ರಾಕಿಂಗ್ ಸ್ಟಾರ್ ಯಶ್‌ಗೆ ‘ಸೆನ್ಸೇಷನ್ ಆಫ್ ಸೌತ್ ಇಂಡಿಯನ್’ ಪ್ರಶಸ್ತಿ

ಕೆಜಿಎಫ್ ಸಿನಿಮಾ ಮೂಲಕ ಅಪಾರ ಜನಪ್ರೀಯತೆ ಗಳಿಸಿದ ರಾಕಿಂಗ್ ಸ್ಟಾರ್ ಯಶ್ ಗೆ ಮತ್ತೊಂದು ಪ್ರಶಸ್ತಿ ಲಭಿಸಿದೆ. ಕೆಲದಿನಗಳ ಹಿಂದೆ ‘ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ’ ಪಡೆದಿದ್ದ ರಾಕಿಬಾಯ್, ಈಗ ಪ್ರತಿಷ್ಠಿತ ಆನ್ಲೈನ್ ಡಿಜಿಟಲ್ ಮೀಡಿಯಾ ಬಿಹೈಂಡ್ ವುಡ್ಸ್ ನಿಂದ ರಾಮಾಚಾರಿಗೆ ‘ಸೆನ್ಸೇಷನ್ ಆಫ್ ಸೌತ್ ಇಂಡಿಯನ್ ಸಿನಿಮಾ’ ಪ್ರಶಸ್ತಿ ಲಭಿಸಿದ್ದು ಅಭಿಮಾನಿಗಳಿಗೆ ಇನ್ನಿಲ್ಲದ ಖುಷಿ ನೀಡಿದೆ.

ಕಳೆದ 7 ವರ್ಷದಿಂದ ಚನೈನ ಬಿಹೈಂಡ್ ವುಡ್ಸ್ ಗೋಲ್ಡ್ ಮೆಡಲ್ಸ್ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡುತ್ತಿದೆ. ಸದ್ಯ ಕೆಜಿಎಫ್ ಸಿನಿಮಾದ ದೊಡ್ಡ ಮಟ್ಟದ ಯಶಸ್ಸಿ‌ನಿಂದ ಕನ್ನಡದ ರಾಜಧಾನಿ ಹಮ್ಮೀರನಿಗೆ ಈ ಪ್ರಶಸ್ತಿ ನೀಡಲಾಗಿದೆ. ಇನ್ನೂ ಕಾರ್ಯಕ್ರಮದಲ್ಲಿ ರಾಮ್ ಚರಣ್, ವಿಜಯ್ ದೇವರಕೊಂಡ, ನಿವಿನ್ ಪೌಲಿ ಭಾಗಿಯಾಗಿದ್ದು, ಸೌತ್ ಸೂಪರ್ ಸ್ಟಾರ್‌ಗಳ ಜೊತೆ ಯಶ್ ಖುಷಿ ಹಂಚಿಕೊಂಡಿದ್ದಾರೆ.ನಂತರ ಮೆಘಾ ಪವರ್​ ಸ್ಟಾರ್​ ರಾಮ್ ಚರಣ್ ತೇಜಾ ಜೊತೆ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ. ಪ್ರಶಸ್ತಿ ರಿಸೀವ್ ಮಾಡಿಕೊಳ್ಳೋದಿಕ್ಕೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿದ್ದ ಯಶ್​ಗೆ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ಸಿಕ್ಕಿದೆ. ಇನ್ನು ರಾಕಿ ಬಾಯ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ರು.

This Article Has 1 Comment
  1. Pingback: DevOps Outsourcing companies

Leave a Reply

Your email address will not be published. Required fields are marked *

Translate »
error: Content is protected !!