ಮಂಗ್ಲಿ ವಿರುದ್ಧ ವಂಚನೆ ಆರೋಪ

ಜನಪದ ಮತ್ತು ಸಿನಿಮಾ ಹಾಡುಗಳ ಖ್ಯಾತ ಗಾಯಕಿ ಮಂಗ್ಲಿ ವಿರುದ್ಧ ವಂಚನೆ ಮತ್ತು ವಕೀಲರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣ ದಾಖಲಾಗಿದೆ.

ಮಂಗ್ಲಿ, ಅವರ ಸಹೋದರ ಶಿವ ಹಾಗೂ ಇತರರು ಹೂಡಿಕೆ ಹೆಸರಲ್ಲಿ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ಸುಮಾರು 100 ಮಂದಿಯಿಂದ 10 ಕೋಟಿ ರೂ. ಹಣವನ್ನು ಸಂಗ್ರಹಿಸಿ, ಬಹಳ ಸಮಯ ಕಳೆದರೂ ಲಾಭವನ್ನೂ ನೀಡದೆ ಮತ್ತು ಮೂಲ ಹಣವನ್ನು ಹಿಂತಿರುಗಿಸದೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಹಣ ಕಳೆದುಕೊಂಡ ಸಂತ್ರಸ್ತರು, ವಕೀಲ ಸುಬ್ಬರಾವ್ ಅವರನ್ನು ಸಂಪರ್ಕಿಸಿದ್ದಾರೆ.  ವಕೀಲರು ಸಂತ್ರಸ್ತರ ಹಣ ಹಿಂದಿರುಗಿಸುವಂತೆ ಕೇಳಿದಾಗ ಮಂಗ್ಲಿ, ಅವರ ಸಹೋದರ ಶಿವ, ನಿರ್ದೇಶಕ ವೇಣು ಉಡುಗುಲ ತಮಗೆ ಕರೆ ಮಾಡಿ ತೀವ್ರ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಹೈದಾರಾಬಾದ್​ನ ಪಂಜಗುಟ್ಟ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ  ಮಂಗ್ಲಿ, ಶಿವ, ನಿರ್ದೇಶ ವೇಣು ಉಡುಗುಲ ಹಾಗೂ ಇತರರ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!