ ಪರಿಚಯಿಸಿರುವ ವಿಡಿಯೋ ಇದೆ. ಇದಾದ ಬಳಿಕ ಗ್ರಾಮಾಯಣ ಚಿತ್ರದ ಅಸಲಿ ಟೀಸರ್ ತೆರೆದು ಕೊಳ್ಳುತ್ತೆ. ವರನಟ ರಾಜಕುಮಾರ್ ಅವರ ಹುಟ್ಟಿದ ಮನೆಯಿಂದ ನಾಯಕ ನಟ ವಿನಯ್ ಹೊರ ಬಂದು, ಕುರಿ ಮರಿಯನ್ನು ಎತ್ತಿಕೊಳ್ಳುವ ಸೀನ್​​ನೊಂದಿಗೆ ಟೀಸರ್ ಮುಕ್ತಾಯವಾಗುತ್ತದೆ. ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಟೀಸರ್ ಬಿಡುಗಡೆಯಾದಂತೆ ಕಾಣಿಸುತ್ತೆ. ಈ ಟೀಸರ್ ಒಮ್ಮೆ ನೋಡಿದ್ರೆ ಮತ್ತೆ ಮತ್ತೇ ನೋಡಬೇಕು ಅನ್ನಿಸುತ್ತೆ. ಕಾರಣ ಅದರಲ್ಲಿರುವ ಕಂಟೆಂಟ್​​. ಅದರಲ್ಲೂ ಹಳ್ಳಿ ಬಿಟ್ಟು ಪಟ್ಟಣ ಸೇರಿರುವರ ನೆನಪುಗಳನ್ನು ಬಡಿದೆಬ್ಬಿಸುವಂತಿದೆ ಈ ಟೀಸರ್​.  ಇನ್ನು ಗ್ರಾಮಾಯಣ ಚಿತ್ರವನ್ನು ದೇವನೂರು ಚಂದ್ರು ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಎನ್​​.ಎಲ್​.ಎನ್ ಮೂರ್ತಿ ಎಂಬುವರು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ವಿನಯ್ ರಾಜಕುಮಾರ್​, ಅಮೃತಾ ಅಯ್ಯರ್ , ಸಂಪತ್ ಮೈತ್ರಿಯಾ, ಅಪರ್ಣಾ, ಸೀತಾ ಕೋಟೆ, ಶ್ರೀನಿವಾಸ್ ಪ್ರಭು, ಮಂಜುನಾಥ್ ಹೆಗಡೆ ಸೇರಿದಂತೆ ಮುಂತಾದವರು ನಟಿಸಿದ್ದಾರೆ.

This Article Has 2 Comments
  1. Pingback: roofer Malden

  2. Pingback: 토토사이트

Leave a Reply

Your email address will not be published. Required fields are marked *

Translate »
error: Content is protected !!