ನಮಿತ್ ಮಲ್ಹೋತ್ರಾ ನಿರ್ಮಿಸಿದ ‘ರಾಮಾಯಣ’ ಮೊದಲ ಭಾಗದ ಬಜೆಟ್ 800 ಕೋಟಿ ಅಥವಾ ಅದಕ್ಕಿಂತ ಕಡಿಮೆ ಇರಬಹುದು ಎಂದು ರಾಮ್ ಗೋಪಾಲ್ ಹೇಳಿದ್ದಾರೆ.
‘ರಾಮಾಯಣ’ ಭಾಗ 1ರ ವೆಚ್ಚ 800 ಕೋಟಿಗಳಿಗಿಂತ ಸ್ವಲ್ಪ ಕಡಿಮೆ ಎಂದು ನಾನು ಭಾವಿಸುತ್ತೇನೆ. ಇದರಲ್ಲಿ ಪರಸ್ಪರ ಲಾಭದಾಯಕ ವ್ಯವಹಾರಗಳು, ಜಾಗತಿಕ ತೆರಿಗೆ ಪ್ರಯೋಜನಗಳು, ಸಬ್ಸಿಡಿಗಳು ಇತ್ಯಾದಿ ಸೇರಿವೆ. ನಾನು ಮಾತ್ರವಲ್ಲ ಯಾವುದೇ ಅನುಭವಿ ಸಿನಿಮಾ ನಿರ್ಮಾಪಕರು ಚಿತ್ರವನ್ನು ನೋಡಿದರೇ ಅದರ ವೆಚ್ಚ ಅದಕ್ಕಿಂತ ಹೆಚ್ಚಿಲ್ಲ ಎಂದು ಹೇಳಬಹುದು’ ಎಂದು ಹೇಳಿದ್ದಾರೆ.
‘ಎರಡೂ ಭಾಗಗಳ ನಿರ್ಮಾಣ ಬಜೆಟ್ ಒಂದೇ ಆಗಿರುತ್ತದೆ ಎಂದು ಊಹಿಸುವುದು ತಪ್ಪು. ಚಿತ್ರೀಕರಣಗೊಳ್ಳುತ್ತಿರುವ ದೃಶ್ಯಗಳ ಪ್ರಮಾಣವನ್ನು ಅವಲಂಬಿಸಿ ಚಿತ್ರದ ವಿವಿಧ ಭಾಗಗಳ ವೆಚ್ಚ ಬದಲಾಗಬಹುದು.ಅದ್ಧೂರಿ ಚಿತ್ರಗಳಲ್ಲಿ 50ರಷ್ಟನ್ನು ಬರೀ ಕ್ಲೈಮ್ಯಾಕ್ಸ್ಗೆ ಖರ್ಚು ಮಾಡಲಾಗುತ್ತದೆ. ಎರಡನೇ ಭಾಗ ಮೊದಲನೆಯದಕ್ಕಿಂತ 10 ಪಟ್ಟು ಹೆಚ್ಚು ಗಳಿಸುತ್ತದೆ’ ಎಂದು ಭವಿಷ್ಯ ನುಡಿದಿದ್ದಾರೆ.
‘ನಮಿತ್ ಮಲ್ಹೋತ್ರಾ ಇತಿಹಾಸದಲ್ಲಿ ಅತಿದೊಡ್ಡ ಮೆಗಾ ಚಲನಚಿತ್ರಗಳನ್ನು ನಿರ್ದೇಶಿಸುತ್ತಾರೆ. ಮೇ 3, 1913ರಂದು ಬಿಡುಗಡೆಯಾದ ‘ರಾಜ ಹರಿಶ್ಚಂದ್ರ’ದಿಂದ ನವೆಂಬರ್ 5, 2026 ರ ಮೊದಲು ಬಿಡುಗಡೆಯಾದ ಅತಿದೊಡ್ಡ ಚಿತ್ರವರೆಗೆ ಯಾರಿಗಾದರೂ ಯಾವುದೇ ಸಂದೇಹವಿದ್ದರೆ ಲೆಕ್ಕಾಚಾರ ಮಾಡಿ’ ಎಂದು ಹೇಳಿದ್ದಾರೆ.
ನಿತೇಶ್ ತಿವಾರಿ ನಿರ್ದೇಶಿಸಿದ ‘ರಾಮಾಯಣ’ ಬಾಕ್ಸ್ ಆಫೀಸ್ ನಲ್ಲಿ 1250 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಮುನ್ನುಗುತ್ತಿದೆ. ‘ರಾಮಾಯಣ’ ಎರಡು ಭಾಗಗಳ ಒಟ್ಟು ಬಜೆಟ್ 4,000 ಕೋಟಿ ಎಂದು ವರದಿಯಾಗಿದೆ.
—–





Be the first to comment