“ಬೆಂಗಳೂರು 69” ಚಿತ್ರದಲ್ಲಿ ಅನಿತಾ ಭಟ್

ಪಡ್ಡೆ ಹೈಕಳ ಹೃದಯದ ಬಡಿತವನ್ನು ಹೆಚಿಸುವಂತ ಪೋಸ್ಟರ್ ನಲ್ಲಿ ಕಾಣಿಸಿಕೊಂಡಿರುವ ಅನಿತಾ ಭಟ್ ಅಭಿನಯದ “ಬೆಂಗಳೂರು 69” ಚಿತ್ರ ತೆರೆಯ ಮೇಲೆ ಬರಲು ಸನ್ನದ್ಧವಾಗಿದೆ.ವಿಭಿನ್ನ ಪಾತ್ರಗಳಿಗೂ ಸೈ ಎನಿಸಿಕೊಂಡಿರುವ ಅನಿತಾ ಯಾವ ಪಾತ್ರ ಕೊಟ್ಟರೂ ನಿಭಾಯಿಸಬಲ್ಲೆ ಎಂದು ತೋರಿದ್ದಾರೆ. ಈಗ ಮತ್ತೊಮ್ಮೆ ಮೈಚಳಿ ಬಿಟ್ಟು ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಆಂಧ್ರ ಮೂಲದ ಶಫಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಪವನ್ ಶೆಟ್ಟಿ, ಜಯದೇವ ಮೋಹನ್ ಮುಂತಾದವರ ಅಭಿನಯವಿದೆ. ಕ್ರಾಂತಿ ಎಂಬ ಯುವ ನಿರ್ದೇಶಕ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದು, ಪರಶುರಾಮ್ ಛಾಯಾಗ್ರಹಣವನ್ನು ಮಾಡಿದ್ದಾರೆ .

ಗುಲ್ಜಾರ್ ನಿರ್ಮಾಣದ ಚಿತ್ರಕ್ಕೆ ವಿಕ್ರಮ್ ಹಾಗೂ ಚಂದನಾ ಸಂಗೀತವನ್ನು ನೀಡಿದ್ದಾರೆ. ಇದೊಂದು ಥ್ರಿಲ್ಲರ್ ಚಿತ್ರವಾಗಿದ್ದು , ಇಬ್ಬರು ಗೆಳೆಯರು ಶ್ರೀಮಂತರಾಗಲು ಹುಡುಗಿಯೊಬ್ಬಳನ್ನು ಅಪಹರಿಸಿ ಹಣಕ್ಕಾಗಿ ಮಾಡುವ ಇವರ ತಂತ್ರಗಾರಿಕೆಗೆ ಏನೆಲ್ಲಾ ಸಮಸ್ಯೆ ಎದುರಾಗುತ್ತದೆ ಎಂಬುದನ್ನು ತೆರೆಯ ಮೇಲೆ ತೋರಿಸಲಿದ್ದಾರಂತೆ.

ಒಟ್ನಲ್ಲಿ ಟೈಟಲ್ ಪೋಸ್ಟರ್ ನಲ್ಲಿ ಕಾಣಿಸಿಕೊಂಡಿರುವ ಅನಿತಾ ಭಟ್ ಹಾಟ್ ಫೋಟೋಸ್ ನೋಡುಗರ ಗಮನವನ್ನು ಸೆಳೆಯುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!