ಸೀತಾ ಮಾತೆಯ ಪಾತ್ರಕ್ಕೆ ಶುದ್ಧ ಹಿಂದಿ ಅಗತ್ಯವಿರುವುದರಿಂದ, ಸಾಯಿ ಪಲ್ಲವಿ ಅವರ ಧ್ವನಿಯನ್ನು ಬೇರೆ ವೃತ್ತಿಪರರಿಂದ ಡಬ್ ಮಾಡಿಸಲು ‘ರಾಮಾಯಣ’ ಚಿತ್ರತಂಡ ಯೋಚಿಸುತ್ತಿದೆ.
ಸಾಯಿ ಪಲ್ಲವಿ ಅವರ ‘ಏಕ್ ದಿನ್’ ಚಿತ್ರದ ಹಿಂದಿ ಉಚ್ಚಾರಣೆಯ ಕುರಿತು ವ್ಯಕ್ತವಾದ ಟೀಕೆಗಳಿಂದಾಗಿ ‘ರಾಮಾಯಣ’ ಚಿತ್ರತಂಡ ದೊಡ್ಡ ನಿರ್ಧಾರಕ್ಕೆ ಬಂದಿದೆ.
‘ಏಕ್ ದಿನ್’ ಚಿತ್ರದಲ್ಲಿ ಆಮಿರ್ ಖಾನ್ ಪುತ್ರ ಜುನೈದ್ ಖಾನ್ ಜೊತೆ ಸಾಯಿ ಪಲ್ಲವಿ ನಟಿಸಿದ್ದಾರೆ. ಸಾಯಿ ಪಲ್ಲವಿಯ ಹಿಂದಿ ಉಚ್ಚಾರಣೆ ಅಷ್ಟೇನೂ ಪರಿಣಾಮಕಾರಿಯಾಗಿರಲಿಲ್ಲ ಎಂಬುದು ಸಿನಿಪ್ರೇಮಿಗಳ ಅಭಿಪ್ರಾಯ. ಹಿನ್ನೆಲೆಯಲ್ಲಿ, ಸಾಯಿ ಪಲ್ಲವಿ ಅವರ ಧ್ವನಿಯನ್ನು ಬಳಸುವ ಬದಲು ಬೇರೆ ವೃತ್ತಿಪರ ಡಬ್ಬಿಂಗ್ ಕಲಾವಿದರಿಂದ ಧ್ವನಿ ನೀಡಿಸಲು ತಯಾರಕರು ಯೋಚಿಸುತ್ತಿದ್ದಾರೆ.
ಸಾಯಿ ಪಲ್ಲವಿ ಅವರ ಹಿಂದಿ ಮಾತುಗಳ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್‌ಗಳು ಶುರುವಾಗಿವೆ. ‘ ಹಿಂದಿ ಪದಗಳನ್ನೇ ಸರಿಯಾಗಿ ಉಚ್ಚರಿಸಲು ಬಾರದ ನಟಿಯನ್ನು ಸೀತೆ ಪಾತ್ರಕ್ಕೆ ಆಯ್ಕೆ ಮಾಡಿದ್ದಾದರೂ ಏಕೆ?’ ಎಂದು ಹಲವರು ಪ್ರಶ್ನಿಸಿದ್ದಾರೆ.
ಈ ಹಿಂದೆ ಸೀತಾ ಮಾತೆಯ ಪಾತ್ರಕ್ಕೆ ಆಲಿಯಾ ಭಟ್ ಅವರನ್ನು ಫೈನಲ್ ಮಾಡಲಾಗಿತ್ತು, ಆದರೆ ಡೇಟ್ಸ್ ಸಮಸ್ಯೆಯಿಂದ ಅವರು ಹೊರಬಂದಿದ್ದರು. ಈಗ ಸಾಯಿ ಪಲ್ಲವಿ ಅವರ ಆಯ್ಕೆಯ ಬಗ್ಗೆ ಚರ್ಚೆ ಶುರುವಾಗಿದೆ.
ರಣಬೀರ್ ಕಪೂರ್ ರಾಮನಾಗಿ ಮತ್ತು ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ನಟಿಸುತ್ತಿರುವ ‘ರಾಮಾಯಣ’ ಚಿತ್ರದ ಮೊದಲ ಭಾಗ ಇದೇ ವರ್ಷದ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.
—-





Be the first to comment