‘ಡಾ. ರಾಜ್ ಸ್ಮಾರಕಕ್ಕೆ ಅಷ್ಟು ಜಾಗ ಏಕೆ?’

ವರನಟ ಡಾ. ರಾಜ್‌ಕುಮಾರ್ ಅವರ ಸ್ಮಾರಕಕ್ಕೆ 2.5 ಎಕರೆ ಜಾಗ ಯಾಕೆ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸ ಪ್ರಶ್ನೆ ಎತ್ತಿ ಅಭಿಮಾನಿಗಳ ಕೋಪಕ್ಕೆ ತುತ್ತಾಗಿದ್ದಾರೆ.

ನಾವು ರಾಜ್‌ಕುಮಾರ್ ಅವರನ್ನು ಒಬ್ಬ ಶ್ರೇಷ್ಠ ಕಲಾವಿದ ಎಂದು ಗೌರವಿಸುತ್ತೇವೆ. ಆದರೆ 2006ರಲ್ಲಿ ಬೆಂಗಳೂರಿನ ಕೇಂದ್ರ ಭಾಗದಲ್ಲಿ ಈ ನಟನ ಸ್ಮಾರಕ ಸಂಕೀರ್ಣಕ್ಕಾಗಿ 2.5 ಎಕರೆ ಭೂಮಿಯನ್ನು ನೀಡಿದ್ದು ಎಷ್ಟು ಸಮಂಜಸ? ಸರ್ಕಾರವು ಭೂಮಿಯನ್ನು ಮಂಜೂರು ಮಾಡುವಾಗ ಮತಗಳ ಮೇಲೆ ಕಣ್ಣಿಡುವ ಬದಲು ದೂರದೃಷ್ಟಿ ಮತ್ತು ಸಾರ್ವಜನಿಕ ಉಪಯುಕ್ತತೆಯನ್ನು ಗಮನಿಸಬೇಕು. 21ನೇ ಶತಮಾನದ ಭಾರತದಲ್ಲಿ ಭೂಮಿಗಾಗಿ ದೊಡ್ಡ ಹೋರಾಟವೇ ನಡೆಯುತ್ತಿದೆ ಎಂದು ಪೋಸ್ಟ್ ಮಾಡಿದ್ದಾರೆ.

ಮತ ಬ್ಯಾಂಕ್‌ಗಾಗಿ ಸರ್ಕಾರಗಳು ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ ಎಂಬ ಚೇತನ್ ಅವರ ಟೀಕೆ ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಅಭಿಮಾನಿಗಳು ರಾಜ್​ಕುಮಾರ್ ಅವರು ಕನ್ನಡ ಭಾಷೆಗೆ, ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಚೇತನ್ ಅಹಿಂಸ ಆವರಿಗೆ ನೆನಪು ಮಾಡುವ ಪ್ರಯತ್ನ ಮಾಡಿದ್ದಾರೆ.

ಇದೇ ವೇಳೆ ಕೆಲವರು ಇಂದಿರಾ ಗಾಂಧಿ, ರಾಜೀವ್ ಗಾಂಧಿ ಇನ್ನಿತರರ ಸಮಾಧಿ ಜಾಗದ ಉಲ್ಲೇಖವನ್ನು ಮಾಡಿ ಪ್ರತುತ್ತರ ನೀಡಿದ್ದಾರೆ.

ವರನಟನ ಬಗ್ಗೆಯೇ ಚೇತನ್ ಟೀಕೆ ಮಾಡಿರುವುದು ಹಲವರ ಕೆಂಗಣ್ಣಿಗೆ ಕಾರಣವಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!