ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಧನಂಜಯ್ ಅಭಿನಯದ ‘ಡಾಲಿ’ ಚಿತ್ರಕ್ಕೆ ಚಾಲನೆ

ಧನಂಜಯ್ ನಾಯಕಾರಾಗಿ ನಟಿಸುತ್ತಿರುವ, ಯೋಗೇಶ್ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಯೋಗೇಶ್ ನಾರಾಂiÀiಣ್ ನಿರ್ಮಿಸುತ್ತಿರುವ `ಡಾಲಿ` ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಗವಿಪುರಂನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಪದ್ಮಜ ನಾರಾಯಣ್ ಅವರು ಆರಂಭ ಫಲಕ ತೋರಿದರು. ಭಾವನ ನಾಗೇಶ್ ಕ್ಯಾಮೆರಾ ಚಾಲನೆ ಮಾಡಿದರು.

ಈ ಹಿಂದೆ ‘ಮೊದಲಾಸಲ’ ಹಾಗೂ ‘ಎರಡನೇ ಸಲ’ ಚಿತ್ರಗಳನ್ನು ನಿರ್ಮಾಣ ಮಾಡಿದ್ದ, ಯೋಗೇಶ್ ನಾರಾಯಣ್ ನಿರ್ಮಿಸುತ್ತಿರುವ ಮೂರನೇ ಚಿತ್ರ ‘ಡಾಲಿ’.
ಈ ಹಿಂದೆ ‘ಗಣಪ’, ‘ಕರಿಯ 2’, ‘ಪಾರಿಜಾತ` ಹಾಗೂ ‘ಜೀವ` ಚಿತ್ರಗಳನ್ನು ನಿರ್ದೇಶಿಸಿದ್ದ ಪ್ರಭು ಶ್ರೀನಿವಾಸ್ ಈ ಚಿತ್ರದ ನಿರ್ದೇಶಕರು. ಇದು ಅವರ ನಿರ್ದೇಶನದ ಐದನೇ ಚಿತ್ರ.
‘ಡಾಲಿ’ ಚಿತ್ರದ ಚಿತ್ರೀಕರಣ ಇದೇ ತಿಂಗಳ 23ರಿಂದ ಲಕ್ನೋದಲ್ಲಿ ಆರಂಭವಾಗಲಿದೆ. ಮೊದಲ ಹಂತದ ಚಿತ್ರೀಕರಣ ಲಕ್ನೋ ಹಾಗೂ ಆಗ್ರಾದಲ್ಲಿ ನಡೆಯಲಿದ್ದು, ದ್ವಿತೀಯ ಹಂತದ ಚಿತ್ರೀಕರಣ ಬೆಂಗಳೂರು, ಮೈಸೂರಿನಲ್ಲಿ ನಡೆಯಲಿದೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಶ್ರೀನಿವಾಸನ್ ದೇವಾಂಶಂ ಅವರ ಛಾಯಾಗ್ರಹಣವಿದೆ.
ಡಾಲಿ ಧನಂಜಯ್ ಅವರಿಗೆ ನಾಯಕಿಯರಾಗಿ ರಚಿತಾರಾಂ ಹಾಗೂ ಭವ್ಯ ಟ್ರಿಕ(ಹೊಸ ಪರಿಚಯ) ಅಭಿನಯಿಸುತ್ತಿದ್ದಾರೆ.

 

This Article Has 1 Comment
  1. Pingback: CICD

Leave a Reply

Your email address will not be published. Required fields are marked *

Translate »
error: Content is protected !!