ಕಿಚ್ಚನಿಗೆ ಒಲಿದ ದಾದಾ ಸಾಹೇಬ್ ಪಾಲ್ಕೆ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್

ಕನ್ನಡದ ಅಭಿನಯದ ಚಕ್ರವರ್ತಿ ಬಾದ್ ಷಾ ಕಿಚ್ಚ ಸುದೀಪ್ ಅವರಿಗೆ ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿ ಒಲಿದಿದ್ದು, ದಬಾಂಗ್ ೩ ನಲ್ಲಿನ ನಟನೆಗೆ ಮೋಸ್ಟ್ ಪ್ರಾಮಿಸಿಂಗ್ ಆಕ್ಟರ್ – ೨೦೨೦ ಎಂದು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಫೆಬ್ರವರಿ ೨೦ರಂದು ಮುಂಬೈನ ಖಾಸಗಿ ಹೋಟೆಲ್ ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಹರಾಷ್ಟ್ರ ರಾಜ್ಯಪಾಲರು ಆಗಮಿಸಲಿದ್ದು, ದಾದಾ ಸಾಹೇಬ್ ಪಾಲ್ಕೆ ಮತ್ತು ಮಹಾತ್ಮ ಗಾಂಧಿ ಅವರ ೧೫೦ ನೇ ವರ್ಷದ ಜನ್ಮದಿನೋತ್ಸವ ಅಂಗವಾಗಿ ಕಾರ್ಯಕ್ರಮ ನಡೆಯಲಿದೆ.

ಕಿಚ್ಚ ಸುದೀಪ್ ಸದ್ಯ ಬಿಗ್ ಬಾಸ್ ಮತ್ತು ಕೋಟಿಗೊಬ್ಬ ೩ ಚಿತ್ರೀಕರಣದಲ್ಲಿ ಬ್ಯೂಸಿ ಇದ್ದು, ಈ ಪ್ರಶಸ್ತಿ ಅವರ ಅಭಿಮಾನಿಗಳಿಗೆ ಮತ್ತು ಕನ್ನಡ ಜನತೆಗೆ ಸಂತೋಷಕರ ವಿಷಯವಾಗಿದೆ. ಕಿಚ್ಚ ಸುದೀಪ್ ಅವರು ಇತ್ತೀಚಿಗೆ ಸೈರಾ, ದಬಾಂಗ್ ೩ ಹೀಗೆ ಪರಭಾಷಾ ಸಿನಿಮಾಗಳನ್ನೂ ಮಿಂಚು ಹರಿಸಿ ಕನ್ನಡದ ಕೀರ್ತಿ ಪತಾಕೆ ಹಾರಿಸಿದ್ದು, ಈ ಪ್ರಶಸ್ತಿ ಬಂದಿರೋದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಸಂಗತಿ.

ದಾದಾ ಸಾಹೇಬ್ ಪಾಲ್ಕೆ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ ನ ಜ್ಯೂರಿ ಪ್ರೆಸಿಡೆಂಟ್ ಚಂದ್ರಶೇಖರ್ ಪುಸಲ್ಕರ್ ಈ ಪ್ರಶಸ್ತಿ ಬಗ್ಗೆ ಖಚಿತಪಡಿಸಿದ್ದಾರೆ.

This Article Has 1 Comment
  1. Pingback: DevOps Companies

Leave a Reply

Your email address will not be published. Required fields are marked *

Translate »
error: Content is protected !!