‘ಕಿಸ್’ ಈ ವಾರ ಬಿಡುಗಡೆ

ಕನ್ನಡದ ಬಹು ನಿರೀಕ್ಷಿತ ಸಿನೆಮಾ `ಕಿಸ್’ ಎ ಪಿ ಅರ್ಜುನ್ ಸಾರಥ್ಯದಲ್ಲಿ (ಅಂಭಾರಿ ಅದ್ಧೂರಿ, ರಾಟೆ ಹಾಗೂ ಐರಾವತ’ ಖ್ಯಾತಿಯ ನಿರ್ದೇಶಕ) ಹಾಗೂ ಎ ಪಿ ಅರ್ಜುನ್ ಫಿಲ್ಮ್ಸ್ ನಿರ್ಮಾಣದ ಚಿತ್ರ ಅದ್ದೂರಿಯಾಗಿ ತಯಾರಾಗಿದ್ದು ಇದೆ ಶುಕ್ರವಾರ ಬಿಡುಗಡೆ ಆಗುತ್ತಿದೆ.

ಎ ಪಿ ಅರ್ಜುನ್ ಅವರ 10 ವರ್ಷದ ವೃತ್ತಿಯಲ್ಲಿ ಅತಿ ಹೆಚ್ಚು ಬಜೆಟಿನ ಸಿನಿಮಾ ಹಾಗೂ ಹೊಸ ನಾಯಕ ಹಾಗೂ ನಾಯಕಿ ವಿರಾಟ್ ಹಾಗೂ ಶ್ರೀ ಲೀಲ ಪರಿಚಯಿಸುತ್ತಿರುವ ಸಿನಿಮಾ ವಿಭಿನ್ನವಾಗಿ ತೆರೆಗೆ ತಂದಿದ್ದಾರೆ. ತೆರೆಯ ಮೇಲೆ ಶ್ರೀಮಂತ ಹುಡುಗನಾಗಿ ಅರ್ಜುನ್ ಪಾತ್ರದಲ್ಲಿ ಸ್ನೇಹಕ್ಕೆ ಅತ್ಯಂತ ಬೆಲೆ ಕೊಡುವ ವಿರಾಟ್ ಹಾಗೂ ಮುದ್ದಾದ, ಚೂಟಿ ಹುಡುಗಿ ಆಗಿ ನಂದಿನಿ ಪಾತ್ರವನ್ನು ಶ್ರೀಲೀಲ ನಿರ್ವಹಿಸಿದ್ದಾರೆ.

ಇದೊಂದು ಪ್ರೀತಿಸುವ ಹೃದಯಗಳಿಗೆ ತಯಾರಾಗಿರುವ ಚಿತ್ರ.`ಕಿಸ್’ ಅಂದಾಕ್ಷಣ ಯಾವ ಮುಜುಗರ ಬೇಕಾಗಿಲ್ಲ. ಎ ಪಿ ಅರ್ಜುನ್ ಅವರ `ಕಿಸ್’ ಅಂದರೆ ? ಕೀಪ್ ಇಟ್ ಸಿಂಪಲ್ ಅಂಡ್ ಶಾರ್ಟ್’ ಎಂದು ಅರ್ಥ.

ನಿರ್ದೇಶಕ ಎ ಪಿ ಅರ್ಜುನ್ ಈ ಚಿತ್ರದ ಚಿತ್ರೀಕರಣವನ್ನು ಬೆಂಗಳೂರು, ಮಡಿಕೇರಿ, ರಿಷಿಕೇಶ್, ಊಟಿ, ಕುದುರೆಮುಖ, ಕೇರಳ, ಗೋವ, ಡಾರ್ಜಿಲಿಂಗ್ ಹಾಗೂ ವಿದೇಶದಲ್ಲಿ ಸಹ ಚಿತ್ರೀಕರಣ ಮಾಡಿದ್ದಾರೆ. ಚಿತ್ರದಲ್ಲಿ ಹೊಸ ನಾಯಕ ವಿರಾಟ್ `ಭಂಗಿ ಜಂಪ್’ ಮಾಡಿರುವುದು ವಿಶೇಷ.

ವಿ ಹರಿಕೃಷ್ಣ ಅವರ ಸಂಗೀತದಲ್ಲಿ ಹಾಡುಗಳು ಈಗಾಗಲೇ ಮೋಡಿ ಮಾಡಿದ್ದಾಗಿದೆ. ಈಗಾಗಲೇ ಮೂರು ಗೀತೆಗಳು ಜನಪ್ರಿಯತೆ ಪಟ್ಟಿಯಲ್ಲಿ ಸೇರಿಕೊಂಡಿದೆ. ನೀನೆ ಮೊದಲು….ಲೀಲ ಸುಶೀಲಾ….ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಡಿರುವ ಬೆಟ್ಟೆ ಗೌಡ ವರ್ಸಸ್ ಚಿಕ್ಕ ಬೋರಮ್ಮ….ಹೆಚ್ಚು ಕೇಳುಗರನ್ನು ಹಾಗೂ ನೋಡುಗರನ್ನು ಸಾಮಾಜಿಕ ಜಾಲತಾನದಲ್ಲಿ ಪಡೆದುಕೊಂಡಿದೆ.

ಪೋಷಕ ಪಾತ್ರಗಳಲ್ಲಿ ಚಿಕ್ಕಣ್ಣ, ಅವಿನಾಷ್, ಮನಿಷ್ ಶೆಟ್ಟಿ, ಸುಂದರ್, ದತ್ತಣ್ಣ, ಭಾರ್ಗವಿ ನಾರಾಯಣ್ ಹಾಗೂ ಇತರರು ತಾರಗಣದಲ್ಲಿದ್ದಾರೆ. ನಾಯಕಿ ಅಪೂರ್ವ ಗೌಡ ಶೀಲ ಸುಶೀಲಾ….ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ.
‘ಕಿಸ್’….ತುಂಟ ತುಟಿಗಳ ಆಟೋಗ್ರಾಫ್ ಅಡಿ ಬರಹ ಇರುವ ಚಿತ್ರಕ್ಕೆ ವಿ ಹರಿಕೃಷ್ಣ ಅವರ ಸಂಗೀತ, ಅರ್ಜುನ್ ಶೆಟ್ಟಿ ಛಾಯಾಗ್ರಹಣ, ಇಮ್ರಾನ್ ಸರ್ದಾರಿಯ ನೃತ್ಯ, ಡಾ ಕೆ ರವಿ ವರ್ಮ ಅವರ ಸಾಹಸ, ದೀಪು ಎಸ್ ಕುಮಾರ್ ಸಂಕಲನ, ರವಿ ಸಂತೆಹಕ್ಲು ಕಲಾ ನಿರ್ದೇಶನ ಮಾಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!