‘ತ್ರಿಪುರ’ ಈ ವಾರ ಬಿಡುಗಡೆ

ಶ್ರೀ ಅಂಕುರ ಕ್ರಿಯೇಷನ್ಸ್ ಲಾಂಛನದಲ್ಲಿ ಎಲ್.ಮಂಜುನಾಥ್ ನಿರ್ಮಿಸಿರುವ ‘ತ್ರಿಪುರ’ ಚಿತ್ರವು ಈ ವಾರ ರಾಜ್ಯಾಧ್ಯಂತ ಬಿಡುಗಡೆಯಾಗುತ್ತಿದೆ. ಒಂದು ಹೆಣ್ಣಿನ ಹಿಂದೆ ಬಿದ್ದಾಗ ಏನೆಲ್ಲಾ ಆಗುತ್ತದೆ ಎಂದು ಕುತೂಹಲಕರ ಕಥೆಯೊಂದಿಗೆ ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಲವ್ ಕಥೆಯೊಂದಿರುವ ಈ ಚಿತ್ರವನ್ನು ಕೆ.ಶೆಂಕರ್ ಚಿತ್ರಕಥೆ ರಚಿಸಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಗೌರಿವೆಂಕಟೇಶ್ ಛಾಯಾಗ್ರಹಣ, ಕೆ.ಶಂಕರ್ ಸಂಭಾಷಣೆ ಮತ್ತು ಸಾಹಿತ್ಯ, ಹರಿಕೃಷ್ಣ ನೃತ್ಯ ನಿರ್ದೇಶನ, ರಾಜಶೇಖರೆಡ್ಡಿ ಸಂಕಲನವಿದೆ. ಅಶ್ವಿನಿಗೌಡ, ಶ್ರೀಧರ್, ಧರ್ಮ, ಟೆನ್ನಿಸ್ ಕೃಷ್ಣ, ಲಕ್ಷ್ಮಣ್‍ರಾವ್, ಕಿಲ್ಲರ್ ವೆಂಕಟೇಶ್, ರಮಾನಂದ್, ಸುಂದರಶ್ರೀ, ಡಿಂಗ್ರಿ ನಾಗರಾಜ್, ಬೇಬಿ ಆದ್ಯ, ಪವಿತ್ರ ಮುಂತಾದವರು ಅಭಿನಯಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!