ಇಂದು ಬಿಡುಗಡೆಯಾಗಿರುವ ಚಿತ್ರಗಳು

ಇಂದು ತೆರೆಗೆ `ಹೈಪರ್’
ಎಂ.ಬಿಗ್ ಪಿಕ್ಚರ್ಸ್ ಲಾಂಛನದಲ್ಲಿ ಎಂ.ಕಾರ್ತಿಕ್ ಅವರು ನಿರ್ಮಿಸಿರುವ `ಹೈಪರ್` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಚಿತ್ರದ ಟ್ರೇಲರ್ ಹಾಗೂ ಹಾಡುಗಳಿಗೆ ಯೂಟ್ಯೂಬ್‍ನಲ್ಲಿ ಸಿಕ್ಕಿರುವ ಅಪಾರ ಜನಮನ್ನಣೆಗೆ ನಾಯಕ ಅರ್ಜುನ್ ಆರ್ಯ ಸೇರಿದಂತೆ ಚಿತ್ರತಂಡ ಸಂತಸ ಪಟ್ಟಿದ್ದಾರೆ.
ಈ ಚಿತ್ರವನ್ನು ಗಣೇಶ್ ವಿನಾಯಕ್ ನಿರ್ದೇಶಿಸಿದ್ದಾರೆ. ಕಾಲೇಜ್ ಲವ್ ಸ್ಟೊರಿ ಹಾಗೂ ಅಪ್ಪ- ಮಗಳ ಭಾಂಧವ್ಯದ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ಐದು ಹಾಡುಗಳಿದ್ದು, ಡಿ.ಇಮಾನ್ ಸಂಗೀತ ನೀಡಿದ್ದಾರೆ. ಶಕ್ತಿವೇಲ್ ಅವರ ಛಾಯಾಗ್ರಹಣ, ರೂಬನ್ ಸಂಕಲನ, ಥ್ರಿಲ್ಲರ್ ಮಂಜು, ಮಾಸ್ ಮಾದ, ವಿಕ್ರಂ, ಹೈಪರ್ ನೂರ್ ಸಾಹಸ ನಿರ್ದೇಶನ, ಕÀಲೈ, ಮುರಳಿ ನೃತ್ಯ ನಿರ್ದೇಶನ ಹಾಗೂ ಕನಕ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಎ.ಪಿ.ಅರ್ಜುನ್, ಬಹದ್ದೂರ್ ಚೇತನ್, ದಿಲ್‍ವಾಲ ಅನಿಲ್ ಹಾಗೂ ಗೌಸ್‍ಫಿûರ್ ಬರೆದಿದ್ದಾರೆ. ಅರ್ಜುನ್ ಆರ್ಯ, ಶೀಲ, ರಂಗಾಯಣ ರಘು, ಶೊಭ್‍ರಾಜ್, ಬುಲೆಟ್ ಪ್ರಕಾಶ್, ಅಚ್ಯುತಕುಮಾರ್, ಶ್ರೀನಿವಾಸಪ್ರಭು, ಬ್ಯಾಂಕ್ ಜನಾರ್ದನ್, ವೀಣಾಸುಂದರ್, ಲಕ್ಷ್ಮೀಸಿದ್ದಯ್ಯ, ಉಮೇಶ್ ಪುಂಗ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಇಂದು ತೆರೆಗೆ `ಕುಲ್ಫಿ`
ಎ ಎಂ ಎಸ್ ಪೆÇ್ರಡಕ್ಷನ್ಸ್ ಲಾಂಛನದಲ್ಲಿ ಮುನಿಸ್ವಾಮಿ ಎಸ್.ಡಿ ಅವರು ನಿರ್ಮಿಸಿರುವ `ಕುಲ್ಫೀ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಖ್ಯಾತ ವಿತರಕರಾದ ಬಹರ್ ಫಿûಲಂಸ್ ಭಾಷಾ ಅವರು ಈ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ.
ಮಂಜು ಹಾಸನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ನರಸಿಂಹಮೂರ್ತಿ ಅವರ ಛಾಯಾಗ್ರಹಣವಿದೆ. ಅಭೀಷೇಕ್ ಸಂಗೀತ ನಿರ್ದೇಶನ, ಮಾಸ್ ಮನೋಹರ್ ಸಾಹಸ ನಿರ್ದೇಶನ ಹಾಗೂ ಹೈಟ್ ಮಂಜು ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸಿನೋಲ್, ದಿಲೀಪ್, ಗಿರೀಶ್, ಲಾರೆನ್ಸ್, ರಮೇಶ್ ಭಟ್, ಬಿರಾದಾರ್ ಮುಂತಾದವರಿದ್ದಾರೆ.

ಇಂದು ತೆರೆಗೆ `*121#`
ನೇಕಾರ ಸಿನಿ ಎಂಟರ್‍ಪ್ರೈಸಸ್ ಲಾಂಛನದಲ್ಲಿ ಕಿರಣ್‍ಕುಮಾರ್ ಟಿ.ಎಂ ನಿರ್ಮಿಸಿರುವ `*121#`ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ರಾದಾಕೃಷ್ಣಾಚಾರಿ ಸಹ ನಿರ್ಮಾಪಕರಾಗಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಅಜಯ್ ಕುಮಾರ್.
ದೋಸ್ತಿ ಆನಂದ್ ಕಥೆ ಬರೆದು ಸಂಕಲನದೊಂದಿಗೆ ನಿರ್ದೇಶನವನ್ನು ಮಾಡಿರುವ ಈ ಚಿತ್ರಕ್ಕೆ ದೋಸ್ತಿ ಆನಂದ್ ಹಾಗೂ ಸೋಮು ಹೊಯ್ಸಳ ಚಿತ್ರಕಥೆ, ಬರೆದಿದ್ದಾರೆ. ಆಕಾಶ್ ಜಾಧವ್ ಹಾಗೂ ರಾಘವೇಂದ್ರ ವಿ ಸಂಗೀತ ನಿರ್ದೇಶನ ಹಾಗೂ ಕಾರ್ತಿಕ್ ಮಳ್ಳೂರ್ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ವಿನಯ್ ಚಂದರ್, ವಿದ್ಯಾ ವಿರ್ಶ್, ನವೀನ್, ಮಜಾ ಟಾಕೀಸ್ ಪವನ್, ಉಗ್ರಂ ಮಂಜು, ಸ್ವಾತಿ ಮುಂತಾದವರಿದ್ದಾರೆ

Be the first to comment

Leave a Reply

Your email address will not be published. Required fields are marked *

Translate »
error: Content is protected !!