‘ಓಲ್ಡ್ ಮಾಂಕ್’ ಚಿತ್ರದಲ್ಲಿ ಎಸ್.ನಾರಾಯಣ್

ಶ್ರೀನಿವಾಸ ಕಲ್ಯಾಣ ಹಾಗೂ ಬೀರ್‌ಬಲ್ ಚಿತ್ರದ ನಿರ್ದೇಶಕ ಹಾಗೂ ನಾಯಕ ಎಂ.ಜಿ.ಶ್ರೀನಿ ನಾಯಕನಾಗಿ ನಟಿಸಿ, ನಿರ್ದೇಶಿಸುತ್ತಿರುವ ‘ಓಲ್ಡ್ ಮಾಂಕ್` ಚಿತ್ರದಲ್ಲಿ ಖ್ಯಾತ ನಿರ್ದೇಶಕ ಎಸ್.ನಾರಾಯಣ್ ಅಭಿನಯಿಸಿದ್ದಾರೆ. ಇತ್ತೀಚೆಗೆ ಯಾವ ಚಿತ್ರದಲ್ಲೂ ಎಸ್.ನಾರಾಯಣ್ ಅವರು ಅಭಿನಯಿಸಿರಲಿಲ್ಲ. ನಾಲ್ಕು ವರ್ಷಗಳ ನಂತರ ಈ ಚಿತ್ರದಲ್ಲಿ ನಾಯಕನ ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ’

ಸಿದ್ದಿ ಎಂಟರ್‌ಟೈನ್‌ಮೆಂಟ್ಸ್ ಲಾಂಛನದಲ್ಲಿ ಪ್ರದೀಪ್ ವರ್ಮ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಭರತ್ ಪರಶುರಾಮ್ ಅವರ ಛಾಯಾಗ್ರಹಣವಿದೆ. ಸೌರವ್ – ವೈಭವ್ ಸಂಗೀತ ನಿರ್ದೇಶನ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನವಿರುವ ಈ ಚಿತ್ರಕ್ಕೆ ಸಂತೋಷ್ ನಂದಕುಮಾರ್, ಪ್ರಸನ್ನ.ವಿ.ಎಮ್ ಹಾಗೂ ಶ್ರೀನಿ ಕಥೆ ಬರೆದಿದ್ದಾರೆ. ಸಂಭಾಷಣೆ ಪ್ರಸನ್ನ ವಿ.ಎಂ ಅವರದು.

ಶ್ರೀನಿ ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ಅಭಿನಯಿಸುತ್ತಿದ್ದಾರೆ. ಎಸ್.ನಾರಾಯಣ್, ಅರುಣ ಬಾಲರಾಜ್, ಸುಜಯ್ ಶಾಸ್ತಿç ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!