“ನವಮಿ 9.9.1999”ಚಿತ್ರದ ಫಸ್ಟ್‌ ಲುಕ್ ಬಿಡುಗಡೆ

ನವರಾತ್ರಿಯ ಶುಭ ಸಂದರ್ಭದಲ್ಲಿ ನವ ನಿರ್ದೇಶಕರಿಂದ “ನವಮಿ 9.9.1999” ಚಿತ್ರದ ಫಸ್ಟ್ ಲುಕ್ ಹಾಗೂ ಪೋಸ್ಟರ್ ಬಿಡುಗಡೆಯಾಗಿದೆ.ನಿರ್ದೇಶಕ ಎಸ್. ನಾರಾಯಣ್ ಪುತ್ರ ಪವನ್ ನಿರ್ದೇಶನದ ಮೊದಲ ಚಿತ್ರ ಇದು.

ಕಾಲ ಮತ್ತೊಮ್ಮೆ ನಮಗಾಗಿ ಬಂತು ಎಂಬಂತೆ, ತಿಂಗಳಾನು ಗಟ್ಟಲೆ ಚಿತ್ರಮಂದಿರಗಳ ಬಾಗಿಲು ಮುಚ್ಚಿ ಕೊರೋನಾ ಸಂಕಷ್ಟದಲ್ಲಿ ಕಂಗೆಟ್ಟಿದ್ದ ಚಿತ್ರರಂಗ ಈಗೀಗ ಸುಧಾರಿಸಿಕೊಳ್ಳುತ್ತಿರುವುದಲ್ಲದೆ ಹಲವಾರು ಚಿತ್ರಗಳು ಸೆಟ್ಟೇರುತ್ತಲಿವೆ.

ಇಂತಹ ಸುಸಂದರ್ಭದಲ್ಲಿ ಉತ್ಸುಕ ನವ ಯುವಕರ ತಂಡವೊಂದು ಲಾಕ್ ಡೌನ್ ದಿನಗಳಲ್ಲೆ ಕಥೆ ಬರೆದು, ಈಗ ಒಂದು ಹಂತದ ಚಿತ್ರೀಕರಣ ಮುಗಿಸಿದ್ದಾರೆ. ಚಿತ್ರಕ್ಕೆ “ನವಮಿ 9-9-1999” ಎನ್ನುವ ಶೀರ್ಷಿಕೆ ನಿಗದಿ ಪಡಿಸಿಕೊಂಡಿರುವ ಚಿತ್ರತಂಡ ಆಯುಧ ಪೂಜೆಯ ಶುಭದಿನದಂದು ಒಂಭತ್ತು ಜನ ಖ್ಯಾತ ನಿರ್ದೇಶಕರಾದ ಎಸ್. ನಾರಾಯಣ್, ಶಶಾಂಕ್, ರವಿ ಶ್ರೀವತ್ಸ, ಸಿಂಪಲ್ ಸುನಿ, ಪವನ್ ಒಡೆಯರ್, ಎ.ಪಿ.ಅರ್ಜುನ್, ಚಂದ್ರಶೇಖರ್ ಬಂಡಿಯಪ್ಪ, ಕದರ್ ಕುಮಾರ್ ಹಾಗೂ ಅಭಿರಾಮ್ ಅವರು ಈ ಚಿತ್ರದ ಟೈಟಲ್, ಪೋಸ್ಟರ್, ಫಸ್ಟ್ ಲುಕ್ ಲಾಂಚ್ ಮಾಡಿದ್ದಾರೆ.

ಚಿತ್ರಕ್ಕೆ ಕನ್ನಡದ ಖ್ಯಾತ ನಿರ್ದೇಶಕರಾದ ಎಸ್.ನಾರಾಯಣ್ ರವರ ಹಿರಿಯ ಪುತ್ರ ಪವನ್ ರವರು ಆಕ್ಷನ್ ಕಟ್ ಹೇಳುತ್ತಿದ್ದು , ಇವರು ಚಿ”ರಾ ಮುತ್ತು ಚಿ”ಸೌ ರತ್ನ ಎನ್ನುವ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದು, ತಂದೆ ಗರಡಿಯಲ್ಲಿ ಪಳಗಿ ಈಗ ಸ್ವತಂತ್ರ ನಿರ್ದೇಶಕನಾಗಿ ಈ ಸಿನಿಮಾದ ಮುಖಾಂತರ ಹೆಜ್ಜೆ ಹಿಡುತ್ತಿದ್ದಾರಂತೆ.

ಈ ಚಿತ್ರದ ನಾಯಕ ನಟ ಯಶಸ್ ಅಭಿ ರವರು ಈ ಹಿಂದೆ ಪ್ರಸೆಂಟ್ ಪ್ರಪಂಚ ಜೀರೋ ಪರ್ಸೆಂಟ್ ಲವ್ ಹಾಗೂ ಕ್ರಿಟಿಕಲ್ ಕೀರ್ತನೆಗಳು ಎನ್ನುವ ಚಿತ್ರದಲ್ಲಿ ಅಭಿನಯಿಸಿದ್ದು , ಈ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿ ಕೊಳ್ಳಲಿದ್ದಾರಂತೆ.

ಪವನ್ ನಾರಾಯಣ್ ಹಾಗೂ ಯಶಸ್ ಅಭಿ ರವರು ರಂಗಭೂಮಿಯ ಕಲಿಕೆ ದಿನಗಳಿಂದಲೂ ಉತ್ತಮ ಸ್ನೇಹಿತರಾಗಿದ್ದು, ಈ ಚಿತ್ರದ ಮುಖಾಂತರ ತಮ್ಮ ಸಾಮರ್ಥ್ಯ ಪ್ರದರ್ಶಿಸಿಕೊಳ್ಳಲು ಮುಂದಾಗಿದ್ದಾರಂತೆ. ಚಿತ್ರದಲ್ಲಿ ನಂದಿನಿ ಗೌಡ ರವರು ನಾಯಕಿಯಾಗಿದ್ದು ನಾಯಕ ನಟ ಯಶಸ್ ಅಭಿ ಮತ್ತು ಕೃಷ್ಣ ಗುಡೆಮಾರನ ಹಳ್ಳಿ ಯವರು ಸೇರಿ ಕಥೆ ಹಾಗೂ ಚಿತ್ರಕತೆ ರಚಿಸಿ ಪದ್ಮ ಸುಂದರಿ ಕ್ರಿಯೇಷನ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರಂತೆ.

ಚಿತ್ರದಲ್ಲಿ ಎಸ್.ನಾರಾಯಣ್, ಶಂಕರ್ ಅಶ್ವಥ್, ಓಂ ಪ್ರಕಾಶ್ ರಾವ್, ಹುಚ್ಚ ವೆಂಕಟ್, ಸಂದೀಪ್, ಅನುಶ್ರಿ, ಪವಿತ್ರ, ಕುರಿಬಾಂಡ್ ಸುನೀಲ್, ಅರುಣ ಬಾಲರಾಜ್ ಮುಂತಾದವರ ತರಾಗಣವಿದೆ. ತಾಂತ್ರಿಕ ವರ್ಗದಲ್ಲಿ ಕೆ.ಪಿ.ಎಚ್.ಎಸ್. ರವರ ಛಾಯಾಗ್ರಹಣ, ಧರ್ಮ ರವರ ಸಂಗೀತ ನಿರ್ದೇಶನ, ನಾಗಾರ್ಜುನ್ ಶರ್ಮ ರವರ ಸಾಹಿತ್ಯ, ಮಾಸ್ ಮಾದ ರವರ ಸಾಹಸ ನಿರ್ದೇಶನ ಹಾಗೂ ಮೋಹನ್ ರವರ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ.

ಚಿತ್ರ ತಂಡವೇ ಒಟ್ಟಾಗಿ ಬಂಡವಾಳ ಹೂಡಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶಶಿಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಾಹಿಸುತ್ತಿದ್ದಾರೆ. ಬಾಕಿ ಉಳಿದಿರುವ ಚಿತ್ರೀಕರಣ ಸಕಲೇಶ ಪುರ, ಕನಕಪುರ ಇನ್ನೂ ಮುಂತಾದ ಪ್ರದೇಶಗಳಲ್ಲಿ ನಡೆಯಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

This Article Has 1 Comment
  1. Pingback: Digital transformation companies

Leave a Reply

Your email address will not be published. Required fields are marked *

Translate »
error: Content is protected !!