ರಾಣಿ ಜೇನು ರೊಮ್ಯಾಂಟಿಕ್ ಮ್ಯೂಸಿಕ್ ಆಲ್ಬಂ ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆ

ಸಂಗೀತ ಕ್ಷೇತ್ರದಲ್ಲಿ ತನ್ನದೇ ಹೆಸರು ಮಾಡಿರುವ ಜಂಕಾರ್ ಮ್ಯೂಸಿಕ್ ಸಂಸ್ಥೆ ಈವರೆಗೂ ಸಾಕಷ್ಟು ವಿಡಿಯೋ ಆಲ್ಬಂ ಬಿಡುಗಡೆ ಮಾಡಿದೆ. ಈ ಬಾರಿ ಸೋನಿ ಆಚಾರ್ಯ ಅವರ ಸಾರಥ್ಯದಲ್ಲಿ ರಾಣಿ ಜೇನು ಎಂಬ ರೊಮ್ಯಾಂಟಿಕ್ ವಿಡಿಯೋ ಜಂಕಾರ್ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ.

ಸೋನಿ‌‌ ಆಚಾರ್ಯ ಮತ್ತು ಪೂಜಾ ನಾಣಯ್ಯ ನಟಿಸಿರುವ ಈ ಸುಂದರ ಆಲ್ಬಂನ ಚಿತ್ರೀಕರಣ ಶ್ರೀರಂಗಪಟ್ಟಣ, ಕರಿಫಟ್ಟ ಸುತ್ತಮುತ್ತಲಿನ ಸುಂದರ ಪರಿಸರದಲ್ಲಿ ಚಿತ್ರೀಕರಣವಾಗಿದೆ. ಸೋನಿ ಆಚಾರ್ಯ ಸಾಹಿತ್ಯ ಬರೆದು, ಸಂಗೀತ ನೀಡಿ, ನಟಿಸಿರುವ ಈ ಆಲ್ಬಂ ಗೆ ರಾಮ್ ಸಂತೋಷ್ ಛಾಯಾಗ್ರಹಣ, ಶಶಾಂಕ್ ಮುರಳೀಧರನ್ ಸಂಕಲನ ಹಾಗೂ ಶ್ರೀಧರ್ ಶ್ರೀ ನೃತ್ಯ ನಿರ್ದೇಶನವಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!