“ಧರ್ಮ ಯಾವುದೇ ಇರಲಿ, ಪ್ರತಿಯೊಬ್ಬ ಭಾರತೀಯನ ರಕ್ತದಲ್ಲೂ ರಾಮ ಇದ್ದಾನೆ. ರಾಮ ಕೇವಲ ವ್ಯಕ್ತಿಯಲ್ಲ. ಅದೊಂದು ಜೀವನ ವಿಧಾನ ಮತ್ತು ನೈತಿಕತೆಯ ಸಂಕೇತ” ಎಂಬ ಗೀತರಚನೆಕಾರ ಜಾವೇದ್ ಅಖ್ತರ್ ಅವರ ಹೇಳಿಕೆ ವಿವಾದ ಸೃಷ್ಟಿಸಿದೆ.
ಜಾವೇದ್ ಅಖ್ತರ್ ಅವರ ಹೇಳಿಕೆಗೆ ಅಖಿಲ ಭಾರತ ಇಮಾಮ್ ಅಸೋಸಿಯೇಷನ್ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಾವೇದ್ ಅಖ್ತರ್ ಅವರ ಮಾತಿನ ಹಿಂದೆ ವಾಣಿಜ್ಯ ಉದ್ದೇಶವಿದೆ. ಸಾರ್ವಜನಿಕವಾಗಿ ನಾಸ್ತಿಕ ಎಂದು ಗುರುತಿಸಿಕೊಳ್ಳುವ ಅವರು ಈಗ ರಾಮನ ಬಗ್ಗೆ ಗೌರವದಿಂದ ಮಾತನಾಡುತ್ತಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.
“ನಿಮ್ಮ ಹೆಸರನ್ನು ಜಾವೇದ್ ಅಖ್ತರ್ ಬದಲಿಗೆ ರಾಮ್ ಪಾಲ್ ಎಂದು ಬದಲಿಸಿಕೊಳ್ಳಿ. ಆಗ ಹಿಂದೂಗಳಿಂದ ನಿಮಗೆ ಗೌರವ ಮತ್ತು ಮನ್ನಣೆ ಸಿಗಬಹುದು. ಬಾಲಿವುಡ್‌ನಲ್ಲಿ ಜಾವೇದ್ ಅಖ್ತರ್ ಹಾಡುಗಳು ಮಾರಾಟವಾಗುತ್ತವೆ. ಇಂತಹ ಹೇಳಿಕೆಗಳನ್ನು ನೀಡದಿದ್ದರೆ ಅವರ ಹಾಡುಗಳನ್ನು ಯಾರು ಖರೀದಿಸುತ್ತಾರೆ” ಎಂದು ವ್ಯಂಗ್ಯವಾಡಿದ್ದಾರೆ.
”ಜಾವೇದ್ ಅಖ್ತರ್ ವಿಭಿನ್ನ ಸೈದ್ಧಾಂತಿಕ ಗುಂಪುಗಳ ನಡುವೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅವರ ಕುಟುಂಬದ ಸದಸ್ಯರು ಚಿತ್ರರಂಗದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪರಸ್ಪರರ ಕೆಲಸವನ್ನು ಹೊಗಳುವುದು ವ್ಯವಹಾರದ ಭಾಗವಾಗಿದೆ” ಎಂದು ಆರೋಪಿಸಿದ್ದಾರೆ.
—-





Be the first to comment