ಮೈಸೂರು ದಸರಾದಲ್ಲಿ ‘ಪ್ರಾರಂಭ’ ಚಿತ್ರದ ಟೈಟಲ್ ಸಾಂಗ್ ಬಿಡುಗಡೆ

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ಅಭಿನಯದ `ಪ್ರಾರಂಭ` ಚಿತ್ರದ ಟೈಟಲ್ ಸಾಂಗ್‍ನ ಲಿರಿಕಲ್ ವಿಡಿಯೋ ನಾಡಹಬ್ಬ ದಸರಾ ಶುಭ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಅಕ್ಟೋಬರ್ 3ರ ಗುರುವಾರ ಸಂಜೆ 5ಕ್ಕೆ ಮೈಸೂರಿನ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಈ ಹಾಡು ಲೋಕಾರ್ಪಣೆಯಾಗಲಿದೆ. ಐದು ಹಾಡುಗಳಿರುವ ಈ ಚಿತ್ರಕ್ಕೆ ಪ್ರಜ್ವಲ್ ಪೈ ಅವರು ಸಂಗೀತ ನೀಡಿದ್ದಾರೆ. ಈ ಚಿತ್ರಕ್ಕಾಗಿ ಸಂತೋಷ್ ನಾಯಕ್ ಅವರು ಬರೆದಿರುವ `ಬರೀ ನೀನೆ ನೀನೆ` ಹಾಡನ್ನು ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್ ಹಾಡಿದ್ದಾರೆ. ಚಿತ್ರದ ‘ಒಂದೇ ಒಂದು ಸಾರಿ` ಹಾಡನ್ನು ಪಲಾಕ್ ಮುಚಾಲ್ ಅವರು ಹಾಡಿದ್ದಾರೆ.

ಮನು ಕಲ್ಯಾಡಿ ರಚನೆ ಹಾಗೂ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಬಳ್ಳಾರಿ, ಚಿಕ್ಕಮಗಳೂರು, ಗೋವಾ, ಮೂಡಿಗೆರೆ, ಮೈಸೂರು ಮುಂತಾದ ಕಡೆ ಚಿತ್ರಕ್ಕೆ 50ದಿನಗಳ ಚಿತ್ರೀಕರಣ ನಡೆದಿದೆ.

‘ಪ್ರಾರಂಭ` ಒಂದು ಅದ್ಭುತ ಕಥಾಹಂದರವಿರುವ ಚಿತ್ರ ಕಥೆಯಲ್ಲಿ ಈ ಸಮಾಜಕ್ಕೆ ಪ್ರತ್ಯೇಕವಾಗಿ ಯುವಕ-ಯುವತಿಯರಿಗೆ ಒಂದು ಒಳ್ಳೆಯ ಸಂದೇಶ ಸಾರುವ ಸಿನಿಮಾ. ನಾಯಕ ಮನೋರಂಜನ್ ರವಿಚಂದ್ರನ್ ಅವರು ಮೂರು ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕ ಮನು ಕಲ್ಯಾಡಿ ತಿಳಿಸಿದ್ದಾರೆ.

ಜಗದೀಶ್ ಕಲ್ಯಾಡಿ ಅವರು ಜೇನುಶ್ರೀ ತನುಷ ಪೆÇ್ರಡಕ್ಷನ್ಸ್ ಮೂಲಕ ನಿರ್ಮಿಸುತ್ತಿದ್ದಾರೆ . ಚಿತ್ರದಲ್ಲಿ 2 ಸಾಹಸ ಸನ್ನಿವೆಶಗಳಿದ್ದು , ಥ್ರಿಲ್ಲರ್ ಮಂಜು ಹಾಗೂ ವಿಕ್ರಂ ಮೋರ್ ಸಾಹಸ ನಿರ್ದೇಶನ ಮಾಡಿದ್ದಾರೆ. ಸುರೇಶ್‍ಬಾಬು ಛಾಯಾಗ್ರಹಣ, ವಿಜಿ.ಎನ್.ಕುಮಾರ್ ಸಂಕಲನ, ಸಂತು, ಗೀತಾ ನೃತ್ಯ ನಿರ್ದೇಶನ ಹಾಗೂ ರವಿ ಸಂತೆಹೈಕ್ಲು ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ಮನೋರಂಜನ್ ರವಿಚಂದ್ರನ್, ಕೀರ್ತಿ ಕಲಕೇರಿ, ಕಡ್ಡಿಪುಡಿ ಚಂದ್ರು, ಹನುಮಂತೇ ಗೌಡ, ಸೂರಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!