ಟಿವಿಕೆ ಪಕ್ಷ ಸ್ಥಾಪಿಸಿ ಚುನಾವಣಾ ಕಣಕ್ಕಿಳಿದಿರುವ ನಟ ದಳಪತಿ ವಿಜಯ್ ಸೈಕಲ್ ರೈಡ್ ವೇಳೆ ಗಾಬರಿಗೊಂಡು ಸೈಕಲ್ ಬಿಟ್ಟು ಸ್ಥಳದಿಂದ ಓಡಿದ ಘಟನೆ ವೈರಲ್ ಆಗಿದೆ.
ತಮಿಳುನಾಡು ರಾಜಕೀಯದಲ್ಲಿ ಹೆಜ್ಜೆ ಇಟ್ಟಿರುವ ದಳಪತಿ ವಿಜಯ್ ಅವರ ಚುನಾವಣಾ ಪ್ರಚಾರದ ವೇಳೆ ಘಟನೆ ನಡೆದಿದೆ. ಚುನಾವಣಾ ಕಣಕ್ಕಿಳಿದಿರುವ ದಳಪತಿ ವಿಜಯ್ ಕನ್ಯಾಕುಮಾರಿಯಲ್ಲಿ ಪ್ರಚಾರದ ವೇಳೆ ಸೈಕಲ್ ರೈಡ್ ಮಾಡುತ್ತಿದ್ದರು. ಈ ವೇಳೆ ಅಭಿಮಾನಿಗಳ ದೊಡ್ಡ ಗುಂಪು ಅವರನ್ನು ಸುತ್ತುವರೆದರು. ಭದ್ರತಾ ಆತಂಕದ ನಡುವೆ ಅವರು ಮುಂದೆ ಸಾಗುತ್ತಿದ್ದರು.
ಅಭಿಮಾನಿಯೋರ್ವ ಹೂವಿನ ಮಾಲೆಯನ್ನು ಎಸೆಯಲು ಮುಂದಾದ ಕ್ಷಣ ವಿಜಯ್ ಗಾಬರಿಗೊಂಡು ಅದನ್ನು ಬಾಂಬ್ ಎಂದು ಭಾವಿಸಿ ಸೈಕಲ್ ಬಿಟ್ಟು ಸ್ಥಳದಿಂದ ಓಡಿ ಕಾರಿನಲ್ಲಿ ಆಶ್ರಯ ಪಡೆದರು. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೇಗವಾಗಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಕೆಲವರು ಭದ್ರತಾ ಕಾರಣದಿಂದ ಈ ಕ್ರಮ ತೆಗೆದುಕೊಂಡಿರಬಹುದು ಎಂದು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು ವಿಜಯ್ ಸೈಕಲ್ ಬಿಟ್ಟು ಸ್ಥಳದಿಂದ ಓಡಿದ ನಡೆಗೆ ಟೀಕೆ ವ್ಯಕ್ತಪಡಿಸಿದ್ದಾರೆ.
—-





Be the first to comment