ಹಾಡಿನೊಂದಿಗೆ ‘ಜಂಟಲ್‍ಮನ್’ ಚಿತ್ರೀಕರಣ ಪೂರ್ಣ

ಖ್ಯಾತ ನಿರ್ದೇಶಕ ಗುರು ದೇಶಪಾಂಡೆ ನಿರ್ಮಾಣದ ಚಿತ್ರ ಜಂಟಲ್‍ಮನ್. ಜಡೇಶ್ ಕುಮಾರ್ ನಿರ್ದೇಶನದಲ್ಲಿ ಹಾಡಿನೊಂದಿಗೆ ಚಿತ್ರೀಕರಣವನ್ನು ಸಂಪೂರ್ಣಗೊಳಿಸಿದೆ. ನಗರದ ಎಚ್ ಎಂ ಟಿ ಫ್ಯಾಕ್ಟರೀ ಬಳಿ ಪ್ರಜ್ವಲ್ ದೇವರಾಜ್ ಹಾಗೂ ಸಹ ನರ್ತಕರ ಜೊತೆ ಈ ಹಾಡನ್ನು ಚಿತ್ರೀಕರಣ ಮಾಡಲಾಗಿದೆ.

ಈ ಚಿತ್ರದ ಕಥಾ ವಸ್ತು `ಸ್ಲಿಪಿಂಗ್ ಬ್ಯೂಟಿ ಸಿನ್ದ್ರೋಮ್’ ವಿಷಯವನ್ನು ಹೊಂದಿದೆ. ಕುಂಭ ಕರ್ಣನನ್ನು ಹೋಲುವ ನಾಯಕ 18 ಘಂಟೆ ಕಾಲ ನಿದ್ದೆಯಲ್ಲಿರುತ್ತಾನೆ. ಉಳಿದ ಆರು ಘಂಟೆಗಳಲ್ಲಿ ಅವನ ಚಟುವಟಿಕೆಗಳು. ಇಲ್ಲಿ ಸಾಹಸ, ಪ್ರೀತಿ, ಭಾವನೆಗಳು ಸಹ ಸಮ್ಮಿಳಿತಗೊಂಡಿದೆ.

ನಾಯಕ ಪ್ರಜ್ವಲ್ ದೇವರಾಜ್ ಶೇಖಡ 60 ಭಾಗ ಪುಟ್ಟ ಹುಡುಗಿ ಬೇಬಿ ಆರಾಧ್ಯ ಜೊತೆ ಇರುತ್ತಾರೆ. ನಿಶ್ವಿಕ ನಾಯ್ಡು ಕಥಾ ನಾಯಕಿ. ನಿರ್ದೇಶಕ ಜಡೇಶ್ ಕುಮಾರ್ ಅವರೇ ಕಥೆ ಬರೆದಿದ್ದಾರೆ ಸಹ.

ಅಜನಿಷ್ ಲೋಕನಾಥ್ ಸಂಗೀತ, ಆರೂರ್ ಸುಧಾಕರ್ ಶೆಟ್ಟಿ ಛಾಯಾಗ್ರಹಣ, ವಿನೋದ್ ಹಾಗೂ ಡಿಫರೆಂಟ್ ಡ್ಯಾನಿ ಸಾಹಸ ಇರುವ ಈ ಜಂಟಲ್ ಮ್ಯಾನ್ ಚಿತ್ರವು ನವೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಗುರು ದೇಶ್ಪಾಂಡೆ ತಿಳಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!