ಅ.29ರಂದು ಪ್ರೇಮಂ ಪೂಜ್ಯಂ ತೆರೆಗೆ

ಅಕ್ಟೋಬರ್ 29ರಂದು ಲವ್ಲೀ ಸ್ಟಾರ್ ಪ್ರೇಮ್ ನಟನೆಯ ಪ್ರೇಮಂ ಪೂಜ್ಯಂ ಚಿತ್ರಗಳು ಬೆಳ್ಳಿತೆರೆಗೆ ಬರಲಿದೆ.

ಪ್ರೇಮಂ ಪೂಜ್ಯಂ ಚಿತ್ರಕ್ಕೆ ರಾಘವೇಂದ್ರ ನಿರ್ದೇಶನ ಇದೆ. ರಕ್ಷಿತಾ ಕೆಡಂಬಾಡಿ, ಡಾ.ರಾಜ್ ಕುಮಾರ್ ಜಾನಕಿ ರಾಮನ್ ಬಂಡವಾಳ ಹಾಕಿದ್ದಾರೆ. ಇದೊಂದು ರೋಮ್ಯಾಂಟಿಕ್ ಜಾನರ್ ಸಿನಿಮಾ ಆಗಿದ್ದು, ಚಿತ್ರದಲ್ಲಿ ಪ್ರೇಮ್ ಹಲವು ಶೇಡ್ ಗಳಲ್ಲಿ ನಟಿಸುತ್ತಿದ್ದಾರೆ. ಬೃಂದಾ ಆಚಾರ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಐಂದ್ರಿತಾ ರೇ, ಮಾಸ್ಟರ್ ಆನಂದ್, ಮಾಳವಿಕಾ ಅವಿನಾಶ್ ಮುಂತಾದವರು ನಟಿಸಿದ್ದಾರೆ.

ಪ್ರೇಮಂ ಪೂಜ್ಯಂ ಚಿತ್ರ ನಟ ಪ್ರೇಮ್ ಅವರ 25 ನೇ ಸಿನಿಮಾ ಆಗಿರುವುದು ವಿಶೇಷ ಆಗಿದೆ. ಈ ಕಾರಣದಿಂದ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

ಇದಲ್ಲದೇ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಅವರ ಜೀವನ ಆಧರಿಸಿದ ಸಿನಿಮಾವನ್ನು ಭರ್ಜರಿ 400 ಕೋಟಿ ರೂಪಾಯಿ ಬಜೆಟ್ ನಲ್ಲಿ ತಯಾರಿಸಲಾಗುತ್ತಿದ್ದು ಇದಕ್ಕೆ ಪ್ರೇಮ್ ನಾಯಕ ಆಗಿ ಆಯ್ಕೆ ಆಗಿದ್ದಾರೆ. ಈ ಚಿತ್ರ ಹಾಲಿವುಡ್ ಮಟ್ಟದಲ್ಲಿ ತಯಾರಿ ಆಗುತ್ತಿದ್ದು, ಹಾಲಿವುಡ್ ತಂತ್ರಜ್ಞರು ಚಿತ್ರ ತಯಾರಿ ಮಾಡಲಿದ್ದಾರೆ ಎಂದು ಪ್ರೇಮ್ ಹೇಳಿದ್ದಾರೆ.

ಭಜರಂಗಿ 2 ಅಂದೇ ರಿಲೀಸ್: ಪ್ರೇಮ್ ಅವರ ಪ್ರೇಮಂ ಪೂಜ್ಯಂ ಚಿತ್ರ ಬಿಡುಗಡೆಯ ದಿನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಭಜರಂಗಿ 2 ಚಿತ್ರ ಸಹ ಬಿಡುಗಡೆ ಆಗುತ್ತಿದೆ.
ಭಜರಂಗಿ 2 ಚಿತ್ರವನ್ನು ಹರ್ಷ ಅವರುನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಜಯಣ್ಣ-ಭೋಗೇಂದ್ರ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಶಿವರಾಜ್ ಕುಮಾರ್‌ಗೆ ನಾಯಕಿಯಾಗಿ ‘ಜಾಕಿ’ ಖ್ಯಾತಿಯ ಭಾವನಾ ನಟಿಸಿದ್ದಾರೆ. ಹಿರಿಯ ನಟಿ ಶ್ರುತಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!