ಈ ವಾರ ತೆರೆಗೆ ‘ಗೀತಾ’

ಎಸ್.ಎಸ್.ಫಿûಲಂಸ್ ಹಾಗೂ ಗೋಲ್ಡನ್ ಮೂವೀಸ್ ಮೂಲಕ ಸೈಯದ್ ಸಲಾಂ ಹಾಗೂ ಶಿಲ್ಪಾಗಣೇಶ್ ಅವರು ನಿರ್ಮಿಸಿರುವ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ `ಗೀತಾ` ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ.

‘ಮಿಸ್ಟರ್ & ಮಿಸ್ಸಸ್ ರಾಮಾಚಾರಿ’ ಹಾಗೂ `ರಾಜಕುಮಾರ’ ಚಿತ್ರಗಳಿಗೆ ಸಂತೋಷ್ ಆನಂದರಾಮ್ ಅವರ ಜೊತೆ ಕಾರ್ಯ ನಿರ್ವಹಿಸಿ ಅನುಭವವಿರುವ ವಿಜಯ್ ನಾಗೇಂದ್ರ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ನಾಗೇಂದ್ರ ಬಿ.ಎಂ ಸಂಭಾಷಣೆ ಬರೆದಿದ್ದಾರೆ. ಆರು ಹಾಡುಗಳಿರುವ ಈ ಚಿತ್ರಕ್ಕೆ ಅನೂಪ್ ರುಬೆನ್ಸ್ ಸಂಗೀತ ನೀಡಿದ್ದಾರೆ. ಶ್ರೀಶ ಕೂದುವಳ್ಳಿ ಛಾಯಾಗ್ರಹಣ, eóÁ್ಞನೇಶ್ ಬಿ ಮಠದ್ ಸಂಕಲನ, ಶಿವಕುಮಾರ್, ವಿಶ್ವಾಸ್ ಕಶ್ಯಪ್ ಕಲಾ ನಿರ್ದೆಶನ, ವಿಜಯ್ ಮಾಸ್ಟರ್ ಹಾಗೂ ವಿನೋದ್ ಸಾಹಸ ನಿರ್ದೇಶನ ಮತ್ತು ಭೂಷಣ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ನಾಯಕಿಯರಾಗಿ ಕೇರಳದ ಪಾರ್ವತಿ ಅರುಣ್, ಪ್ರಯಾಗ ಮಾಲ್ಟಿನ್ ಹಾಗೂ ಶಾನ್ವಿ ಶ್ರೀವಾಸ್ತವ್ ಅಭಿನಯಿಸಿದ್ದಾರೆ. ಸುಧಾರಾಣಿ, ದೇವರಾಜ್, ರಂಗಾಯಣ ರಘು, ಅಚ್ಯುತಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

This Article Has 1 Comment
  1. Pingback: china replica watches

Leave a Reply

Your email address will not be published. Required fields are marked *

Translate »
error: Content is protected !!