ಯುಗಾದಿ ಹಬ್ಬಕ್ಕೆ ಎಸ್.ವಿ.ಪ್ರೊಡಕ್ಷನ್ಸ್ ನಿರ್ಮಾಣದ ತೆಲುಗು ಚಿತ್ರ ಬಿಡುಗಡೆ

ಕನ್ನಡ ಚಿತ್ರರಂಗದಲ್ಲಿ ಈವರೆಗೂ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಎಸ್.ವಿ.ಪ್ರೊಡಕ್ಷನ್ಸ್ ಸಂಸ್ಥೆಯಿಂದ ನಿರ್ಮಾಣವಾಗಿರುವ ’30 ರೊಜುಲಾ ಪ್ರೇಮಿಂಟಟಂ ಎಲಾ?’ ತೆಲುಗು ಚಿತ್ರ ಇದೇ ಯುಗಾದಿ ಹಬ್ಬಕ್ಕೆ ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿದೆ. ಎಸ್.ವಿ.ಬಾಬು ಈ ಚಿತ್ರದ ನಿರ್ಮಾಪಕರು.

ಈವರೆಗೂ ಕನ್ನಡದಲ್ಲಿ 17 ಚಿತ್ರಗಳನ್ನು ನಿರ್ಮಿಸಿರುವ ಎಸ್.ವಿ.ಬಾಬು ಅವರು ತೆಲುಗಿನಲ್ಲಿ ನಿರ್ಮಿಸಿರುವ ಮೂರನೇ ಚಿತ್ರವಿದು. ಮೂವತ್ತು ದಿನಗಳಲ್ಲಿ ಪ್ರೀತಿ ಮಾಡೊದು ಹೇಗೆ? ಎನ್ನುವುದು ಈ ಚಿತ್ರದ ಶೀರ್ಷಿಕೆಯ ಕನ್ನಡ ಅರ್ಥ.

ಖ್ಯಾತ ನಿರ್ದೇಶಕ ಸುಕುಮಾರ್ ಅವರ ಬಳಿ ಕಾರ್ಯ ನಿರ್ವಹಿಸಿರುವ ಮುನ್ನಾ ಈ ಚಿತ್ರದ ನಿರ್ದೇಶಕರು. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ. ಅನೂಪ್ ರುಬೆನ್ಸ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಲಹರಿ ಸಂಸ್ಥೆ ಮೂಲಕ ಬಿಡುಗಡೆಯಾಗಿದ್ದು, ‘ನೀಲಿ ನೀಲಿ ಆಕಾಶ’ ಎಂಬ ಹಾಡು ಏಳು ಮಿಲಿಯನ್‌ಗೂ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿದೆ. ಕಾರ್ತಿಕ್ ಸಂಕಲನ, ಯಶ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಖ್ಯಾತ ನಿರೂಪಕ ಹಾಗೂ ನಟ ಪ್ರದೀಪ್ ಮಾಚಿರಾಜು ಈ ಚಿತ್ರದ ನಾಯಕನಾಗಿ ನಟಿಸಿದ್ದು, ಬೆಂಗಳೂರಿನ ಅಮೃತಾ ಅಯ್ಯರ್ ನಾಯಕಿಯಾಗಿ ಅಭಿನಯಿಸಿದ್ದಾರೆ.

ಅಲ್ಲು ಅರವಿಂದ್ ಅವರು ಈ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ತಮ್ಮ ಗೀತಾ ಆರ್ಟ್  ಸಂಸ್ಥೆ ಮೂಲಕ ಬಿಡುಗಡೆ ಕೂಡ ಮಾಡುತ್ತಿದ್ದಾರೆ. ಕರ್ನಾಟಕದಾದ್ಯಂತ ಎಸ್.ವಿ.ಪ್ರೊಡಕ್ಷನ್ಸ್ ಮೂಲಕ ಈ ಚಿತ್ರ ತೆರೆಗೆ ಬರುತ್ತಿದೆ.

This Article Has 2 Comments
  1. Pingback: buy Mushroom Capsules online legally

  2. Pingback: 메이저놀이터

Leave a Reply

Your email address will not be published. Required fields are marked *

Translate »
error: Content is protected !!