ಚಿತ್ರ: ಅನಂತಪಯಣ
ನಿರ್ದೇಶನ: ಶ್ರೀ ಕಾಕ
ನಿರ್ಮಾಣ: ಎಸ್.ಕೆ ಫಿಲ್ಮ್ಸ್ ಫ್ಯಾಕ್ಟರಿ ಮತ್ತು ಶ್ರೀ ಅಶೋಕ್ ಫಿಲ್ಮ್ಸ್
ತಾರಾಗಣ: ಶ್ರೀ ಕಾಕ, ನಿಶ್ವಿಕಾ ಪಾಟೀಲ್ ಮತ್ತು ಬಲ ರಾಜ್ ವಾಡಿ ಮೊದಲಾದವರು….
ರೇಟಿಂಗ್: 3.5/5
ಕುರಿಕಾಯುವ ಜನರ ಕಷ್ಟಗಳನ್ನು ತೋರಿಸುವ ಜೀವನವನ್ನು ಹತ್ತಿರದಿಂದ ಸೆರೆ ಹಿಡಿದು ತೋರಿಸಿರುವಂಥ ಚಿತ್ರ ಇದು. ಚಿತ್ರ ಮುಗಿಯುವ ಮೊದಲು ಪ್ರತಿಯೊಬ್ಬರು ಕೂಡ ಕುರಿಗಾಹಿಗಳ ಬದುಕನ್ನು ಕಣ್ಣೆದುರು ಕಂಡ ಅನುಭವ ಪಡೆಯುತ್ತಾರೆ.
ಸಿದ್ದಪ್ಪ ನಿಷ್ಠೆಯಿಂದ ಕುರಿ ಕಾಯುವ ವ್ಯಕ್ತಿ. ಆತ ಕುರಿಗಳನ್ನು ತನ್ನ ಮಕ್ಕಳಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ಆದರೆ
ಸಿದ್ದಪ್ಪನಿಗೆ ತನ್ನ ಕಿರಿಯ ಮಗ ಬೀರನನ್ನು ಶಾಲೆ ಕಲಿಸಬೇಕೆಂಬ ಆಸೆಯಿರುತ್ತದೆ. ಗಾಳಿ ಮಳೆಗೆ ಮುರಿದ ಮನೆಯನ್ನು ಸರಿ ಪಡಿಸುವ ಜವಾಬ್ದಾರಿ ಮುಖ್ಯವಾಗುತ್ತದೆ. ಹಾಗಾಗಿ ಬೀರ ಕೂಡ ವಿದ್ಯಾಭ್ಯಾಸ ಇಲ್ಲದೆ ಬೆಳೆಯುತ್ತಾನೆ.
ಬೀರ ಯುವಕನಾಗುತ್ತಾನೆ. ಪ್ರೀತಿಸಿದ ಹುಡುಗಿಯನ್ನು ಕೈ ಹಿಡಿಯುತ್ತಾನೆ. ಎಲ್ಲವೂ ಸಾಂಗವಾಗಿ ಸಾಗುತ್ತಿರುವಾಗ ಒಂದು ದುರ್ಘಟನೆ ನಡೆಯುತ್ತದೆ. ಆ ಘಟನೆ ಏನು? ಅದೊಂದು ಘಟನೆ
ಕುರುಬ ಸಮುದಾಯದ ಸಂಕಷ್ಟಕ್ಕೆ ಹೇಗೆ ಕನ್ನಡಿಯಾಗಿ ಮೂಡಿದೆ ಎಂದು ತಿಳಿಯಬೇಕಾದರೆ ನೀವು ಅನಂತ ಪಯಣ ಚಿತ್ರ ನೋಡಬೇಕು.
ಚಿತ್ರದ ಶೀರ್ಷಿಕೆಯಂತೆ ಇದು ಅನಂತವಾದ ಪ್ರಯಾಣ. ಈ ಮುಗಿಯದ ಪ್ರಯಾಣದಲ್ಲಿ ಕುರಿಗಾಹಿಗಳು ಹೆಜ್ಜೆ ಹೆಜ್ಜೆಗೂ ಎದುರಿಸುವ ಸಮಸ್ಯೆಗಳನ್ನು ದೃಶ್ಯಗಳಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.
ಸ್ವತಃ ನಿರ್ದೇಶಿಸಿ ಬೀರನಾಗಿ ನಟಿಸಿರುವ ಶ್ರೀಕಾಕ ಅವರ ಅಭಿನಯ ಅದ್ಭುತವಾಗಿದೆ. ಹೊಸ ನಾಯಕ ಎನ್ನುವ ಭಾವ ಮೂಡದ ರೀತಿಯಲ್ಲಿ ನಟಿಸಿ ತೋರಿಸಿದ್ದಾರೆ. ಬೀರನ ಜೋಡಿ ಗೌರಿಯಾಗಿ ನಿವಿಷ್ಕಾ ಪಾಟೀಲ್ ಅಭಿನಯ ಕೂಡ ಆಪ್ತವೆನಿಸುತ್ತದೆ.
ಚಿತ್ರದ ತಾರಾಗಣದಲ್ಲಿ ಪ್ರಶಾಂತ್ ಸಿದ್ದಿ, ಸಂದೀಪ್ ನೀನಾಸಂ, ಮಂಜುನಾಥ ಹೆಗ್ಡೆ, ಅಪೂರ್ವ ಮೊದಲಾದವರು ನಟಿಸಿದ್ದಾರೆ. ಆದರೆ ಯಾವ ಕಲಾವಿದರು ಕೂಡ ಪಾತ್ರಗಳನ್ನು ಮೀರಿ ಹೋಗುವುದಿಲ್ಲ. ಸಂಗೀತಾ ಭಟ್ ಸ್ಪೆಷಲ್ ಡಾನ್ಸ್ ಮಾಡಿದ್ದಾರೆ.
ಉತ್ತಮ ಕಲಾವಿದರು, ಆಕರ್ಷಕ ಹಾಡುಗಳು, ಮನ ಮೋಹಕ ಛಾಯಾಗ್ರಹಣದಿಂದ ಕೂಡಿರುವ ಚಿತ್ರ ಇದು. ಮನರಂಜನೆ ಜತೆಗೆ ಒಂದೊಳ್ಳೆಯ ಸಂದೇಶ ನೀಡುವ ಚಿತ್ರವಾಗಿ ಅನಂತಪಯಣ ಎಲ್ಲರ ಗಮನ ಸೆಳೆಯುವುದರಲ್ಲಿ ಸಂದೇಹವೇ ಇಲ್ಲ.





Be the first to comment