ಧೃತಿ

ಸಾಮಾಜಕ್ಕೆ ಉತ್ತಮ ಸಂದೇಶ ಹೊತ್ತು ತರುತ್ತಿರುವ ‘ಧೃತಿ’

ಚಿತ್ರ ನಿರ್ದೇಶನ ಹಲವು ಪ್ರತಿಭೆಗಳ ಕನಸು. ಅದು ಕೆಲವರಿಗೆ ನನಸಾಗುತ್ತದೆ. ಕೆಲವರಿಗೆ ಕನಸಾಗಿಯೇ ಉಳಿಯುತ್ತದೆ. ಉದ್ಯಮಿ ಜಗದೀಶ್ ಕೂಡ ಚಿಕ್ಕಂದಿನಿಂದಲೂ ನಿರ್ದೇಶಕನಾಗುವ ಕನಸು ಹೊತ್ತವರು. ಆ ಕನಸನ್ನು “ಧೃತಿ” ಚಿತ್ರವನ್ನು ನಿರ್ದೇಶಿಸುವ ಮೂಲಕ ನನಸಾಗಿಸಿಕೊಂಡಿದ್ದಾರೆ ಜಗದೀಶ್. ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುವ “ಧೃತಿ” ಚಿತ್ರದ ಕುರಿತು ನಿರ್ದೇಶಕ ಜಗದೀಶ್ ಹಾಗೂ ಚಿತ್ರತಂಡದವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು ಹೀಗೆ.

ನಾನೊಬ್ಬ ಉದ್ಯಮಿ. ‌ಚಿಕ್ಕಂದಿನಿಂದಲೂ ಚಿತ್ರ ನಿರ್ದೇಶನ ಮಾಡಬೇಕೆಂಬ ಆಸೆ ನನಗೆ. ಅದು ಈಗ ಈ ಚಿತ್ರದ ಮೂಲಕ ಈಡೇರಿದೆ. ಆರು ವರ್ಷಗಳ ಹಿಂದೆ ಈ ಚಿತ್ರದ ಸ್ಕ್ರಿಪ್ಟ್ ವರ್ಕ್ ಆರಂಭವಾಗಿದ್ದು. ಬಂಡವಾಳ ಹೆಚ್ಚು ಇರದ ಕಾರಣ ಮೊಬೈಲ್ ನಲ್ಲೇ ಚಿತ್ರೀಕರಣ ಮಾಡುವ ಯೋಜನೆ ಇತ್ತು. ಆನಂತರ ನನ್ನ ಪತ್ನಿ ಹಾಗೂ ಸಹೃದಯಿ ಸ್ನೇಹಿತರು ಸಹಕಾರ ನೀಡಿದರು. ಆನಂತರ ಈ ಚಿತ್ರವನ್ನು ಕ್ಯಾಮೆರಾದಲ್ಲಿ ಚಿತ್ರಿಸಲಾಯಿತು‌. ಚಿತ್ರೀಕರಣ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಛಾಯಾಗ್ರಾಹಕರು ವಿಧಿವಶರಾದರು‌‌. ಆಗ ನಾನೇ ಛಾಯಾಗ್ರಹಣದ ಬಗ್ಗೆ ತಿಳಿದುಕೊಂಡು ಆ ಜವಾಬ್ದಾರಿಯನ್ನು ನಿರ್ವಹಿಸಿದ್ದೆ. ನಮ್ಮ ಸುತ್ತಮುತ್ತ ನಡೆಯುವ ಹಾಗೂ ನಡೆದಿರುವ ಹೆಣ್ಣಿನ ಮೇಲಿನ ಶೋಷಣೆಯ ಬಗ್ಗೆ ಈ ಚಿತ್ರದ ಕಥೆ ಇದೆ. ಹಾಗಂತ ನಮ್ಮ ಚಿತ್ರದಲ್ಲಿ ಬರೀ ಶೋಷಣೆಯನ್ನೇ ತೋರಿಸಿಲ್ಲ. ಅದಕ್ಕೆ ಪರಿಹಾರವನ್ನು ತೋರಿಸಿದ್ದೇವೆ. ಪ್ರಶಾಂತ್ ಈ ಚಿತ್ರದ ನಾಯಕ. ಆಂಚಲ್ ನಾಯಕಿ. ಹಲವಾರು ನೂತನ ಪ್ರತಿಭೆಗಳು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ‌‌. ಪ್ರಸನ್ನ ಕುಮಾರ್ ಅವರ ಸಂಗೀತ ಈ ಚಿತ್ರದ ಹೈಲೆಟ್. ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ ಹಾಗೂ ನಿರ್ಮಾಣ ಕೂಡ ನನ್ನದೆ‌. ಮೇ 8 ರಂದು ನಮ್ಮ ಚಿತ್ರ ತೆರೆಗೆ ಬರುತ್ತಿದೆ. ದಯವಿಟ್ಟು ಎಲ್ಲರೂ ಚಿತ್ರಮಂದಿರಗಳಲ್ಲೇ ನಮ್ಮ ಚಿತ್ರ ನೋಡಿ ಎಂದರು ನಿರ್ದೇಶಕ ಹಾಗೂ ನಿರ್ಮಾಪಕ ಜಗದೀಶ್ .

ಇದು ನನ್ನ ಮೊದಲ ಚಿತ್ರ. ಮೊದಲ ಚಿತ್ರದಲ್ಲೇ ಇಂತಹ ಒಳ್ಳೆಯ ಪಾತ್ರ ಸಿಕ್ಕಿರುವುದು ಖುಷಿಯಾಗಿದೆ. “ಧೃತಿ” ನನ್ನ ಪಾತ್ರದ ಹೆಸರು. ಸಾಕಷ್ಟು ಸಮಸ್ಯೆ ಎದುರಾದರೂ “ಧೃತಿಗೆಡದೆ” ಎಲ್ಲವನ್ನು ಎದುರಿಸುವ ಪಾತ್ರ ನನ್ನದು ಎಂದು ನಾಯಕಿ ಆಂಚಲ್ ಹೇಳಿದರು.

ನಾನು ಮೂಲತಃ ನೃತ್ಯ ಕಲಾವಿದ ಹಾಗೂ ನೃತ್ಯ ನಿರ್ದೇಶಕ. ರಂಗಭೂಮಿ ಕಲಾವಿದನೂ ಹೌದು. ಯಾವ ರೀತಿಯ ಪಾತ್ರದ ಮೂಲಕ ನಾನು ನಟನಾಗಿ ಚಿತ್ರರಂಗ ಪ್ರವೇಶಿಸಬೇಕೆಂದುಕೊಂಡಿದ್ದೆನೊ ಅದೇ ತರಹದ ಪಾತ್ರ ನನಗೆ ಸಿಕ್ಕಿರುವುದು ಖುಷಿಯಾಗಿದೆ ಎಂದು ನಾಯಕ ಪ್ರಶಾಂತ್ ತಿಳಿಸಿದರು.

ಸಂಗೀತದ ಕುರಿತು ಪ್ರಸನ್ನ ಕುಮಾರ್ ಮಾಹಿತಿ ನೀಡಿದರು. ನಟರಾದ ಮನೋಜ್ ಕುಮಾರ್ ಹಾಗೂ ಮಧು ಮಂದಗೆರೆ ತಮ್ಮ ಪಾತ್ರದ ಕುರಿತು ಮಾತನಾಡಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!