ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು,ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಸಿನಿಮಾಗೆ ʻA’ ಸರ್ಟಿಫಿಕೇಟ್ ನೀಡಿದೆ.
ಸಿನಿಮಾ ಆಗಸ್ಟ್ 26ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ. ಟಾಕ್ಸಿಕ್ ಸುಮಾರು 3 ಗಂಟೆ 14 ನಿಮಿಷಗಳ ರನ್ಟೈಮ್ ಹೊಂದಿದೆ. ಭರ್ಜರಿ ಆಕ್ಷನ್ ದೃಶ್ಯಗಳು ಹಾಗೂ ʻರಾʼ ಶೈಲಿಯ ಕಥಾವಸ್ತು ಇದ್ದು, ಸೆನ್ಸಾರ್ ಮಂಡಳಿ ʻಎʼ ಪ್ರಮಾಣಪತ್ರವನ್ನ ನೀಡಿದೆ.
ಗೀತು ಮೋಹನ್ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಆ್ಯಕ್ಷನ್ ಜೊತೆಗೆ ಆಳವಾದ ಭಾವನೆಗಳೂ ಇವೆ. ‘KGF’ ಸರಣಿಯ ಅದ್ಭುತ ಯಶಸ್ಸಿನ ಬಳಿಕ ಯಶ್ ಮುಂದಿನ ಸಿನಿಮಾ ಹೇಗಿರಲಿದೆ ಎಂಬ ಪ್ರಶ್ನೆಗೆ ‘ಟಾಕ್ಸಿಕ್’ ಟ್ರೈಲರ್ ತನ್ನದೇ ಶೈಲಿಯಲ್ಲಿ ಉತ್ತರ ನೀಡಿದೆ. ರಾ ಆ್ಯಕ್ಷನ್, ಗ್ಯಾಂಗ್ಸ್ಟರ್ ಜಗತ್ತು, ಅಧಿಕಾರದ ಆಟ, ದ್ರೋಹ, ಪ್ರೀತಿ ಮತ್ತು ಅಪಾಯಕಾರಿ ಸಂಬಂಧಗಳ ಸುತ್ತ ಹೆಣೆದಿರುವ ಕಥೆಯ ಸುಳಿವು ಟ್ರೈಲರ್ನಲ್ಲಿ ಸಿಕ್ಕಿದೆ.
ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ನಟಿಸಿದ್ದಾರೆ.
—–





Be the first to comment