‘ಕಾಕ್ಟೇಲ್ 2’ನಲ್ಲಿ ರಶ್ಮಿಕಾ ನಟನೆ ಟಾರ್ಗೆಟ್

ಭಾರಿ ನಿರೀಕ್ಷೆಯೊಂದಿಗೆ ಬಿಡುಗಡೆಯಾದ ರಶ್ಮಿಕಾ ಮಂದಣ್ಣ, ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಅಭಿನಯದ ‘ಕಾಕ್ಟೇಲ್ 2’ ಸಿನಿಮಾದಲ್ಲಿ ರಶ್ಮಿಕಾ ನಟನೆ ಟಾರ್ಗೆಟ್ ಆಗಿದೆ.

‘ರಶ್ಮಿಕಾ ಪಾತ್ರದ ಬರವಣಿಗೆ ದುರ್ಬಲವಾಗಿದ್ದು, ಅವರ ಸಂಭಾಷಣೆಗಳು ಅತಿಯಾದ ನಾಟಕೀಯತೆಯಿಂದ ಕೂಡಿವೆ.   ರಶ್ಮಿಕಾ ಮಂದಣ್ಣ ಅವರ ಹಿಂದಿ ಉಚ್ಚಾರಣೆ ಹಾಗೂ ಅಭಿನಯ ನಿರೀಕ್ಷಿತ ಮಟ್ಟದಲ್ಲಿಲ್ಲ’ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದಾರೆ.

ಭರ್ಜರಿ ಪ್ರಚಾರ, ಸ್ಟಾರ್‌ಕಾಸ್ಟ್ ಹಾಗೂ ದೊಡ್ಡ ಬಜೆಟ್ ನಡುವೆಯೂ  ‘ಕಾಕ್ಟೇಲ್ 2’ ಸಿನಿಮಾ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿದೆ. ಇದು ಕೇವಲ ಗ್ಲಾಮರ್ ಮತ್ತು ಸ್ಟೈಲ್‌ಗಷ್ಟೇ ಸೀಮಿತವಾಗಿದ್ದು, ಕಥೆ ಹಾಗೂ ಭಾವನಾತ್ಮಕ ಆಳತೆ ಇಲ್ಲದ ಸಿನಿಮಾ ಎಂದು ಟೀಕಿಸಿದ್ದಾರೆ. ಕೆಲವರು ಇದನ್ನು ‘ಅನವಶ್ಯಕ ಸೀಕ್ವೆಲ್’ ಎಂದು ಕರೆದಿದ್ದು, ಮೂಲ ಚಿತ್ರದ ಮಟ್ಟವನ್ನು ಮುಟ್ಟಲು ಸಾಧ್ಯವಾಗಿಲ್ಲ ಎಂದಿದ್ದಾರೆ.

‘ಕಾಕ್ಟೇಲ್ 2 ಆತ್ಮವಿಲ್ಲದ ಸೀಕ್ವೆಲ್. ಇದು ಬೋರು ಹೊಡೆಸುವ ಹಾಗೂ ಟೊಳ್ಳಾದ ಅನುಭವ ನೀಡುವ ಸಿನಿಮಾ’ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಬರೆದುಕೊಂಡಿದ್ದಾರೆ.

‘ಕಾಕ್ಟೇಲ್ 2’ ಬಾಕ್ಸ್ ಆಫೀಸ್‌ನಲ್ಲಿ ಮುಂದಿನ ದಿನಗಳಲ್ಲಿ ಹೇಗೆ ಪ್ರದರ್ಶನ ನೀಡಲಿದೆ ಎಂಬುದರ ಮೇಲೆ ಸಿನಿರಂಗದ ಕಣ್ಣು ನೆಟ್ಟಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!