ದುನಿಯಾ ವಿಜಯ್ ಅಭಿನಯದ, ಪೂರಿ ಜಗನ್ನಾಥ್ ನಿರ್ದೇಶನದ ‘ಸ್ಲಮ್ಡಾಗ್: 33 ಟೆಂಪಲ್ ರೋಡ್’ ಸಿನಿಮಾದಲ್ಲಿ ಖ್ಯಾತ ನಟಿ ಟಬು ನಟಿಸುತ್ತಿದ್ದಾರೆ.
ಗೌರಿ ಹೆಗ್ಡೆ ಎಂಬ ಖಡಕ್ ಡೆಪ್ಯುಟಿ ಕಮಿಷನರ್ ಪಾತ್ರದಲ್ಲಿ ಟಬು ಕಾಣಿಸಿಕೊಂಡಿದ್ದಾರೆ. ನಟಿಸುತ್ತಿದ್ದಾರೆ. ಅವರ ಆಕ್ಷನ್ ಝಲಕ್ ಹೊರಬಿದ್ದಿದ್ದು, ಸ್ವತಃ ತೆಲುಗಿನಲ್ಲಿ ಡಬ್ಬಿಂಗ್ ಮಾಡಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಚಿತ್ರತಂಡ ಅವರ ಪಾತ್ರದ ವಿಶೇಷ ಝಲಕ್ ಹಂಚಿಕೊಂಡಿದೆ.
ಈ ಸಿನಿಮಾ ತೆಲುಗು ಜೊತೆಗೆ ಕನ್ನಡದಲ್ಲೂ ಬರುತ್ತಿದೆ. ಕನ್ನಡದಲ್ಲೂ ಈ ಚಿತ್ರವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಬೆಳ್ಳಿತೆರೆಯ ಮೇಲೆ ಟಬು ಅವರ ಈ ಹೊಸ ಅವತಾರವನ್ನು ವೀಕ್ಷಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಸಂಯುಕ್ತ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ವಿಜಯ್ ಸೇತುಪತಿ, ದುನಿಯಾ ವಿಜಯ್, ಬ್ರಹ್ಮಾಜಿ ಮತ್ತು ವಿಟಿವಿ ಗಣೇಶ್ ಪ್ರಮುಖ ಪಾತ್ರದಲ್ಲಿದ್ದಾರೆ.
ಈ ಬಹುಭಾಷಾ ಚಿತ್ರವನ್ನು ಪೂರಿ ಜಗನ್ನಾಥ್, ಚಾರ್ಮಿ ಕೌರ್ ಹಾಗೂ ಜೆಬಿ ನಾರಾಯಣ ರಾವ್ ಕೊಂಡ್ರೊಲ್ಲ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಹರ್ಷವರ್ಧನ್ ರಾಮೇಶ್ವರ್ ಸಂಗೀತ ನೀಡುತ್ತಿದ್ದಾರೆ. ಶೀಘ್ರ ಚಿತ್ರದ ಬಿಡುಗಡೆ ದಿನಾಂಕ ಪ್ರಕಟವಾಗಲಿದೆ.





Be the first to comment