ಮಾರ್ಚ್ 22ರಂದು ‘ಅವತಾರ ಪುರುಷ 2’ ರಿಲೀಸ್

ನಿರ್ದೇಶಕ ಸಿಂಪಲ್‌ ಸುನಿ,  ‘ಅವತಾರ ಪುರುಷ 2’ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ.

ಮಾರ್ಚ್ 22ರಂದು ‘ಅವತಾರ ಪುರುಷ 2’ ಸಿನಿಮಾ ರಿಲೀಸ್ ಆಗಲಿದೆ. ‘ಅವತಾರ ಪುರುಷ’ ಚಿತ್ರದ ಮುಂದುವರಿದ ಭಾಗ ಆಗಿ ‘ಅವತಾರ ಪುರುಷ 2’ ಸಿನಿಮಾ ಬಿಡುಗಡೆ ಆಗುತ್ತಿದೆ.  ‘ತ್ರಿಷಂಕು ಪಯಣ’ ಎನ್ನುವ ವಾಕ್ಯ ಪೋಸ್ಟರ್​ನಲ್ಲಿ ಹೈಲೈಟ್ ಆಗಿದೆ.

ಶರಣ್ ಹಾಗೂ ಆಶಿಕಾ ರಂಗನಾಥ್ ‘ಅವತಾರ ಪುರುಷ 2’ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಅವತಾರ ಪುರುಷ’ ಸಿನಿಮಾ 2022ರ ಮೇ 6ರಂದು ರಿಲೀಸ್ ಆಯಿತು. ಈ ಸಿನಿಮಾದಲ್ಲಿ ಹಾಸ್ಯದ ಜೊತೆ ಸಸ್ಪೆನ್ಸ್ ಕೂಡ ಇತ್ತು. ಸುನಿ ಮಾಟ ಮಂತ್ರದ ಕಥೆಯನ್ನು ಹೇಳಿದ್ದರು.  ಡೈಲಾಗ್ ಕಿಂಗ್ ಸಾಯಿಕುಮಾರ್, ಭವ್ಯ, ಶ್ರೀನಗರ ಕಿಟ್ಟಿ ಹೀಗೆ ಘಟಾನುಘಟಿ ಕಲಾವಿದರೇ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಕೆಲವರಿಗೆ ಸಿನಿಮಾ ಇಷ್ಟವಾಗಿದ್ದರೆ  ಕೆಲವರಿಗೆ ಬೋರ್ ಎನಿಸಿತ್ತು. ಚಿತ್ರತಂಡ ಕ್ಲೈಮ್ಯಾಕ್ಸ್‌ನಲ್ಲಿ ಸಣ್ಣ ಟ್ವಿಸ್ಟ್ ಕೊಟ್ಟು ‘ಅವತಾರ ಪುರುಷ 2’ ಸಿನಿಮಾ ಬಗ್ಗೆ ಕುತೂಹಲ ಮೂಡಿಸಿತ್ತು.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!